ದುಬೈ : ಕಂಬಳದಲ್ಲಿ ಅವಹೇಳನ ಮಾಡಿದವರು ಕಂಬಳದಲ್ಲಿ ಕ್ಷಮೆ ಕೇಳಬೇಕು ಮಂಗಳೂರು ಕಂಬಳದಲ್ಲಿ ಕಂಬಳ ಉದ್ಘೋಷಕರಾದ ಕಂಬಳ ಕ್ಷೇತ್ರದ ಭೀಷ್ಮ ಎಂಬ ಖ್ಯಾತಿ ಪಡೆದಿರುವ ಗುಣಪಾಲ ಕಡಂಬರವರಿಗೆ ಆದ ಅವಮಾನವನ್ನು ಎಂದಿಗೂ ಸಹಿಸುವುದಿಲ್ಲ ಹಾಗೂ ಇದು ತುಳುನಾಡಿನ ಕಂಬಳ ಕ್ಷೇತ್ರಕ್ಕೆ ಆದ ಅಗೌರವ ಎಂದು ಯುಎಇಯಲ್ಲಿ ಇರುವ ಕಂಬಳ ಅಭಿಮಾನಿಗಳು ಪ್ರತಿಕ್ರಿಯೆ ತಿಳಿಸಿದ್ದಾರೆ.
ಮರಳು ಭೂಮಿಯಲ್ಲಿ ದುಡಿಯುತ್ತಿರುವ ನಾವು ಕಂಬಳವನ್ನು ಅತಿ ಪ್ರೀತಿ ಹಾಗೂ ಭಕ್ತಿ ಪೂರ್ವಕವಾಗಿ ಕಂಬಳ ಆರಂಭದಿಂದ ಅಂತ್ಯದವರೆಗೆ ಮೊಬೈಲ್ ಫೋನ್ ಅಥವಾ ಇನ್ನಿತರ ಪರದೆಯಲ್ಲಿ ನಾವು ನೋಡುವ ನಮಗೆ ಕಂಬಳದ ಸವಿಯನ್ನು ಇನ್ನೂ ಹೆಚ್ಚಿಸುವವರು ಕಂಬಳ ಉದ್ಘೋಷಕರು. ಅಂತಹ ಉದ್ಘೋಷಕಾರಿಗೆ ಈ ರೀತಿಯ ಅವಮಾನವನ್ನು ನಾವು ಎಂದಿಗೂ ಸಹಿಸುವುದಿಲ್ಲ ಎಂದರು.
ಕಂಬಳದಲ್ಲಿ ಗುಣಪಾಲ ಕಡಂಬರ ಧ್ವನಿಯೇ ಒಂದು ವಿಶೇಷ ಆಕರ್ಷಣೆಯಾಗಿದೆ.ಅವರ ಧ್ವನಿಯಿಂದ ಕಂಬಳದ ಇತಿಹಾಸವನ್ನು ಕೇಳಲು ಕಂಬಳ ಅಭಿಮಾನಿಗಳು ನಿರೀಕ್ಷೆಯಲ್ಲಿರುತ್ತಾರೆ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಕಡಂಬರವರಿಗೆ ಮಾಡಿದ ಅವಮಾನವನ್ನು ನಾವು ಎಂದಿಗೂ ಸಹಿಸುವುದಿಲ್ಲ. ಕಳೆದ ಕಂಬಳದಲ್ಲಿ ಅವಮಾನವನ್ನು ಮಾಡಿದವರು ನಾಳೆಯ ಮೀಯ್ಯಾರಿನ ಕಂಬಳದಲ್ಲಿ ಕ್ಷಮೆ ಕೇಳಬೇಕು ಹಾಗೂ ಮುಂದಿನ ದಿನಗಳಲ್ಲಿ ಕಂಬಳ ಕ್ಷೇತ್ರಗಳಲ್ಲಿ ಇಂತಹ ಘಟನೆಗಳು ನಡೆಯಬಾರದು ಇದರ ಬಗ್ಗೆ ಕಂಬಳ ಜಿಲ್ಲಾ ಸಮಿತಿ ಮತ್ತು ಕಂಬಳ ರಾಜ್ಯ ಅಸೋಸಿಯೇಷನ್ ತುರ್ತು ಕ್ರಮವನ್ನು ತೆಗೆಯಬೇಕು ಎಂದು ನಮ್ಮ ಕಂಬಳ ಟೀಂ ದುಬೈಯ ಎಲ್ಲಾ ಸದಸ್ಯರು ಆಗ್ರಹಿಸಿದ್ದಾರೆ.

