ಮಂಗಳೂರು : ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ದಕ್ಷಿಣ ಕನ್ನಡ ಹಾಗೂ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು,ಎಡಪದವು ಇದರ ಜಂಟಿ ಆಶ್ರಯದಲ್ಲಿ ಪದವಿ ಪೂರ್ವ ವಿಭಾಗದ ವಿದ್ಯಾರ್ಥಿಗಳ 19 ವರ್ಷ ವಯೋಮಾನದ ಬಾಲಕ ಹಾಗೂ ಬಾಲಕಿಯರ ರಾಷ್ಟ್ರ ಮಟ್ಟದ ನೆಟ್ ಬಾಲ್ ಪಂದ್ಯಾಟವು ದಿನಾಂಕ:25 ರಿಂದ 30ರ ವರೆಗೆ ಸೌಟ್ ಎಂಡ್ ಗೈಡ್ಸ್ ಭವನ, ಪಿಲಿಕುಲ, ವಾಮಂಜೂರು ಇಲ್ಲಿ ನಡೆಯಲಿರುವುದು.ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ವೈ.ಭರತ್ ಶೆಟ್ಟಿಯವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು

ಈ ಪಂದ್ಯಾಟದಲ್ಲಿ ಸುಮಾರು 1350 ಕ್ರೀಡಾಪಟುಗಳು, ತಂಡದ ವ್ಯವಸ್ಥಾಪಕರು, ರಾಜ್ಯ ಅಂತರಾಜ್ಯ ನಿರ್ಣಾಯಕರು, ಸ್ವಯಂ ಸೇವಕರು, ಇಲಾಖಾ ಪ್ರತಿನಿಧಿಗಳು,ಅಧಿಕಾರಿಗಳು ಹಾಗೂ ಗೌರವಾನ್ವಿತ ಜನಪ್ರತಿನಿಧಿಗಳು ಸೇರಿ ಸುಮಾರು 2000 ಜನ ಪ್ರತಿದಿನ ಭಾಗವಹಿಸಲಿರುವರು. ಭಾಗವಹಿಸುವ ಎಲ್ಲರಿಗೂ ಉತ್ತಮ ಗುಣಮಟ್ಟದ ಊಟೋಪಚಾರ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು. ಪಂದ್ಯಾಟದ ಯಶಸ್ವಿಗೆ ಜಿಲ್ಲೆಯ ಪ್ರಾಂಶುಪಾಲರುಗಳ ಹಾಗೂ ದೈಹಿಕ ಶಿಕ್ಷಣ ಉಪನ್ಯಾಸಕರುಗಳ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಈ ಪಂದ್ಯಾಟವು ದಿನಾಂಕ:25 ನೇ ಗುರುವಾರ ಸಂಜೆ ಗಂಟೆ 3ಕ್ಕೆ ಸರಿಯಾಗಿ ನಡೆಯಲಿದ್ದು, ಸಮಾರಂಭದ ಘನ ಉಪಸ್ಥಿತಿಯನ್ನು ಶ್ರೀ ಯು.ಟಿ.ಖಾದರ್ ಫರೀದ್, ಸಭಾಧ್ಯಕ್ಷರು, ಕರ್ನಾಟಕ ಸರಕಾರ ಇವರು ವಹಿಸಲಿದ್ದು, ಉದ್ಘಾಟನೆಯನ್ನು ಶ್ರೀ ದಿನೇಶ್ ಗುಂಡೂರಾವ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು, ಇವರು ನೆರವೇರಿಸಲಿರುವರು. ಪಥ ಸಂಚಲನದ ಗೌರವ ಸ್ವೀಕಾರವನ್ನು ಶ್ರೀ ಮಧು ಬಂಗಾರಪ್ಪ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು, ಕರ್ನಾಟಕ ಸರಕಾರ ಇವರು ಸ್ವೀಕರಿಸಲಿದ್ದು, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ವೈ.ಭರತ್ ಶೆಟ್ಟಿ ಇವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಬ್ರಿಜೇಶ್ ಚೌಟ, ಸಂಸದರು ಮಂಗಳೂರು, ಡಾ.ಡಿ.ವೀರೇಂದ್ರ ಹೆಗ್ಗಡೆ,ರಾಜ್ಯ ಸಭಾ ಸದಸ್ಯರು, ಕೇಂದ್ರ ಸರಕಾರ, ಶ್ರೀ ಉಮಾನಾಥ ಕೋಟ್ಯಾನ್,ಶ್ರೀ ಡಿ. ವೇದವ್ಯಾಸ ಕಾಮತ್, ಶಾಸಕರು, ಮಂಗಳೂರು ವಿಧಾನ ಸಭಾ ಕ್ಷೇತ್ರ, ಶ್ರೀ ಹರೀಶ್ ಪೂಂಜಾ, ಶಾಸಕರು, ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ, ಶ್ರೀ ರಾಜೇಶ್ ನಾಯ್ಕ ಯು, ಶಾಸಕರು, ಬಂಟ್ವಾಳ ವಿಧಾನ ಸಭಾ ಕ್ಷೇತ್ರ, ಶ್ರೀ ಅಶೋಕ್ ಕುಮಾರ್ ರೈ,ಶಾಸಕರು, ಪುತ್ತೂರು ವಿಧಾನ ಸಭಾ ಕ್ಷೇತ್ರ, ಕುಮಾರಿ ಭಾಗೀರಥಿ ಮುರುಳ್ಯ, ಶಾಸಕರು, ಸುಳ್ಯ ವಿಧಾನ ಸಭಾ ಕ್ಷೇತ್ರ, ಶ್ರೀ ಮಂಜುನಾಥ ಭಂಡಾರಿ, ವಿಧಾನ ಪರಿಷತ್ ಸದಸ್ಯರು, ಶ್ರೀ ಭೋಜೇಗೌಡ,ವಿಧಾನ ಪರಿಷತ್ ಸದಸ್ಯರು, ಡಾ. ಧನಂಜಯ ಸರ್ಜಿ,ವಿಧಾನ ಪರಿಷತ್ ಸದಸ್ಯರು, ಶ್ರೀ ಕಿಶೋರ್ ಕುಮಾರ್, ವಿಧಾನ ಪರಿಷತ್ ಸದಸ್ಯರು ಇವರುಗಳು ಭಾಗವಹಿಸಲಿರುವರು.

ಈ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮಾನ್ಯ ಶ್ರೀ ದರ್ಶನ್ ಎಚ್.ಎ, ಐ.ಎ.ಎಸ್, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಬೆಂಗಳೂರು ಇದರ ಮಾನ್ಯ ನಿರ್ದೆಶಕರಾದ ಶ್ರೀ ಭರತ್ ಎಸ್., ಐ.ಎ.ಎಸ್, ಶ್ರೀ ಎನ್ ರಾಜು, ಜಂಟಿ ನಿರ್ದೆಶಕರು (ಶೈಕ್ಷಣಿಕ) , ಶ್ರೀಮತಿ ರಾಜೇಶ್ವರಿ ಹೆಚ್ ಹೆಚ್, ಉಪನಿರ್ದೆಶಕರು,
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ದ.ಕ.ಜಿಲ್ಲೆ, ಶ್ರೀ.ಕೆ.ಎನ್ ಶಿವಮಾದಯ್ಯ, ಸಹಾಯಕ ನಿರ್ದೇಶಕರು, ಕ್ರೀಡಾ ವಿಭಾಗ, ಶಾಲಾ ಶಿಕ್ಷಣ ಇಲಾಖೆ. ಬೆಂಗಳೂರು ಹಾಗೂ ಅತಿಥೇಯ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು, ಎಡಪದವು ಇದರ ಸಂಚಾಲಕರಾದ ಡಾ.ಯಂ.ಮೋಹನ ಆಳ್ವ ಇವರು ಭಾಗವಹಿಸಲಿರುವರು,
ಪಂದ್ಯಾಟವು ದಿನಾಂಕ:25 ರಂದು ನಡೆಯಲಿದ್ದು, ಮೊದಲಿಗೆ ಲೀಗ್ ಹಾಗೂ ನಂತರದಲ್ಲಿ ನಾಕ್ ಅವ್ ಪಂದ್ಯಾಟ ನಡೆಯಲಿರುವುದು.

ದಿನಾಂಕ:29 ರಂದು ಫೈನಲ್ ಪಂದ್ಯಾಟ ನಡೆಯಲಿದ್ದು, ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಟ್ರೋಫಿಯೊಂದಿಗೆ ಗೌರವಿಸಲಾಗುವುದು. ವೈಯಕ್ತಿಕ ಬಹುಮಾನಗಳನ್ನು ನೀಡಲಾಗುವುದು. ರಾಜ್ಯ ಮಟ್ಟದ ನೆಟ್ ಬಾಲ್ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಹಿಳೆಯರ ತಂಡ ಪ್ರಥಮ ಸ್ಥಾನ ಗಳಿಸಿ, ರಾಜ್ಯಮಟ್ಟದ ತಂಡವನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆಯ ವಿಷಯವಾಗಿರುತ್ತದೆ. ಪಂದ್ಯಾಟ ನಡೆಯುವ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿರುವುದು
ಸಮಾರೋಪ ಸಮಾರಂಭವು ದಿನಾಂಕ: 29 ರಂದು ಸಂಜೆ 3 ಗಂಟೆಗೆ ಸರಿಯಾಗಿ ನಡೆಯಲಿರುವುದು. ಈ ಸಮಾರಂಭದಲ್ಲಿ ಶಾಸಕರಾದ ಡಾ.ವೈ, ಭರತ್ ಶೆಟ್ಟಿ, ಡಾ.ಯಂ.ಮೋಹನ ಆಳ್ವ, ಶ್ರೀ ಐವನ್ ಡಿಸೋಜ, ಶ್ರೀ ಪ್ರತಾಪಸಿಂಹ, ರೋಟರಿ ಡಾ.ಶಿವಪ್ರಸಾದ್ ಕೆ, ಡಾ.ನವೀನ್ ಶೆಟ್ಟಿ, ಪ್ರಾಂಶುಪಾಲರು, ಅಧ್ಯಕ್ಷರು, ದ.ಕ.ಜಿಲ್ಲಾ ಪ್ರಾಂಶುಪಾಲರ ಸಂಘ ಶ್ರೀ. ಬಸವರಾಜ್ ಟಿ.ಆರ್, ಶ್ರೀ ಚೌಡಪ್ಪ, ಶ್ರೀ ರಾಧಾಕೃಷ್ಣ ಗೌಡ ಮತ್ತು ಶ್ರೀಮತಿ ಲಿಲ್ಲಿ ಪಾಯಸ್ ಇವರುಗಳು
ಭಾಗವಹಿಸಲಿರುವರು.
ಪತ್ರಿಕಾಗೋಷ್ಠಿಯಲ್ಲಿ ಮುರಳೀಧರ ಶೆಟ್ಟಿ, ಶ್ರೀಮತಿ ಗಾಯತ್ರಿ, ಪ್ರೇಮನಾಥ ಶೆಟ್ಟಿ,ರಾಜೇಶ್ವರಿ ಉಪಸ್ಥಿತರಿದ್ದರು.

