ಚೀನ : ಎರಡು ವರ್ಷಗಳ ನಿರಂತರ ವಾಸ್ತವ್ಯದ ನಂತರ ಹೋಟೆಲ್ ಕೊಠಡಿಯಿಂದ ಹೊರಗೆ ಹೋದ ಅತಿಥಿಯೊಬ್ಬರ ಕೋಣೆಯನ್ನು ಕಂಡು ಹೊಟೇಲ್ ಸಿಬ್ಬಂದಿಗಳು ಆಶ್ಚರ್ಯ ಚಕಿತರಾದರು.

ಕಸ, ತ್ಯಾಜ್ಯ ಮತ್ತು ವಿಪರೀತ ಕೊಳಕಿನ ಅಡಿಯಲ್ಲಿ ಹೂತುಹೋಗಿರುವ ಕೋಣೆಯನ್ನು ಕಂಡು ಹೋಟೆಲ್ ಸಿಬ್ಬಂದಿಗಳಿಗೆ ಆಶ್ಚರ್ಯ ಉಂಟಾಯಿತು.ವರದಿಗಳ ಪ್ರಕಾರ, ಅತಿಥಿ ಗೇಮಿಂಗ್ ವ್ಯಸನಿಯಾಗಿದ್ದು, ತನ್ನ ವಾಸ್ತವ್ಯದ ಸಮಯದಲ್ಲಿ ಕಳೆದ ಎರಡು ವರ್ಷಗಳಿಂದ ಆತ ಕೊಠಡಿಯಿಂದ ಹೊರಬಂದಿಲ್ಲ.
ಅತಿಥಿಯ ನಿರ್ಗಮನದ ನಂತರ ಮನೆಗೆಲಸದ ಸಿಬ್ಬಂದಿ ಕೋಣೆ ಒಳಗೆ ಪ್ರವೇಶಿಸಿದಾಗ,ಅವರಿಗೆ ಬಳಸಿದ ಟಾಯ್ಲೆಟ್ ಪೇಪರ್, ಆಹಾರ ಪ್ಯಾಕೇಜಿಂಗ್ ಮತ್ತು ಸಾಮಾನ್ಯ ತ್ಯಾಜ್ಯ ಸೇರಿದಂತೆ ಕಸದ ರಾಶಿ ರಾಶಿ ಬೆಟ್ಟದಂತೆ ಇರುವುದನ್ನು ಅವರು ಕಂಡರು. ಕೋಣೆಯ ಬಹುತೇಕ ಎಲ್ಲಾ ಭಾಗಗಳು ಕಸದಿಂದ ಆವೃತವಾಗಿದ್ದವು.
ಸ್ನಾನಗೃಹದ ಪರಿಸ್ಥಿತಿಯು ಅತ್ಯoತ ಭಯಾನಕ ಸ್ಥಿತಿಯಲ್ಲಿತ್ತು, ಶೌಚಾಲಯಗಿಂತ ಟಾಯ್ಲೆಟ್ ಪೇಪರ್ನ ರಾಶಿ ಮೇಲಕ್ಕೆ ಏರಿತ್ತು, ಇದು ತುಂಬಾ ಅನೈರ್ಮಲ್ಯದಿಂದ ಕೂಡಿದ್ದು ಕೊಣೆಗಳಲ್ಲಿ ಸಂಗ್ರಹವಾದ ತ್ಯಾಜ್ಯದಿಂದ ಒಂದು ಟೇಬಲ್ ಮತ್ತು ಎರಡು ಗೇಮಿಂಗ್ ಕುರ್ಚಿಗಳು ಸಂಪೂರ್ಣವಾಗಿ ಆವರಿಸಲ್ಪಟ್ಟಿದ್ದು ಇಡೀ ಕೋಣೆ ಗಬ್ಬುನಾತದಿಂದ ಉಸಿರು ಗಟ್ಟಿಸುವಂತಿತ್ತು

ಬ್ರಿಟಿಷ್ ಮಾಧ್ಯಮ ಸಂಸ್ಥೆ ದಿ ಸನ್ ಆರಂಭದಲ್ಲಿ ಘಟನೆಯ ವೀಡಿಯೊವನ್ನು ಹಂಚಿಕೊಂಡಿದೆ. ಹೋಟೆಲ್ ಇ-ಸ್ಪೋರ್ಟ್ಸ್ ಆಟಗಾರರಿಗೆ ದೀರ್ಘಾವಧಿಯ ವಾಸ್ತವ್ಯದಲ್ಲಿ ಪರಿಣತಿ ಹೊಂದಿದ್ದು, ಉನ್ನತ ಮಟ್ಟದ ಗೇಮಿಂಗ್ ಪಿಸಿಗಳು, ವೇಗದ ಇಂಟರ್ನೆಟ್ ಸಂಪರ್ಕಗಳು ಮತ್ತು ಮೀಸಲಾದ ಗೇಮಿಂಗ್ ಕುರ್ಚಿಗಳನ್ನು ಹೊಂದಿರುವ ಖಾಸಗಿ ಕೊಠಡಿಗಳನ್ನು ನೀಡುತ್ತದೆ ಎಂದು ವರದಿ ಹೇಳಿದೆ.
ಹೋಟೆಲ್ ಉದ್ಯೋಗಿಗಳು ಆ ವ್ಯಕ್ತಿಯನ್ನು ಹೋಟೆಲ್ ವಾಸ್ತವ್ಯದ ಸಮಯದಲ್ಲಿ ವಿರಳವಾಗಿ ನೋಡಿದ್ದಾರೆ. ಅಲ್ಲದೆ ಇಂತಹ ಮನುಷ್ಯರು ಕೂಡಾ ಭೂಮಿಯಲ್ಲಿ ಇದ್ದಾರೆಯೆ ಎಂದು ಹೇಳಿದ್ದಾರೆ. ಅವರನ್ನು “ಹಾರ್ಡ್ಕೋರ್ ಗೇಮರ್” ಎಂದು ಬಣ್ಣಿಸಲಾಗಿದ್ದು, ಅವರು ತಮ್ಮ ವಾಸ್ತವ್ಯವನ್ನು ವಿಸ್ತೃತ ಗೇಮಿಂಗ್ ಮ್ಯಾರಥಾನ್ ಆಗಿ ಪರಿವರ್ತಿಸಿಕೊಂಡಿದ್ದಾರೆ

