ಮಂಗಳೂರು : ಕೆವಿಎನ್ ಪ್ರೊಡಕ್ಷನ್ಸ್ ಅರ್ಪಿಸುವ, ಲೋಕಿ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ. ಉಪಾಧ್ಯಕ್ಷ ಚಿತ್ರದ ಅನಿಲ್ ಕುಮಾರ್ ನಿರ್ದೇಶನದ ಬಹು ನಿರೀಕ್ಷಿತ ‘ಕಲ್ಟ್’ ಕನ್ನಡ ಸಿನಿಮಾ ದಿನಾಂಕ 23ರಂದು ಕರ್ನಾಟಕದಾದ್ಯಂತ ಸುಮಾರು 200ಕ್ಕೂ ಮಿಕ್ಕಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಟ ಝೈಧ್ ಖಾನ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಪತ್ರಿಕಾಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇದು ನನ್ನ ಎರಡನೇ ಚಿತ್ರವಾಗಿದ್ದು ಈ ಮೊದಲು ಬನಾರಸ್ ಎಂಬ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದೆ. ಕಲ್ಟ್ ಸಿನೆಮಾ ಪ್ರೀತಿ, ಆ್ಯಕ್ಷನ್, ಭಾವನಾತ್ಮಕ ಅಂಶಗಳುಳ್ಳ ಕಥೆಯನ್ನು ಹೊಂದಿದ್ದು ಚಿತ್ರದಲ್ಲಿ ಇಬ್ಬರು ನಾಯಕಿಯರಾದ ರಚಿತಾ ರಾಮ್ ಮತ್ತು ಮಲೈಕಾ ಟಿ.ವಸುಪಾಲ್ ಅಭಿನಯಿಸಿದ್ದಾರೆ.

ಜ.23ರಂದು ಚಿತ್ರದ ಬಿಡುಗಡೆ ನಿಮಿತ್ತಾ ಚಿತ್ರತಂಡವು ರಾಜ್ಯಾದ್ಯಂತ ಪ್ರಚಾರ ಕಾರ್ಯದಲ್ಲಿ ತೊಡಗಿಸಿ ಕೊಂಡಿದೆ. ಕಲ್ಟ್ ಚಿತ್ರದ ಚಿತ್ರೀಕರಣವನ್ನು ಕರ್ನಾಟಕದಾದ್ಯಂತ ಸುಮಾರು 85 ದಿನಗಳ ಕಾಲ ನಡೆಸಿದ್ದೇವೆ. 90ರಷ್ಟು ಚಿತ್ರೀಕರಣ ಉಡುಪಿಯ ಆಸುಪಾಸಿನಲ್ಲಿ ನಡೆಸಲಾಗಿದೆ, ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನವಿದ್ದು ಒಟ್ಟು 6 ಹಾಡುಗಳಿವೆ 3 ಹಾಡುಗಳನ್ನು ಈಗಾಗಲೇ ಬಿಡುಗಡೆ ಮಾಡಿದ್ದೇವೆ ಜನರಿಂದ ಉತ್ತಮ ಪ್ರತಿಕ್ರಿಯೆ ಕೂಡ ಬಂದಿದೆ ‘ಬ್ಲಡಿ ಲವ್’ ಹಾಡಿಗೆ ನಿರ್ದೇಶಕ ಅನಿಲ್ ಕುಮಾರ್ ಅವರೇ ಸಾಹಿತ್ಯ ಬರೆದಿದ್ದು, ಚಂದನ್ ಶೆಟ್ಟಿ ಹಾಡಿದ್ದಾರೆ ಎಂದರು

ಈಗಾಗಲೇ ಚಿತ್ರದ ‘ಅಯ್ಯೋ ಶಿವನೇ’ ಎಂಬ ಹಾಡು ಬಿಡುಗಡೆಯಾಗಿದ್ದು, ಇದರಲ್ಲಿ ಝೈದ್ ಹಾಗೂ ಮಲೈಕಾ ಹೆಜ್ಜೆ ಹಾಕಿದ್ದಾರೆ. ಸಿ ಜೆ.ಎಸ್ ವಾಲಿ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಸಾಹಸ ನಿರ್ದೇಶನ ಚಿತ್ರಕ್ಕಿದೆ.


