ಮಂಗಳೂರು : “We R CYCLING’ (WERC ಎಂದು ಕರೆಯಲ್ಪಡುವ) ಮಂಗಳೂರಿನಲ್ಲಿರುವ ವೃತ್ತಿಪರವಾಗಿ ನಿರ್ವಹಿಸಲ್ಪಡುವ ಕ್ರೀಡಾ ಕ್ಲಬ್ ಆಗಿದ್ದು, ಕರ್ನಾಟಕದ ಕರಾವಳಿ ಹಾಗೂ ಒಳನಾಡು ಪ್ರದೇಶಗಳ ಜನರಲ್ಲಿ ಆರೋಗ್ಯಕರ ಜೀವನಶೈಲಿಯ ಸಂಸ್ಕೃತಿಯನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ.

WORKOUTS, ENDURANCE & RACES ಎಂಬ ಮೂಲ ಮೌಲ್ಯಗಳೊಂದಿಗೆ, ಮನಸ್ಸು, ದೇಹ ಮತ್ತು ಆತ್ಮವನ್ನು ಸವಾಲು ಮಾಡುತ್ತಾ,ಎಲ್ಲರಿಗೂ ಆರೋಗ್ಯ ಮತ್ತು ಫಿಟ್ನೆಸ್ ಎಂಬ ಮಹತ್ತಾದ ಗುರಿಯನ್ನು ಸಾಧಿಸುವತ್ತ ನಾವು ಕೆಲಸ ಮಾಡುತ್ತಿದ್ದೇವೆ. ಇದರಿಂದ ಆರೋಗ್ಯಕರ, ಫಿಟ್ ಮತ್ತು ಸಂತೋಷದ ಜೀವನವನ್ನು ವಾಸ್ತವಗೊಳಿಸುವುದು ನಮ್ಮ ಉದ್ದೇಶವಾಗಿದೆ, ಈ ಪ್ರಯುಕ್ತ ಪರಂಪರೆಯನ್ನು ಮುಂದುವರೆಸುತ್ತಾ, ಶಾಲಾ ಮಕ್ಕಳಿಗೂ ಅವರ ಪೋಷಕರಿಗೂ ಸೈಕ್ಲಿಂಗ್ ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಇದೇ ಭಾನುವಾರ, 21 ರಂದು” ಐಡಿಯಲ್ ಮಂಗಳೂರು ಸೈಕ್ಲೋತೊನ್ -2025′ ಎಂಬ ವಿಶಿಷ್ಟ ಸೈಕ್ಲಿಂಗ್ ರ್ಯಾಲಿಯನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಸರ್ವೇಶ್ ಸಮಾಗ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಈ ಕಾರ್ಯಕ್ರಮಕ್ಕೆ ಐಡಿಯಲ್ ಐಸ್ ಕ್ರೀಮ್ ಮುಖ್ಯ ಪ್ರಾಯೋಜಕರಾಗಿದ್ದು, ತಾಜ್ ಸೈಕಲ್ ಕಂಪನಿ ಮತ್ತು ಕಶ್ರಫ್ ಫಿಟ್ನೆಸ್ ಹಾಗೂ ಗ್ರಾಹಿನಿ ಮಸಾಲ ಸಹ-ಪ್ರಾಯೋಜಕರಾಗಿದ್ದಾರೆ.
ನೋಂದಾಣಿಯು ಆನ್ಲೈನ್ ಮೂಲಕ ನೊಂದಾಯಿಸಲು ಅವಕಾಶವಿದ್ದು www.wercycling.com ಸಂಪರ್ಕಿಸ ಬಹುದು, ನೋಂದಣಿ ಶುಲ್ಕ.20 ರೂ ಆಗಿದೆ, ಬೆಳಗ್ಗೆ 7:15 ರ್ಯಾಲಿಯು ಮಂಗಳಾ ಕ್ರೀಡಾಂಗಣದಿಂದ ಪ್ರಾರಂಭ ಆಗಲಿದ್ದು ನಂತರ ಲೇಡಿಹಿಲ್, ಸಿಟಿ ಕಾರ್ಪೊರೇಷನ್, ಎಂ.ಜಿ.ರೋಡ್ ಮಾರ್ಗವಾಗಿ ಕೆನರಾ ಕಾಲೇಜು, ಜೈಲ್ ರಸ್ತೆ,ಕರಂಗಲ್ಪಾಡಿ ರಸ್ತೆಯಾಗಿ ಪಿವಿಎಸ್, ಮತ್ತು ಎಂಜಿ ರೋಡ್ ಮೂಲಕ ಸುಮಾರು ಬೆಳಗ್ಗೆ 8:30ರ ವೇಳೆಗೆ ಉರ್ವಾ ಗ್ರೌಂಡ್ನ ಕೆನರಾ ಶಾಲೆಯಲ್ಲಿ ಸಮಾಪ್ತಿಯಾಗಲಿದೆ ಎಂದರು.

ಎಲ್ಲಾ ಭಾಗವಹಿಸುವವರಿಗೆ ಉಪಹಾರ ಒದಗಿಸಲಾಗುತ್ತದೆ.ನೋಂದಾಯಿತ ಭಾಗವಹಿಸುವವರಿಗೆ ಸೈಕಲ್ ಗೆಲ್ಲುವ ಅವಕಾಶವಿರುವ ಲಕ್ಕಿ ಡ್ರಾ ಸಹ ನಡೆಯಲಿದೆ. ಈ ರ್ಯಾಲಿಗೆ 1000ಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದ್ದು, WERC ಸ್ವಯಂಸೇವಕರು ಮತ್ತು ಮಂಗಳೂರು ನಗರ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯ ಸಹಕಾರದಿಂದ ಎಲ್ಲರ ಸುರಕ್ಷತೆಯನ್ನು ಖಚಿತಪಡಿಸಲಾಗುತ್ತದೆ. ತುರ್ತು ಪರಿಸ್ಥಿತಿಗಳಲ್ಲಿ ಸಹಾಯ ಮಾಡಲು ಎ.ಜೆ ಆಸ್ಪತ್ರೆಯಿಂದ ಪ್ರಥಮ ಚಿಕಿತ್ಸಾ ಹಾಗೂ ಆಂಬ್ಯುಲೆನ್ಸ್ ಸೇವೆ ಒದಗಿಸಲಾಗುತ್ತದೆ.ಯಾವುದೇ ತಾಂತ್ರಿಕ ತೊಂದರೆಯ ಸಂದರ್ಭದಲ್ಲಿ ಸಹಾಯ ಮಾಡಲು ತಾಜ್ ಸೈಕಲ್. ಕಂ ಯಿಂದ ಬ್ಯಾಕಪ್ ವಾಹನ ವ್ಯವಸ್ಥೆ ಮಾಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹರ್ಣೀಶ್ ರಾಜ್
,ಮೂವಿನ್, ಶ್ಯಾಮ್ ಪ್ರಸಾದ್ ನಾಯಕ್, ಅಶೋಕ್ ಲೋಬೋ ಮುಂತಾದವರು ಉಪಸ್ಥಿತರಿದ್ದರು

