ಮಂಗಳೂರು : ಪ್ರಥಮ ಬಾರಿಗೆ ಪರ್ಯಾಯ ಸರ್ವಜ್ಞ ಪೀಠವನ್ನು ಅಲಂಕರಿಸಲಿರುವ ಹಾಗೂ ಪ್ರಸ್ತುತ ಪರ್ಯಾಯ ಪೂರ್ವಭಾವಿ ಸಂಚಾರದಲ್ಲಿರುವ ಉಡುಪಿಯ ಶೀರೂರು ಮಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ದಿನಾಂಕ 4ರಂದು ಭಾನುವಾರ ಸಂಜೆ 4:00ಗೆ ಸರಿಯಾಗಿ ಮಂಗಳೂರಿನ ಉರ್ವ ಸ್ಕೋರ್ ನಲ್ಲಿರುವ ಶ್ರೀ ಮಹಾಗಣಪತಿ ದೇವಸ್ಥಾನದ ರಾಜಾಂಗಣದಲ್ಲಿ ಮಂಗಳೂರಿಗೆ ಪುರಪ್ರವೇಶ ಮಾಡಲಿರುವರು.ಈ ಸಂದರ್ಭದಲ್ಲಿ ಪರ್ಯಾಯದ ಮಂಗಳೂರು ಸ್ವಾಗತ ಸಮಿತಿಯ ವತಿಯಿಂದ ಹಾಗೂ ಭಕ್ತ ಸಮೂಹದಿಂದ ಉರ್ವಸ್ಕೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ಪರಮಪೂಜ್ಯ ಶ್ರೀಪಾದರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಗುವುದು,ಎಂದು ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಡಾ.ಎಂ.ಬಿ ಪುರಾಣಿಕ್ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಜನವರಿ 4 ರಿಂದ 8 ಗುರುವಾರದ ತನಕ ಪೂಜ್ಯ ಶ್ರೀಪಾದರು ಮಂಗಳೂರಿನ ಭಕ್ತಾದಿಗಳ ಮನೆಗೆ ಭೇಟಿ ಮತ್ತು ಹಲವಾರು ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಪರ್ಯಾಯ ರಾಯಸವನ್ನು ಭಕ್ತಾದಿಗಳಿಗೆ ನೀಡಲಿದ್ದಾರೆ
ದಿನಾಂಕ 8 ರಂದು ಗುರುವಾರ ಸಂಜೆ 4 ಗಂಟೆಗೆ ಸರಿಯಾಗಿ ಶರವು ಶ್ರೀ ಮಹಾಗಣಪತಿ ದೇವಸ್ಥಾನದಿಂದ ಭವ್ಯವಾದ ಮೆರವಣಿಗೆ ಮೂಲಕ ಬಂದು ಕೊಡಿಯಾಲ್ ಬೈಲ್ ಶಾರದ ವಿದ್ಯಾಲಯದ ಹೊರಾಂಗಣದಲ್ಲಿರುವ ವೇದಿಕೆಯಲ್ಲಿ ಮಂಗಳೂರಿನ ಜನತೆಯ ಪರವಾಗಿ ಪೂಜ್ಯ ಶ್ರೀಪಾದರು ಪೌರ ಸನ್ಮಾನ ಸ್ವೀಕರಿಸಲಿರುವರು.

ಶೀರೂರು ಶ್ರೀಪಾದರ ನಗರ ಸಂಚಾರ ಸಂದರ್ಭದಲ್ಲಿ ಪಾದಪೂಜೆ, ಗುರುವಂದನೆ ಹಾಗೂ ಹೊರಕಾಣಿಕೆ ಸಲ್ಲಿಸಲು ಇಚ್ಚಿಸುವ ಭಕ್ತರು ಪರ್ಯಾಯದ ಮಂಗಳೂರು ಸ್ವಾಗತ ಸಮಿತಿಯ ಕಾರ್ಯದರ್ಶಿ ಶ್ರೀ ಸುಧಾಕರ್ ರಾವ್ ಪೇಜಾವರ ಮೊ: 9448546051 ಅಥವಾ ಸಂಚಾಲಕರಾದ ಶ್ರೀ ಗುರುಪ್ರಸಾದ್ ಕಡಂಬಾರ್ ಮೊ: 9380999424 ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಬಹುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರದೀಪ್ ಕುಮಾರ್ ಕಲ್ಕೂರ ಕಾರ್ಯಾಧ್ಯಕ್ಷರು,ರವೀಂದ್ರ ಶೇಟ್.ಉಪಾಧ್ಯಕ್ಷರು , ಸುಧಾಕರ ರಾವ್ ಪೇಜಾವರ,ಪ್ರಧಾನ ಕಾರ್ಯದರ್ಶಿ, ಗುರುಪ್ರಸಾದ್ ಕಡಂಬಾರ್, ಪ್ರಧಾನ ಸಂಚಾಲಕರು, ಹಾಗೂ ಬಿ.ಸುಬ್ರಹ್ಮಣ್ಯ ರಾವ್ ಕೋಶಾಧಿಕಾರಿ, ಉಪಸ್ಥಿತರಿದ್ದರು

