ಮುಂಬೈ : ಕಳೆದ ತಿಂಗಳು IPL 2026ರ ಮಿನಿ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ 9.20 ಕೋಟಿ ರೂ.ಗಳಿಗೆ ಖರೀದಿಸಿದ್ದ ಬಾಂಗ್ಲಾದೇಶದ ಸ್ಟಾರ್ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಮುಂಬರುವ ಐಪಿಎಲ್ ಪಂದ್ಯದಿಂದ ಬಿಡುಗಡೆ ಮಾಡಲಾಯಿತು.

ಬಾಂಗ್ಲಾದೇಶದಲ್ಲಿ ಹಲವಾರು ಹಿಂದೂಗಳು ಕೊಲ್ಲಲ್ಪಟ್ಟ ಹಿನ್ನೆಲೆಯಲ್ಲಿ ತೀವ್ರಗೊಂಡ ಸಾರ್ವಜನಿಕ ಮತ್ತು ರಾಜಕೀಯ ಒತ್ತಡದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧಗಳು ಬಿರುಕುಗೊಂಡ ಹಿನ್ನೆಲೆಯಲ್ಲಿ ಕೆಕೆಆರ್ ತಂಡದ ಸಹ-ಮಾಲೀಕ ಶಾರುಖ್ ಖಾನ್ ಹರಾಜಿನಲ್ಲಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಆಯ್ಕೆ ಮಾಡಿದ್ದಕ್ಕಾಗಿ ಶಾರುಖ್ ಖಾನ್ ತೀವ್ರ ಟೀಕೆಗಳನ್ನು ಎದುರಿಸುತ್ತಿದ್ದರು.

ಇದಕ್ಕೂ ಮೊದಲು, ಬಿಜೆಪಿ ನಾಯಕ ಕೌಸ್ತವ್ ಬಾಗ್ಚಿ ವಿವಾದಾತ್ಮಕ ಹೇಳಿಕೆ ನೀಡಿ, ಕೋಲ್ಕತ್ತಾದಲ್ಲಿ ನಡೆಯುತ್ತಿರುವ ಪಂದ್ಯಗಳಲ್ಲಿ ಬಾಂಗ್ಲಾದೇಶದ ಆಟಗಾರರಿಗೆ ಭಾಗವಹಿಸಲು ಅವಕಾಶ ನೀಡಬಾರದು ಎಂದು ಎಚ್ಚರಿಸಿದ್ದರು. ಯಾವುದೇ ಬಾಂಗ್ಲಾದೇಶದ ಕ್ರಿಕೆಟಿಗ ಐಪಿಎಲ್ ತಂಡದಲ್ಲಿ ಸೇರ್ಪಡೆಗೊಂಡು ಕೋಲ್ಕತ್ತಾದಲ್ಲಿ ಪಂದ್ಯ ಆಡಲು ಬಯಸಿದರೆ, ನಾವು ಅವರಿಗೆ ಆಡಲು ಬಿಡುವುದಿಲ್ಲ.ಮತ್ತು ಶಾರುಖ್ ಖಾನ್ ಅವರನ್ನು ಕೋಲ್ಕತ್ತಾ ಪ್ರವೇಶಿಸಲು ಸಹ ನಾವು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.

