ಮುಂಬೈ: ಮಹಿಳೆಯೊಬ್ಬಳು ಹೊಸ ವರ್ಷದ ಸ್ವೀಟ್ ಕೊಡುತ್ತೇನೆಂದು ಪ್ರಿಯಕರನನ್ನು ಮನೆಗೆ ಕರೆಸಿ ಆತನ ಖಾಸಗಿ ಅಂಗವನ್ನೇ ಕತ್ತರಿಸಿದ ಘಟನೆ ಮುಂಬೈನಲ್ಲಿ ನಡೆದಿದೆ. ಪ್ರೇಮಿಯ ಖಾಸಗಿ ಅಂಗವನ್ನು ಕತ್ತರಿಸಿದ 25 ವರ್ಷದ ಎರಡು ಮಕ್ಕಳ ತಾಯಿಯನ್ನು ವಕೋಲಾ ಪೊಲೀಸರು ಬಂಧಿಸಿದ್ದಾರೆ.
25 ವರ್ಷದ ವಿವಾಹಿತ ಮಹಿಳೆ ಕಾಂಚನದೇವಿ ತನ್ನ 44 ವರ್ಷದ ಜೋಗಿಂದರ್ ಲಖನ್ ಎಂಬ ವಿವಾಹಿತ ಪ್ರಿಯಕರನಿಗೆ ತನ್ನ ಪತ್ನಿಯನ್ನು ಬಿಟ್ಟು ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಳು ಇದರಿಂದಾಗಿ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು
ಇತ್ತೀಚೆಗೆ ಜೋಗಿಂದರ್ ಮಹಿಳೆಯಿಂದ ಸ್ವಲ್ಪ ಅಂತರ ಕಾಯ್ದುಕೊಂಡಿದ್ದ, ಅಲ್ಲದೆ ಆಕೆಯ ಸಹವಾಸ ಸಾಕೆಂದು 2025ರ ನವೆಂಬರ್ನಲ್ಲಿ ಬಿಹಾರದಲ್ಲಿರುವ ತನ್ನ ಹಳ್ಳಿಗೆ ಹೋಗಿ ನೆಲೆಸಿದ್ದ ಮತ್ತು ಆಕೆಯೊಂದಿಗಿನ ಸಂಪರ್ಕ ನಡೆಸುವುದನ್ನು ನಿಲ್ಲಿಸಿದ್ದ. ಈ ಅವಧಿಯಲ್ಲಿ ಕಾಂಚನದೇವಿ ಆತನಿಗೆ ಪದೇ ಪದೇ ಕರೆ ಮಾಡಿ ಮುಂಬೈಗೆ ಹಿಂತಿರುಗಿ ಮದುವೆಯಾಗುವಂತೆ ಬೆದರಿಕೆ ಹಾಕುತ್ತಿದ್ದಳು.
ಬೆದರಿಕೆಗೆ ಹೆದರಿ ಡಿಸೆಂಬರ್ 19 ರಂದು ಜೋಗಿಂದರ್ ಮುಂಬೈಗೆ ಮರಳಿದ ಮತ್ತು ಡಿಸೆಂಬರ್ 24 ರಂದು ಮತ್ತೆ ಆಕೆಯನ್ನು ಭೇಟಿಯಾಗಿದ್ದ.ಜನವರಿ 1, 2026 ರ ಬೆಳಗಿನ ಜಾವ 1.30 ರ ಸುಮಾರಿಗೆ, ಜೋಗಿಂದರ್ ಕೆಲಸದಿಂದ ಮನೆಗೆ ಹಿಂತಿರುಗುತ್ತಿದ್ದಾಗ, ಕಾಂಚನದೇವಿ ಅವನಿಗೆ ಕರೆ ಮಾಡಿ ಹೊಸ ವರ್ಷದ ಸ್ವೀಟ್ ನೀಡುತ್ತೇನೆಂದು ಮನೆಗೆ ಆಹ್ವಾನಿಸಿದ್ದಾಳೆ.ಆ ಸಮಯದಲ್ಲಿ, ಮಹಿಳೆಯ ಮಕ್ಕಳು ಮನೆಯಲ್ಲಿ ಮಲಗಿದ್ದರು.ಮನೆಗೆ ಬಂದ ಪ್ರಿಯಕರನಿಗೆ ಮಹಿಳೆ ಮೊದಲು ಪ್ಯಾಂಟ್ ತೆಗೆಯಲು ಹೇಳಿ, ಅಡುಗೆ ಮನೆಗೆ ಹೋಗಿ ತರಕಾರಿ ಕತ್ತರಿಸುವ ಚಾಕು ತಂದು, ಇದ್ದಕ್ಕಿದ್ದಂತೆ ಜೋಗಿಂದರ್ ನ ಖಾಸಗಿ ಅಂಗದ ಮೇಲೆ ದಾಳಿ ಮಾಡಿದ್ದಾಳೆ. ತೀವ್ರ ಗಾಯಗೊಂಡ ಜೋಗಿಂದರ್ ಅಲ್ಲಿಂದ ತಪ್ಪಿಸಿಕೊಂಡು ತನ್ನ ಮನೆಗೆ ತಲುಪುವಲ್ಲಿ ಯಶಸ್ವಿಯಾದನು,ನಂತರ ಅತನ ಮಗ ಆತನನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದು ಜೋಗಿಂದರ್ ಇನ್ನೂ ಗಂಭೀರ ಸ್ಥಿತಿಯಲ್ಲಿದ್ದು, ಸಿಯಾನ್ ಆಸ್ಪತ್ರೆಯಲ್ಲಿ ಆರೈಕೆ ಪಡೆಯುತ್ತಿದ್ದಾನೆ,
ಘಟನೆ ನಡೆದ ನಂತರ ಆರೋಪಿ ಕಾಂಚನದೇವಿ ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಳು ಪ್ರಕರಣ ದಾಖಲಿಸಿಕೊಂಡ ಪೋಲಿಸರು ಮಹಿಳೆಯ ಹುಡುಕಾಟ ನಡೆಸಿ ಬಂಧಿಸಿದ್ದಾರೆ.

