ಮಂಗಳೂರು :ಕಳೆದ ಏಳು ವರ್ಷಗಳಿಂದ ನಿರಂತರವಾಗಿ ನಮ್ಮ ಕುಡ್ಲ 24×7 ಚಾನೆಲ್ ನಲ್ಲಿ ಕರ್ಣಾಟಕ ಬ್ಯಾಂಕ್ ಪ್ರಾಯೋಜಿತ “ಬುಸಿನೆಸ್ ಟಾನಿಕ್” ಸಾಪ್ತಾಹಿಕ ಕಾರ್ಯಕ್ರಮವು ಬಹಳ ಜನಪ್ರಿಯವಾಗಿದ್ದು, ಹೂಡಿಕೆ, ವಿಮೆ, ಗ್ರಾಹಕರ ರಕ್ಷಣೆ, ರೇರಾ, ಐಪಿಆರ್, ಆತ್ಮ ನಿರ್ಭರ್ ಭಾರತ್, ಎಂಎಸ್ಎಂಇ, ಸ್ಮಾರ್ಟ್ ಅಪ್, ಹೊಸ ಕೈಗಾರಿಕಾ ನೀತಿ,ಕೇಂದ್ರ / ರಾಜ್ಯ ಬಜೆಟ್, ಇನ್ನಮ್ ಟ್ಯಾಕ್ಸ್, ಜಿಎಸ್ ಟಿ, ಬ್ಯಾಂಕಿಂಗ್ ವ್ಯವಹಾರ, ಶಿಕ್ಷಣ ಹಾಗು ಇತರ ವ್ಯಾಪಾರ ಸಂಬಂಧಿತ ಕ್ಷೇತ್ರಗಳ ಅನೇಕ ವಿಷಯಗಳನ್ನು ನೇರಪ್ರಸಾರದ ಮೂಲಕ ಜನರ ಧ್ವನಿಯಾಗಿ ಮೂಡಿಬರುತ್ತಿದ್ದು ಬಹಳ ಜನಪ್ರಿಯತೆಯನ್ನು ಗಳಿಸಿದೆ .ಈಗಾಗಲೇ “ಬ್ಯುಸಿನೆಸ್ ಟಾನಿಕ್”, 349 ಸಂಚಿಕೆಗಳನ್ನು ಪೂರೈಸಿ ಶನಿವಾರ ಜನವರಿ 03 ರಂದು ತನ್ನ 350 ನೇ ಸಂಚಿಕೆಯನ್ನು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ‘ಫಾದರ್ ಎಲ್ ಎಸ್ ರಸ್ಕಿನಾ ಸಭಾಂಗಣದಲಿ, ಅದ್ದೂರಿಯಾಗಿ ಆಚರಿಸಲಿದೆ ಎಂದು ಸಿಎ ಎಸ್.ಎಸ್ ನಾಯಕ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಪ್ರತಿ ಭಾನುವಾರ ಬೆಳಿಗ್ಗೆ 10.00 ರಿಂದ 11.30 ವರೆಗೆ ನಮ್ಮ ಕುಡ್ಲ 24 X 7 ಚಾನೆಲ್, ಮತ್ತು ಯೂ ಟ್ಯೂಬ್ ಮೂಲಕ ಕಾರ್ಯಕ್ರಮವನ್ನು ನೇರಪ್ರಸಾರದಲ್ಲಿ ಪ್ರಸ್ತುತ ಪಡಿಸಲಾಗುತ್ತದೆ. ಇದರ ರೂವಾರಿ, ನಿರ್ದೇಶಕ ಹಾಗೂ ನಿರೂಪಕ ಮಂಗಳೂರಿನ ಹೆಸರಾಂತ ಲೆಕ್ಕ ಪರಿಶೋಧಕ ಸಿ.ಎ. ಎಸ್.ಎಸ್.ನಾಯಕ್ ಅವರು ನಿರ್ವಹಿಸುತ್ತಿದ್ದಾರೆ. ಈ ಕಾರ್ಯಕ್ರಮವು ವ್ಯಾಪಾರಸ್ಥರು, ಉದ್ಯಮಿಗಳು, ಹೂಡಿಕೆದಾರರು, ವಿದ್ಯಾರ್ಥಿಗಳು ಹಾಗೂ ಗ್ರಾಹಕರ ಮೆಚ್ಚುಗೆಯನ್ನು ಗಳಿಸಿದ್ದು ಲಕ್ಷಾಂತರ ವೀಕ್ಷಕರ ಹೃದಯವನ್ನು ತಲುಪಿದೆ ಹಾಗು ಅನೇಕ ಉದ್ಯಮಗಳಿಗೆ ಸರಕಾರದ ಹಾಗೂ ಬ್ಯಾಂಕ್ ಗಳ ಸಾಲ ಸೌಲಭ್ಯ, ಸಬ್ಸಿಡಿ, ಕೇಂದ್ರ ರಾಜ್ಯ ಬಜೆಟ್, GST, ಇನ್ ಕಂ ಟ್ಯಾಕ್ಸ್ ಇತ್ಯಾದಿ ವಿಷಯಗಳನ್ನು ವೀಕ್ಷಕರಿಗೆ ತಜ್ಞರ ಮುಖಾಂತರ ತಿಳಿಸುತ್ತಾ ಬಂದಿದೆ. ಇದರ ಪ್ರಮುಖ ವಿಷಯವೆಂದರೆ ನೇರ ಫೋನ್ ಇನ್ ಮುಖಾಂತರ ವೀಕ್ಷಕರು ತಜ್ಞರಲ್ಲಿ ನೇರವಾಗಿ ಪ್ರಶ್ನೆಗಳನ್ನು ಕೇಳಿ ತಮ್ಮ ಸಮಸ್ಯೆಗಳಿಗೆ ತಕ್ಷಣ ಪರಿಹಾರ ನೀಡುವುದು ಎಂದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಬ್ಯಾಂಕಿನ ಎಂಡಿ ಹಾಗೂ ಸಿಇಓ ಶ್ರೀ ರಾಘವೇಂದ್ರ ಶ್ರೀನಿವಾಸ್ ಭಟ್ ಅವರು ಉದ್ಘಾಟಿಸುವರು. ಶ್ರೀ ಕ್ರಷ್ಣ ಹೆಗ್ಡೆ ಮಿಯಾರ್, ಗ್ರೂಪ್ ಜನರಲ್ ಮ್ಯಾನೇಜರ್ ಎಂಆರ್ ಪಿಎಲ್ ಇವರು ದೀಪ ಪ್ರಜ್ವಲಿಸುವರು, ರೆ|ಫಾದರ್ ಡಾ.ಪ್ರವೀಣ್ ಮಾರ್ಟಿಸ್ ಎಸ್.ಜೆ ಉಪಕುಲಪತಿ ಅಲೋಶಿಯಸ್ ಕಾಲೇಜು ಇವರು ಅಧ್ಯಕ್ಷತೆ ವಹಿಸಲಿದ್ದಾರೆ,ಮುಖ್ಯ ಅತಿಥಿಗಳಾಗಿ ಶ್ರೀ ಸೂರ್ಯಕಾಂತ್ ಜೆ.ಸುವರ್ಣ, ಅಧ್ಯಕ್ಷರು ಭಾರತ್ ಕೋ ಆಪರೇಟಿವ್ ಬ್ಯಾಂಕ್, ಪಿ.ಬಿ ಅಹ್ಮದ್ ಮುದಸ್ಸರ್, ಅಧ್ಯಕ್ಷರು ಕೆಸಿಸಿಐ ಮಂಗಳೂರು, ಶ್ರೀ ಗುಣಕರ ರಾಮದಾಸ, ಅಧ್ಯಕ್ಷರು ಇಸ್ಕಾನ್ ಮಂಗಳೂರು, ಶ್ರೀ ಬಿ.ಎಂ.ಫಾರೂಕ್,ಅಧ್ಯಕ್ಷರು ಫಿಜಾ ಗ್ರೂಪ್, ಬೆಂಗಳೂರು ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಶ್ರೀ ಹರೀಶ್ ಕರ್ಕೇರ,ಶ್ರೀ ಲೀಲಾಕ್ಷ ಕರ್ಕೇರ, ಡಾ.ರೊನಾಲ್ಡ್ ನಝರತ್.ರಿಜಿಸ್ಟ್ರಾರ್ ಸಂತ ಅಲೋಶಿಯಸ್ ಕಾಲೇಜು, ಶ್ರೀ ಅರ್ಜುನ್ ಪ್ರಕಾಶ್ ಸಹಾಯಕ ಪ್ರಾಧ್ಯಾಪಕರು ಸಂತ ಅಲೋಶಿಯಸ್ ಕಾಲೇಜು, ಶ್ರೀ ರಾಮಚಂದ್ರ ಪ್ರಭು ಮೊದಲಾದವರು ಉಪಸ್ಥಿತರಿದ್ದರು,

