ಮಂಗಳೂರು : ಜನವರಿ 2 ರಿಂದ 5 ರವರೆಗೆ ಮಂಗಳೂರಿನ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ಪ್ರವೀಣ್ ಕುಮಾರ್ ಅವರ ಕೈಚಳಕದಿಂದ ಮೂಡಿದ ಚಿತ್ರಕಲಾ ಪ್ರದರ್ಶನ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿದ್ದು ಇದರ ಉದ್ಘಾಟನಾ ಸಮಾರಂಭವು ಜನವರಿ 2 ರಂದು ಸಂಜೆ 5.30 ನಡೆಯಲಿದೆ ಎಂದು ಖ್ಯಾತ ಚಿತ್ರ ಕಲಾವಿದರಾದ ಪ್ರವೀಣ್ ಕುಮಾರ್ ತಿಳಿಸಿದರು.

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಅಧ್ಯಾತ್ಮಿಕ, ಧಾರ್ಮಿಕ, ಐತಿಹಾಸಿಕ, ಸಾಂಸ್ಕೃತಿಕ ಆಯಾಮಗಳ ಒಳ ತಿರುವುಗಳನ್ನು ಒಳಗೊಂಡ ಚಿತ್ರಗಳ ಪ್ರದರ್ಶನವನ್ನು ಮಾಡಲಾಗುವುದು .
ಹೆಚ್ಚಾಗಿ ದೇವರ ಕಲಾಕೃತಿಯ ಚಿತ್ರಗಳಿವೆ . ಮೂರ್ತ ರೂಪಗಳ, ನೈಜ ಸಹಜ ಜೀವ ಭಾವಗಳನ್ನು ಅಭಿವ್ಯಕ್ತ ಪಡಿಸುವ ಇವರ ಕಲಾಕೃತಿಗಳು ಮನೆ, ಕಚೇರಿ, ದೇವಸ್ಥಾನಗಳಲ್ಲಿ ಸಹಜ ಮೆರುಗು ವೃದ್ಧಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ. ಇಂತಹ ಒಂದಷ್ಟು ಕಲಾಕೃತಿಗಳನ್ನು ಒಟ್ಟು ಸೇರಿಸಿ ತನ್ನ ಪ್ರಥಮ ಪ್ರದರ್ಶನವಾಗಿ ಮೈಸೂರ್ ಮತ್ತು ತಂಜಾವೂರು ಶೈಲಿಯ ‘ ವರ್ಣ ಬೆಳದಿಂಗಳು ‘ ಎಂಬ ಏಕ ವ್ಯಕ್ತಿ ಚಿತ್ರ ಕಲಾ ಪ್ರದರ್ಶನವನ್ನು ಹಮ್ಮಿಕೊಂಡಿರುವುದಾಗಿ ಅವರು ತಿಳಿಸಿದರು

ಕಾರ್ಯಕ್ರಮವನ್ನು ದೃಢ ವ್ರತ ಗೋರಿಕ್ ಉದ್ಘಾಟನೆ ಮಾಡುವರು ,ಮುಖ್ಯ ಅತಿಥಿಯಾಗಿ ಸಮೀರ್ ಪುರಾಣಿಕ್, ಆಸ್ಟ್ರೋ ಮೋಹನ್ ಭಾಗವಹಿಸುವರೆಂದು ತಿಳಿಸಿದರು .
ಪತ್ರಿಕಾಗೋಷ್ಠಿಯಲ್ಲಿ .ದಿನೇಶ್ ಹೊಳ್ಳ , ವೀಣಾ ಶ್ರೀನಿವಾಸ ಉಪಸ್ಥಿತರಿದ್ದರು .

