ಮಂಗಳೂರು : ಸಂತ್ರಸ್ತೆ ಪೂಜಾ ಆಚಾರ್ಯ ಪ್ರಕರಣ ಆಗುವ ಮೊದಲು ಜಗನ್ನಿವಾಸ್ ರಾವ್ ಪುತ್ತೂರು ನಗರಸಭಾ ಸದಸ್ಯರಾಗಿ ಕಾರ್ಯ ಚಟುವಟಿಯನ್ನು ನಡೆಸುತ್ತಿದ್ದರು .ಅವರನ್ನು ಈ ಪ್ರಕರಣ ನಡೆದ ಬಳಿಕ ಆ ಸ್ಥಾನದಿಂದ ಉಚ್ಚಾಟನೆಯನ್ನು ಮಾಡಲಾಗಿದೆ ಎಂದು ದ.ಕ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ತಿಳಿಸಿದ್ದಾರೆ
ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸದ ಅವರು , ಇದೀಗ ಅವರನ್ನು ನೂರು ಶತಮಾನ ಪಕ್ಷದ ಚಟುವಟಿಗೆಗೆ ತೊಡಗಿಸಿಕೊಳ್ಳಲಿಲ್ಲ, ಸಂತ್ರಸ್ತೆ ಪೂಜಾ ಆಚಾರ್ಯ ಜೊತೆ ಕೃಷ್ಣ ಜಿ.ರಾವ್ ನ ವಿವಾಹವನ್ನು ಮಾಡಿಸದೇ ಇದ್ದರೆ ಪಕ್ಷದಿಂದ ಹೊರಹಾಕುವುದಾಗಿ ನೋಟೀಸನ್ನು ನೀಡಲಾಗಿತ್ತು .ಆಗ ಅವರು ಡಿಎನ್ಎ ರಿಪೋರ್ಟ್ ನಲ್ಲಿ ಪಾಸಿಟಿವ್ ಬಂದರೆ ಮದುವೆ ಮಾಡಿಸಿ ಕೊಡುವುದಾಗಿ ನನಗೆ,ನನಗಿಂತ ಮೊದಲು ಪುತ್ತೂರಿನ ಸ್ಥಳೀಯ ಶಾಸಕರಿಗೆ ತಿಳಿಸಿದರು.ಆದರೆ ಮಗು ಜಗನ್ನಿವಾಸ್ ರಾವ್ ಪುತ್ರ ಕೃಷ್ಣ ಜೆ.ರಾವ್ ಎಂಬಾತನ ಮಗುವೆಂದು ಸಾಬೀತಾದ ಕೂಡಲೇ ಜಗನ್ನಿವಾಸ್ ರಾವ್ ಸತ್ಯ ಪ್ರಮಾಣವನ್ನು ಮುರಿದ್ದಿದ್ದಾರೆ. ವಿವಾಹವನ್ನು ಮಾಡಿಸಲು ಹಿಂದೇಟು ಹಾಕಿದ್ದಾರೆ. ಹೀಗಾಗಿ ನಮ್ಮ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.ನಮ್ಮ ಪಕ್ಷ ಎಂದು ಸಂತ್ರಸ್ತೆ ಪೂಜಾ ಆಚಾರ್ಯರ ಮತ್ತು ಅವರ ಕುಟುಂಬದ ಪರವಾಗಿರುತ್ತದೆ ಎಂದು ತಿಳಿಸಿದರು.

ಈ ಸಮಯ ಬಿಜೆಪಿ ಮುಖಂಡರಾದ ಪ್ರೇಮಾನಂದ ಶೆಟ್ಟಿ , ಅರುಣ್ ಶೇಟ್ , ಸುನಿಲ್ ಆಳ್ವ , ವಸಂತ ಪೂಜಾರಿ ಉಪಸ್ಥಿತರಿದ್ದರು .

