ಅಬುಧಾಬಿ : ಶುಕ್ರವಾರ ಮರುಭೂಮಿ ರಾಷ್ಟ್ರವನ್ನು ಅಪ್ಪಳಿಸಿದ ಭೀಕರ ಮಳೆಯಿಂದಾಗಿ ದುಬೈ, ಶಾರ್ಜಾದ, ರಾಸ್ ಅಲ್ ಖೈಮಾದ ಪ್ರಮುಖ ನಗರಗಳ ರಸ್ತೆಗಳು ನೀರಿನಿಂದ ತುಂಬಿ ತುಳುಕುತ್ತಿದ್ದು. ಕೆಲವು ಪ್ರದೇಶಗಳಲ್ಲಿ ಕ್ರತಕ ಪ್ರವಾಹ ಉಂಟಾಗಿದೆ.ಹಲವಾರು ತಗ್ಗು ಪ್ರದೇಶಗಳು ಮುಳುಗಡೆಯಾಗಿವೆ,

ಕರಾಮಾ ಮತ್ತು ಅಲ್ ಬರ್ಷಾದಂತಹ ಪ್ರದೇಶಗಳಲ್ಲಿ ಕಾರುಗಳು ಪ್ರವಾಹಕ್ಕೆ ಸಿಲುಕಿದ ರಸ್ತೆಗಳಲ್ಲಿ ಸಿಲುಕಿಕೊಂಡಿವೆ. ಶಾರ್ಜಾ, ಅಜ್ಮಾನ್ ಮತ್ತು ರಾಸ್ ಅಲ್ ಖೈಮಾದಿಂದಲೂ ಇದೇ ರೀತಿಯ ದೃಶ್ಯಗಳು ವರದಿಯಾಗಿವೆ,

ನಿನ್ನೆ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಗುಡುಗು ಮಿಂಚಿನ ಅಬ್ಬರವು ಬಹಳ ಜೋರಾಗಿದ್ದು ಯುಎಇ ಯ ಪ್ರಮುಖ ರಸ್ತೆಗಳು ಜಲಾವ್ರತವಾಗಿತ್ತು. ರಾಸ್ ಅಲ್ ಖೈಮಾದಲ್ಲಿ ಭಾರೀ ಮಳೆಯಿಂದಾಗಿ ತಡೆಗೋಡೆ ಕುಸಿದು 27 ವರ್ಷದ ಭಾರತೀಯ ಮೂಲದ ಕೇರಳದ ಸಲ್ಮಾನ್ ಫಾರಿಜ್ ಪ್ರಾಣ ಕಳೆದುಕೊಂಡರು.ಫುಜೈರಾ ಕಡೆಗೆ ಹೋಗುತ್ತಿದ್ದ ವಾಹನವೊಂದು ಗುಡ್ಡ ಕುಸಿತದಿಂದಾಗಿ ಉರುಳಿ ಬಿದ್ದಿದೆ ವಾಹನ ಚಾಲಕನನ್ನು ಪುಜೈರಾ ಆಸ್ಪತ್ರೆಗೆ ಸೇರಿಸಲಾಗಿದೆ.

ಶುಕ್ರವಾರ ಮುಂಜಾನೆ ದುಬೈನಲ್ಲಿ ಸುತ್ತಮುತ್ತ ನೀರು ಪಂಪ್ ಮಾಡುವ ಟ್ರಕ್ಗಳು ಮುಚ್ಚಿ ಹೋದ ರಸ್ತೆಯನ್ನು ತೆರವುಗೊಳಿಸುತ್ತಿರುವುದು ಕಂಡು ಬಂದಿತ್ತು. ಈ ದ್ರಶ್ಯವು ಎಪ್ರಿಲ್ 2024ರ ನೆನಪನ್ನು ಮರುಕಳಿಸಿತು,ದುಬೈನ ಪ್ರಮುಖ ಅಂತರಾಷ್ಟ್ರೀಯ ವಾಯುಕೇಂದ್ರದಲ್ಲಿ 2000ಕ್ಕೂ ಹೆಚ್ಚಿನ ವಿಮಾನವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಯಿತು. ನೆರೆಯ ಶಾರ್ಜಾ ವಿಮಾನ ನಿಲ್ದಾಣದಲ್ಲಿಯೂ ಸಹ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಕೆಲವು ವಿಮಾನಗಳು ಪ್ರತಿಕೂಲ ಹವಾಮಾನದಿಂದಾಗಿ ರದ್ದಾಗಿವೆ ಮತ್ತು ವಿಳಂಬವಾಗಿವೆ,

ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಮಿಂಚು ಮತ್ತು ಗುಡುಗಿನ ಜೋರಾದ ಸದ್ದು ಕೇಳಿ ನಿವಾಸಿಗಳು ಎಚ್ಚರಗೊಂಡರು.ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಜನರು ಜಾಗರೂಕರಾಗಿರಬೇಕು ಎಂದು ಅಧಿಕಾರಿಗಳು ಒತ್ತಾಯಿಸಿದ್ದಾರೆ.

ಡಿಸೆಂಬರ್ 21 ಶನಿವಾರವೂ ಆಕಾಶವು ಮೋಡ ಕವಿದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಕರಾವಳಿ, ಉತ್ತರ ಮತ್ತು ಪೂರ್ವ ಪ್ರದೇಶಗಳಲ್ಲಿ ಮಳೆ ಬೀಳಬಹುದು. ಗಾಳಿಯು ಗಂಟೆಗೆ 10-25 ಕಿ.ಮೀ ನಿಂದ 50 ಕಿ.ಮೀ ವೇಗದಲ್ಲಿ ಬೀಸಬಹುದು. ಸಮುದ್ರವು ಪ್ರಕ್ಷುಬ್ಧ ಅಥವಾ ಮಧ್ಯಮವಾಗಿರಬಹುದು.

ಯಾವುದೇ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ದುಬೈ ಅಧಿಕಾರಿಗಳು 24/7 ತುರ್ತು ಪ್ರತಿಕ್ರಿಯೆ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದ್ದಾರೆ.ವಾರಾಂತ್ಯದಲ್ಲಿ ಅನಿವಾರ್ಯವಲ್ಲದ ಪ್ರಯಾಣವನ್ನು ತಪ್ಪಿಸಲು ನಿವಾಸಿಗಳಿಗೆ ಸೂಚಿಸಲಾಗಿದೆ.

ಹವಾಮಾನ ವೈಪರೀತ್ಯದಿಂದಾಗಿ ಅನೇಕ ಕಚೇರಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು (WFH) ಅವಕಾಶ ಮಾಡಿಕೊಟ್ಟಿವೆ.






