ಮಂಗಳೂರು : ಉಡುಪಿ ಶ್ರೀ ಕ್ರಷ್ಣ ಮಠದ ಪರ್ಯಾಯ ಪೀಠಾರೋಹಣ ಮಾಡಲಿರುವ ಶಿರೂರು ಮಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಪೌರ ಸನ್ಮಾನ ಪ್ರಯುಕ್ತ ಮಂಗಳೂರಿನಲ್ಲಿ ಜನವರಿ 4 ರಿಂದ 8 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವವರು.
ಈ ಕಾರ್ಯಕ್ರಮದ ಪ್ರಯುಕ್ತ ಇಂದು ಕದ್ರಿಯ ಮಂಜು ಪ್ರಸಾದದಲ್ಲಿರುವ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಅವರ ಸ್ವಗೃಹದಲ್ಲಿ ವಿಶೇಷ ಪೂಜೆಯು ನೆರವೇರಿತ್ತು. ಶ್ರೀಗಳ ಪಾದಪೂಜೆ, ತುಲಾಭಾರ ಸೇವೆ, ಹಾಗೂ ದೇವರ ಮಹಾಪೂಜೆಯು ಬಹಳ ಶ್ರದ್ಧಾ ಭಕ್ತಿಯಿಂದ ವಿಜ್ರಂಭಣೆಯಿಂದ ನೆರವೇರಿತು.ಬಳಿಕ ನೆರೆದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ಈ ಸಂಧರ್ಭದಲ್ಲಿ ಕಟೀಲು ಲಕ್ಷ್ಮೀನಾರಾಯಣ ಅಸ್ರಣ್ಣ, ಡಾ ಎಂ ಬಿ ಪುರಾಣಿಕ್,ಎ.ಸಿ ಭಂಡಾರಿ,ಭುವನಾಭಿರಾಮ ಉಡುಪ, ಸುಧಾಕರ್ ಪೇಜಾವರ, ನವನೀತ್ ಶೆಟ್ಟಿ ಕದ್ರಿ, ಪ್ರದೀಪ್ ಆಳ್ವ,ತಾರನಾಥ್ ಶೆಟ್ಟಿ ಸಹಿತ ವಿವಿಧ ಗಣ್ಯರು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.



