ಧಾರವಾಡ : ಬೆಂಗಳೂರಿನ ಕರ್ನಾಟಕ ರಾಜ್ಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಹಾಗೂ ಕೋಲಾರ ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಜಂಟಿ ಆಶ್ರಯದಲ್ಲಿ ಕೋಲಾರದ ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಂಗಣದಲ್ಲಿ ಇತ್ತೀಚೆಗೆ ಜರುಗಿದ 44ನೆಯ ರಾಜ್ಯ ಮಟ್ಟದ ಮಾಸ್ರ್ಸ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಇಲ್ಲಿಯ ಚೆನ್ನಬಸವೇಶ್ವರನಗರ ನಿವಾಸಿ, 74 ವರ್ಷದ ನಿವೃತ್ತ ಅಧ್ಯಾಪಕಿ ಚೆನ್ನಮ್ಮ ಹೆಡೆ ಬೈಲೂರ 2 ಚಿನ್ನದ ಪದಕಗಳನ್ನು ಪಡೆದಿದ್ದಾರೆ.

70 ವರ್ಷ ಮೇಲ್ಪಟ್ಟ ವಯೋಮಾನದ ಮಹಿಳೆಯರ ವಿಭಾಗದ ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ 14.58 ಮೀಟರ್ ದೂರ ಭರ್ಚಿ ಎಸೆದು ಪ್ರಥಮ ಸ್ಥಾನ ಪಡೆದರು. ಇದೇ ವಿಭಾಗದ ಟ್ರಿಪ್ಪಲ್ ಜಂಪ್ ಸ್ಪರ್ಧೆಯಲ್ಲಿಯೂ ಪ್ರಥಮರಾಗಿ ಎರಡೂ ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡರು. ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಡಿ. ಡೇವಿಡ್ ಪ್ರೇಮನಾಥ ಪದಕ ಮತ್ತು ಪ್ರಮಾಣಪತ್ರ ವಿತರಿಸಿದರು.






