ಢಾಕಾ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರ ಮುಂದುವರಿದಿದ್ದು ಕಳೆದ 24 ಗಂಟೆಗಳಲ್ಲಿ ಇಬ್ಬರು ಹಿಂದುಗಳನ್ನು ಕೊಲೆ ಮಾಡಲಾಗಿದೆ.ಜಶೋರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಸೋಮವಾರ ಸಂಜೆ ತುಷಾರ್ ಕಾಂತಿ ಬೈರಾಗಿಯವರ ಪುತ್ರ ರಾಣಾ ಪ್ರತಾಪ್ (45) ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ.ಅಲ್ಲದೆ ಮತ್ತೊಂದು ಪ್ರಕರಣದಲ್ಲಿ ಸೋಮವಾರ ಶರತ್ ಮಣಿ ಚಕ್ರವರ್ತಿ 40 ವರ್ಷದ ಹಿಂದೂ ದಿನಸಿ ಅಂಗಡಿಯ ಮಾಲೀಕನನ್ನು ಸಹ ಕೊಲ್ಲಲಾಗಿದೆ. ರಾತ್ರಿ 10 ಗಂಟೆ ಸುಮಾರಿಗೆ ನರಸಿಂಗ್ಡಿ ಜಿಲ್ಲೆಯಲ್ಲಿ ಶರತ್ ಮಣಿ ಚಕ್ರವರ್ತಿ ಅವರ ಮೇಲೆ ದುಷ್ಕರ್ಮಿಗಳು ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿ ಕೊಲೆಮಾಡಲಾಗಿದೆ. ಮೂರು ವಾರಗಳಲ್ಲಿ ಬಾಂಗ್ಲಾದೇಶದಲ್ಲಿ ಹತ್ಯೆಯಾದ ಆರನೇ ಪ್ರಕರಣ ಇದಾಗಿದೆ

ಹಿಂದೂ ಪತ್ರಕರ್ತ ರಾಣಾ ಪ್ರತಾಪ್ ಕಾರ್ಖಾನೆಯೊಂದರ ಮಾಲಿಕನಾಗಿದ್ದು ದಿನ ಪತ್ರಿಕೆಯೊಂದರ ಹಂಗಾಮಿ ಪತ್ರಕರ್ತನಾಗಿದ್ದ ಅವರ ಮನೆ ಜೆಸ್ಸೋರ್ ಜಿಲ್ಲೆಯ ಅರುವಾ ಗ್ರಾಮದಲ್ಲಿದೆ. ಸೋಮವಾರ ಸಂಜೆ 5.45 ರ ಸುಮಾರಿಗೆ ತನ್ನ ಕೆಲಸದ ನಿಮ್ಮಿತ್ತ ಹೋಗುತ್ತಿದ್ದಾಗ ಕೆಲವು ಅಪರಿಚಿತ ವ್ಯಕ್ತಿಗಳು ರಾಣಾ ಪ್ರತಾಪ್ ಮೇಲೆ ಗುಂಡು ಹಾರಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅವರ ಮೇಲೆ ಹಲವು ಬಾರಿ ಗುಂಡು ಹಾರಿಸಲಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯ ನಂತರ ಗ್ರಾಮದಲ್ಲಿ ಉದ್ವಿಗ್ನತೆ ಮುಂದುವರೆದಿದೆ. ಸ್ಥಳೀಯ ಮೂಲಗಳ ಪ್ರಕಾರ, ಪೊಲೀಸರು ಸ್ಥಳಕ್ಕೆ ತಲುಪಿ ಶವವನ್ನು ವಶಪಡಿಸಿಕೊಂಡರು. ದಾಳಿಕೋರರು ಯಾರು ಮತ್ತು ಕೊಲೆಯ ಹಿಂದಿನ ಮುಖ್ಯ ಉದ್ದೇಶವೇನು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಸ್ಥಳೀಯ ಹಿಂದೂಗಳನ್ನು ಗುರಿಯಾಗಿಟ್ಟುಕೊಂಡ ಹತ್ಯೆ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ.

ನರಸಿಂಗಡಿಯ ಪಲಾಶ್ ಉಪಜಿಲ್ಲಾ ಪ್ರದೇಶದ ಚಾರ್ಸಿಂದೂರ್ ಬಜಾರ್ನಲ್ಲಿರುವ ಶರತ್ ಮಣಿ ಚಕ್ರವರ್ತಿ ರಾತ್ರಿ 9ಗಂಟೆಗೆ ತಮ್ಮ ದಿನಸಿ ಅಂಗಡಿಯಲ್ಲಿ ವ್ಯವಹಾರ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ದುಷ್ಕರ್ಮಿಗಳು ಹಠಾತ್ತನೆ ಅವರ ಮೇಲೆ ಹರಿತವಾದ ಆಯುಧಗಳಿಂದ ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿದರು,ಸ್ಥಳೀಯ ನಿವಾಸಿಗಳು ಅವರನ್ನು ಆಸ್ಪತ್ರೆಗೆ ಸಾಗಿಸಿದರು, ಆದರೆ ಚಕ್ರವರ್ತಿ ದಾರಿ ಮಧ್ಯೆ ಸಾವನ್ನಪ್ಪಿದರು. ಅವರ ಪತ್ನಿ ಅಂತರಾ ಮುಖರ್ಜಿ ಮತ್ತು 12 ವರ್ಷದ ಮಗ ಅಭಿಕ್ ಚಕ್ರವರ್ತಿಯನ್ನು ಅಗಲಿದ್ದಾರೆ,ಮೃತರು ಕೆಲವು ವರ್ಷಗಳ ಹಿಂದೆ ಬಾಂಗ್ಲಾದೇಶಕ್ಕೆ ಮರಳುವ ಮೊದಲು ದಕ್ಷಿಣ ಕೊರಿಯಾದಲ್ಲಿ ಉದ್ಯೋಗದಲ್ಲಿದ್ದರು ಎಂದು ವರದಿಯಾಗಿದೆ.
ಕಳೆದ ಮೂರು ವಾರಗಳಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದ ಸದಸ್ಯರ ಮೇಲೆ ನಡೆದ ಆರನೇ ಪ್ರಮುಖ ದಾಳಿ ಇದಾಗಿದ್ದು , ಅಲ್ಪಸಂಖ್ಯಾತರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದೆ. ಆಶ್ಚರ್ಯಕರವೆಂದರೆ, ಮುಹಮ್ಮದ್ ಯೂನಸ್ ಮತ್ತು ಅವರ ಸರ್ಕಾರ ಈ ನಿರಂತರ ಘಟನೆಗಳ ಬಗ್ಗೆ ಮೌನವಾಗಿರುವುದು.
ಬಾಂಗ್ಲಾದೇಶದಲ್ಲಿ ಜಿಹಾದಿ ಶಕ್ತಿಗಳು ಹಿಂದೂಗಳನ್ನು ಮಾತ್ರ ಗುರಿಯಾಗಿಸಿಕೊಂಡಿವೆ ಎಂಬುದು ಸ್ಪಷ್ಟವಾಗಿದೆ.

