ಮಂಗಳೂರು : ಇಲ್ಲಿನ ಬೊಕ್ಕಪಟ್ಟಣ ಶ್ರೀ ಬ್ರಹ್ಮ ಬೊಬ್ಬರ್ಯ ಬಂಟ ದೈವಸ್ಥಾನದ ವಾರ್ಷಿಕ ನೇಮೋತ್ಸವವು ಜನವರಿ 26 ಹಾಗೂ ತಾ. 27 ರಂದು ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯ ಬಿಡುಗಡೆಯನ್ನು ಉದ್ಯಮಿ ಸುಹಾಗ್ ದಂಪತಿಗಳು ನೆರವೇರಿಸಿದರು.

ವಾರ್ಷಿಕ ಚೌತಿ ಹಬ್ಬ ಹಾಗೂ ನೇಮೋತ್ಸವವು ದೇರೆಬೈಲು ಬ್ರಹ್ಮಶ್ರೀ ವಿಠಲದಾಸ ತಂತ್ರಿಯವರ ಪೌರೋಹಿತ್ಯದ ಧಾರ್ಮಿಕ ವಿಧಿ –ವಿಧಾನಗಳ ಮೂಲಕ ಜರಗಲಿದ್ದು, ಈ ಸಂದರ್ಭ ಗಣಹೋಮ, ನಾಗಸಾನಿಧ್ಯದಲ್ಲಿ ನಾಗತಂಬಿಲ, ಧ್ವಜಾರೋಹಣದೊಂದಿಗೆ ಆರಂಭವಾಗಲಿದೆ.

ಈ ಸಂದರ್ಭದಲ್ಲಿ ದೈವಸ್ಥಾನದ ಅಧ್ಯಕ್ಷರು ಲೋಕೇಶ್ ಸುವರ್ಣ, ಮಧ್ಯಸ್ಥರು ಮಾಧವ ಪುತ್ರನ್, ಉಪಾಧ್ಯಕ್ಷರು ರಾಜಕುಮಾರ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಚಿದಾನಂದ ಬೆಂಗ್ರೆ, ಜೊತೆ ಕಾರ್ಯದರ್ಶಿ ಪ್ರದೀಪ್ ಮೆಂಡನ್, ಕೋಶಾಧಿಕಾರಿ ಅರುಣ್ ಮೆಂಡನ್ ಹಾಗೂ ವಿವಿಧ ಗ್ರಾಮಗಳ ಗುರಿಕಾರರು, ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಮತ್ತು ಮಹಿಳಾ ಸಂಘದ ಸದಸ್ಯೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಈವೆಂಟ್ಸ್ ನಿರ್ವಾಹಕರಾದ ಸುಹಾಗ್ ದಂಪತಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

