ಮಂಗಳೂರು : ಭಗವಾನ್ ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳ ಜೀವನವನ್ನು ಆಧರಿಸಿದ ‘ವರದಯೋಗಿ ಶ್ರೀಧರ’ ನಾಟಕವು ಜನವರಿ 3 ರಂದು ಸಂಜೆ 6:30 ರಿಂದ ಮಂಗಳೂರಿನ ಪುರಭವನದಲ್ಲಿ ಪ್ರದರ್ಶನ ನಡೆಯಲಿದೆ ಎಂದು ಆಯುಷ್ಮಾನ್ ಸ್ವಾಸ್ಥ್ಯ ಸೇವಾ ಟ್ರಸ್ಟ್ (ರಿ) ಮಂಗಳೂರು ಇದರ ಅಧ್ಯಕ್ಷರಾದ ಅರವಿಂದ್ ಭಟ್ ತಿಳಿಸಿದರು.
ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಆಯುಷ್ಮಾನ್ ಸ್ವಾಸ್ಥ್ಯ ಸೇವಾ ಟ್ರಸ್ಟ್ (ರಿ) ಮಂಗಳೂರು ಇವರ ಆಶ್ರಯದಲ್ಲಿ ಸಮಸ್ತ ಶ್ರೀಧರ ಭಕ್ತರ ಸಹಕಾರದೊಂದಿಗೆ ಈ ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಶ್ರೀ ಗಜಾನನ ಕಲೆ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಟ್ರಸ್ಟ್ (ರಿ) ಮೇಲಿನ ಮಣ್ಣಿಗೆ ತಾ। ಹೊನ್ನಾವರ ಎನ್ನುವ ಕಲಾತಂಡದ ವತಿಯಿಂದ ನಡೆಯುವ ಈ ನಾಟಕವು ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ. 50ಕ್ಕೂ ಅಧಿಕ ಕಲಾವಿದರು ನಟಿಸುವ ಈ ನಾಟಕದಲ್ಲಿನ ಅತಿ ಸುಂದರವಾದ ನೆರಳು ಬೆಳೆಕಿನ ಸುಸಜ್ಜಿತ ರಂಗಸಜ್ಜಿಕೆಯನ್ನು ನೋಡುವುದೇ ಒಂದು ಸಂತಸದ ಸಂಗತಿ ಎಂದು ಅವರು ತಿಳಿಸಿದರು .
ಸೇವಾ ಟ್ರಸ್ಟ್ ನ ಉದ್ಘಾಟನೆಯೂ ಇದೇ ದಿನಾಂಕದಂದು ನಡೆಯಲಿದ್ದು ಈ ಸಂದರ್ಭದಲ್ಲಿ ಸೇವಾ ಭಾರತಿ ಕನ್ಯಾಡಿ ಇವರ ಸಹಯೋಗದಲ್ಲಿ 10 ದಿವ್ಯಾಂಗರಿಗೆ ಮೆಡಿಕಲ್ ಕಿಟ್,ಸೆಲ್ಸ್ ಕೇರ್ ಕಿಟ್,ವಾಟರ್ ಬೆಡ್ ಮತ್ತು ವಾಕರ್ ವಿತರಿಸಲಾಗುವುದೆಂದು ತಿಳಿಸಿದರು .
ಪ್ರತಿಕಾಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ಹರೀಶ್ , ಗಣೇಶ್ ದತ್ತಾತ್ರೇಯ ಭಟ್ ಉಪಸ್ಥಿತರಿದ್ದರು .

