ಮಂಗಳೂರು : ಪಾಲ್ದಟ್ಟೆಡ್ ಬಂಟೆರೆ ಪರ್ಬ-2025 ಕಾರ್ಯಕ್ರಮವು ಡಿ 28 ರವಿವಾರ ಬಂಟರ ಸಂಘ ಬಜಪೆ ವಲಯದ ಆಶ್ರಯದಲ್ಲಿ ನಡೆಯಲಿರುವುದು.ಈ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರ ಪದಗ್ರಹಣ, ಬಂಟರ ಸಂಘಗಳ ಸಾಂಸ್ಕೃತಿಕ ಸ್ಪರ್ಧೆ , ಗೌರವ ಅಭಿನಂದನೆ, ವಿದ್ಯಾನಿಧಿಯ ಉದ್ಘಾಟನೆ, ಆರ್ಥಿಕ ಸಹಾಯಧನ ವಿತರಣಾ ಕಾರ್ಯಕ್ರಮವು ಬಜಪೆಯ ತಾರಿಕಂಬಳ ಬಂಟರ ಸಂಘದ ನಿವೇಶನದಲ್ಲಿ ನಡೆಯಲಿರುವುದು ಎಂದು ಸಂಘದ ಉಪಾಧ್ಯಕ್ಷರಾದ ಸುಕೇಶ್ ಶೆಟ್ಟಿ ಮುಂಡಾರುಗುತ್ತು ತಿಳಿಸಿದರು .
ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ ಬೆಳಿಗ್ಗೆ 10:30ಕ್ಕೆ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಶುರುವಾಗಲಿದ್ದು ಇದರ ಉದ್ಘಾಟನೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಇದರ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಮಾಡುವರು . ದೀಪ ಪ್ರಜ್ವಲನೆಯನ್ನು ಬಂಟರ ಯಾನೆ ನಾಡವರ ಮಾತೃ ಸಂಘ (ರಿ) ಮಂಗಳೂರು ಇದರ ಅಧ್ಯಕ್ಷರಾದ ಅಜಿತ್ ಕುಮಾರ್ ರೈ ಮಾಲಾಡಿ ನೆರವೇರಿಸುವರು , ಬಂಟರ ಸಂಘ (ರಿ.) ಬಜಪೆ ವಲಯ ಅಧ್ಯಕ್ಷರಾದ ಬಾಬು ಶೆಟ್ಟಿ ಪೆರಾರ ಅಧ್ಯಕ್ಷತೆಯನ್ನು ವಹಿಸಲಿರುವವರು , ಧ್ವಜಾರೋಹಣ ವಿಜಯನಾಥ ವಿಠಲ ಶೆಟ್ಟಿ ನೆರವೇರಿಸುವರು . ನೂತನ ಅಧ್ಯಕ್ಷರಾಗಿ ಕರಂಬಾರು ಪಡುಮನೆ ವೇಣುಗೋಪಾಲ್ ಎಲ್ ಶೆಟ್ಟಿಯವರ ಪದಗ್ರಹಣ ನಡೆಯಲಿದೆ . ಗೌರವ ಅಭಿನಂದನೆಯನ್ನು ಪೂನಾ ಬಂಟರ ಸಂಘದ ಅಧ್ಯಕ್ಷರಾದ ಅಜಿತ್ ಹೆಗ್ಡೆ ಕೆಂಜಾರುಗುತ್ತು , ಮುಡಾರೆ ಫೌಂಡೇಶನ್ (ರಿ) ಮಂಗಳೂರು ಇದರ ಅಧ್ಯಕ್ಷರಾದ ಸತೀಶ್ ಆಳ್ವ, , ಉದ್ಯಮಿಗಳಾದ ಗಣೇಶ್ ಬಾಳಿಗ ಇವರಿಗೆ ನೀಡಲಾಗುವುದು.ಈ ಸಂಧರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾದ ಕ್ಯಾ ಬ್ರಿಜೇಶ್ ಚೌಟ , ಶಾಸಕರಾದ ರಾಜೇಶ್ ನಾಯ್ಕ್ ,ಉಮಾನಾಥ್ ಕೋಟ್ಯಾನ್ ಸಹಿತ ಮುಂತಾದ ಮಂದಿ ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದರು.
ಸಂಜೆ 4:30ರಿಂದ ಸಮರೋಪ ಸಮಾರಂಭ ನಡೆಯಲಿದ್ದು ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಹೇರಂಬಾ ಇಂಡಸ್ಟ್ರೀಸ್ ಲಿಮಿಟೆಡ್, ಮುಂಬಯಿ ಇದರ ಆಡಳಿತ ನಿರ್ದೇಶಕರಾದ ಡಾ| ಕನ್ಯಾನ ಸದಾಶಿವ ಶೆಟ್ಟಿ ನೆರವೇಲಿಸುವರು .ಕಾರ್ಯಕ್ರಮದ ಉದ್ಘಾಟಕರಾಗಿ ಭವಾನಿ ಶಿಪ್ಪಿಂಗ್ ಕಾರ್ಪೊರೇಷನ್ ಲಿಮಿಟೆಡ್ ಮುಂಬೈ ಇದರ ಆಡಳಿತ ನಿರ್ದೇಶಕರಾದ ಕುಸುಮಾಧರ ಡಿ. ಶೆಟ್ಟಿ ಭಾಗವಹಿಸುವರು . ವಿದ್ಯಾನಿಧಿಯ ಉದ್ಘಾಟನೆಯನ್ನು ಶಶಿ ಕ್ಯಾಟರಿಂಗ್ ಸರ್ವಿಸಸ್ ಪ್ರೈ.ಲಿ.ಇದರ ನಿರ್ದೇಶಕರಾದ ಶಶಿಧರ ಶೆಟ್ಟಿ, ಬರೋಡ ನೆರವೇರಿಸುವರು .ಹೊಸಬೆಳಕು ಯೋಜನೆಯ ಫಲಾನುಭವಿಗಳಿಗೆ ಸಹಾಯಧನ ವಿತರಣೆಯನ್ನು ಯು.ಎ.ಇ. ಬಂಟರ ಸಂಘದ ಅಧ್ಯಕ್ಷರಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಮಾಡಲಿರುವರು .ಆಸರೆ ಯೋಜನೆಯ ಫಲಾನುಭವಿಗಳಿಗೆ ಸಹಾಯಧನ ವಿತರಣೆಯನ್ನು ಬಂಟರ ಸಂಘ (ರಿ.), ಮುಂಬಯಿ ಇದರ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ ಮಾಡಲಿರುವರು ,ಕರಂಬಾರು ಪಡುಮನೆ ವೇಣುಗೋಪಾಲ್ ಎಲ್ ಶೆಟ್ಟಿ ಈ ಸಮಯ ಅಧ್ಯಕ್ಷತೆಯನ್ನು ವಹಿಸಲಿರುವರು .ಗಣ್ಯರ ಸಮುಖದಲ್ಲಿ ಗೌರವ ಸನ್ಮಾನವನ್ನು ಎಂ ಆರ್ ಜಿ ಗ್ರೂಪ್ ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾ ಕೆ ಪ್ರಕಾಶ್ ಶೆಟ್ಟಿ ಮತ್ತು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ ಎಂ ಮೋಹನ್ ಆಳ್ವ ಸ್ವೀಕರಿಸುವರು. ಸನ್ಮಾನವನ್ನು ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಜಸ್ಟಿಸ್ ಎನ್ ಸಂತೋಷ್ ಹೆಗ್ಡೆ ನೆರವೇರಿಸುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಅಜಿತ್ ಕುಮಾರ್ ಶೆಟ್ಟಿ ,ಸದಸ್ಯರಾದ ಹರೀಶ್ ಶೆಟ್ಟಿ , ಭರತ್ ಶೆಟ್ಟಿ ಉಪಸ್ಥಿತರಿದ್ದರು .

