ಮಂಗಳೂರು : ಕರಾವಳಿ ಉತ್ಸವದ ಅಂಗವಾಗಿ ಡಿ.20 ರಿಂದ ಜನವರಿ 4 ರ ತನಕ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರವು ಹಲವು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಕಾಂಬೋ ಪ್ಯಾಕ್ ಪ್ರವೇಶ ಶುಲ್ಕ 50 ಶೇಕಡಾ ರಿಯಾಯಿತಿಯನ್ನು ನೀಡಿದ್ದು ಈ ಹಿಂದೆ ರೂ 250 ಇದ್ದ ದರವು 125 ರೂ ನಿಗದಿ ಮಾಡಲಾಗಿದೆ ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಡಳಿತ ನಿರ್ದೇಶಕರಾದ ಡಾ. ಅರುಣ್ ಕುಮಾರ್ ಶೆಟ್ಟಿ ತಿಳಿಸಿದರು.

ಅವರು ಪಿಲಿಕುಳದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡಿ 20 ರಿಂದ ಜನವರಿ 4 ರವರೆಗೆ ಸ್ಟೇಟ್ ಬ್ಯಾಂಕ್ ನಿಂದ ಪಿಲಿಕುಳಕ್ಕೆ ಮತ್ತು ಪಿಲಿಕುಳದಿಂದ ಸ್ಟೇಟ್ ಬ್ಯಾಂಕ್ ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಒಟ್ಟು 24 ಟ್ರಿಪ್ ಬಸ್ಗಳ ನಿಗದಿ ಮಾಡಲಾಗಿದ್ದು ಇದು ಪ್ರವಾಸಿಗರಿಗೆ ಸಹಕಾರಿಯಾಗಲಿದೆ.

ಆಯಾ ದಿನಾಂಕದಂದು ಇಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರೈತ ಕುಡ್ಲ ಪ್ರತಿಷ್ಠಾನದ ಸಹಯೋಗದಲ್ಲಿ ಪಿಲಿಕುಳ ಪರ್ಬ, ಕುಂಬಾರಿಕೆ ಪ್ರದರ್ಶನ, ವಿಜ್ಞಾನ ,ಮನೋರಂಜನೆ ಸಹಿತ ಮುಂತಾದ ಕಾರ್ಯಕ್ರಮಕ್ಕೆ ದಿನವನ್ನು ನಿಗದಿ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಇಲ್ಲಿನ ಮ್ರಗಾಲಯದಲ್ಲಿ ಹುಲಿಯೊಂದು 2 ಮರಿಗೆ ಜನ್ಮ ನೀಡಿದ್ದು.ಹೆಣ್ಣು ಹುಲಿಗೆ ಟೆನಿಸಾನ್ ಎಂದು ಗಂಡು ಹುಲಿಗೆ ಓಲಿವರ್ ಎಂದು ಹೆಸರನ್ನು ಇಡಲಾಗುವುದು.ಈ ಹುಲಿ ಮರಿಯನ್ನು ಒಂದು ವರುಷದ ಮಟ್ಟಿಗೆ ದತ್ತನ್ನು ಈಗಾಗಲೇ ಪ್ರತಿಷ್ಠಿತ ಸಂಸ್ಥೆ ಪಡೆದಿದೆ ಎಂದರು.
ಕರಾವಳಿ ಉತ್ಸವ ಸಂದರ್ಭದಲ್ಲಿ ಪಿಲಿಕುಳ ಅಭಿವೃದ್ಧಿ ಆಗಬೇಕ್ಕೇನುವ ಉದ್ದೇಶದಿಂದ ಈ ಮಹತ್ವದ ಯೋಜನೆಯನ್ನು ಕೈಗೊಳ್ಳಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರು ಡಾ. ಕೆ. ವಿ. ರಾವ್, ರಾಜೇಶ್ವರಿ. ಕೆ.ಎಂ, ಭಾಸ್ಕರ್ ಎಂ. ಪೆರುವಾಯಿ, ಸುಚಿತ್ರಾ, ಶಿವರಾಮ್, ರೈತ ಕುಡ್ಲ ಪ್ರತಿಷ್ಠಾನದ ಸದಸ್ಯರು, ಪುತ್ತೂರಿನ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಸದಸ್ಯರು, ಉಪಸ್ಥಿತರಿದ್ದರು.

