ಸುರತ್ಕಲ್ : ಶ್ರೀ ಶಿವಶಕ್ತಿ ಸೇವಾ ಸಂಘಟನೆ ಶಿವನಗರ ಇಡ್ಯಾ,ಸುರತ್ಕಲ್ ಇದರ ವತಿಯಿಂದ ಮಹಿಳಾ ಕಬ್ಬಡ್ಡಿ ಪಂದ್ಯಾಟದಲ್ಲಿ ವಿಶ್ವ ಚಾಂಪಿಯನ್ ಭಾರತ ತಂಡವನ್ನು ಪ್ರತಿನಿಧಿಸಿದ ಇಡ್ಯಾ ನಿವಾಸಿ ಧನಲಕ್ಷ್ಮಿ ಪೂಜಾರಿ ಅವರಿಗೆ ಹುಟ್ಟೂರ ಸನ್ಮಾನವನ್ನು ನೆರವೇರಿಸಿ” ಕರ್ನಾಟಕ ಕರಾವಳಿ ಕ್ರೀಡಾ ರತ್ನ” ಬಿರುದು ನೀಡಿ ಗೌರವಿಸಲಾಯಿತು.
ಸನ್ಮಾನ ನೆರವೇರಿಸಿ ಸಂಘಟನೆಯ ಅಧ್ಯಕ್ಷ ರಾಷ್ಟ್ರೀಯ ಕ್ರೀಡಾಪಟು, ಪುಂಡಲಿಕ ಹೊಸಬೆಟ್ಟು ಅವರು ಮಾತನಾಡಿ,ಕಠಿಣ ಪರಿಶ್ರಮದಿಂದ ದೇವರ ಆಶೀರ್ವಾದ, ತಂದೆ ತಾಯಿ, ತರಬೇತುದಾರರ ಪ್ರೋತ್ಸಾಹದಿಂದ ತಂಡದಲ್ಲಿ ಸ್ಥಾನ ಪಡೆದು ಭಾರತ ತಂಡವನ್ನು ವಿಶ್ವ ಚಾಂಪಿಯನ್ ಪಟ್ಟಕ್ಕೆ ಏರಿಸುವಲ್ಲಿ ಕ್ರೀಡಾತರಹ ಕೊಡುಗೆ ಅಪಾರ. ನಿಜವಾಗಿಯೂ ಕರಾವಳಿಯ ಕ್ರೀಡಾ ರತ್ನವಾಗಿ ಬೆಳೆದು ನಿಂತಿದ್ದಾರೆ. ಉಜ್ವಲವಾದ ಭವಿಷ್ಯ ಇವರದಾಗಲಿ, ಭಾರತವನ್ನು ಮತ್ತಷ್ಟು ಪ್ರತಿನಿಧಿಸಲಿ ಎಂದು ಹಾರೈಸಿದರಲ್ಲದೆ, ನಮ್ಮ ಸರಕಾರ ಇವರಿಗೆ ಸರಕಾರಿ ಉದ್ಯೋಗವನ್ನು ನೀಡಿ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಧನಲಕ್ಷ್ಮಿ ಪೂಜಾರಿ ಅವರು ಗ್ರಾಮದ ಜನರು, ಶಿವಶಕ್ತಿ ಸೇವಾ ಸಂಘಟನೆ ನೀಡಿದ ಸನ್ಮಾನ ನನಗೆ ಇನ್ನಷ್ಟು ಪ್ರೋತ್ಸಾಹಗಳನ್ನು ನೀಡಿದೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಧನಂಜಯ ಸಾಲಿಯಾನ್ ಇಡ್ಯಾ, ಜೊತೆ ಕಾರ್ಯದರ್ಶಿ , ಜಯಪ್ರಕಾಶ್ ರಾವ್ ಇಡ್ಯಾ, ಪ್ರಮುಖರಾದ ವಸಂತ ನಾಯಕ್, ಪ್ರೀತಮ್ ಜೈನ್, ಪ್ರಕಾಶ್ ಕುಮಾರ್ ಬಿ, ರಘನಾಥ್ ಶೆಟ್ಟಿ ,ಪ್ರಣಿತ್ ರಾಜ್, ಅಕ್ಷಯ್, ಸರಿತಾ ಪುಂಡಲಿಕ, ಅಮಿತಾ ರಾಜೇಶ್, ಸಂಧ್ಯಾ ಜಯಪ್ರಕಾಶ್ ನಾರಾಯಣ ಪೂಜಾರಿ, ಶಶಿಕಲಾ ನಾರಾಯಣ, ದೇವದಾಸ್ ಇಡ್ಯಾ, ಸುಚೇತ ಪ್ರೀತಂ ಜೈನ್ ಉಪಸ್ಥಿತರಿದ್ದರು. ನರೇಶ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು.

