ಮಂಗಳೂರು :ಲಯನ್ಸ್ ಪ್ರಕೋಷ್ಠ ಹಾಗೂ ಲಯನ್ಸ್ ಜಿಲ್ಲೆ 317D ಅವರ ಸಹಯೋಗದಲ್ಲಿ ಪ್ರತಿಷ್ಠಿತ “ಸುಹಾನಾ ಸಫರ್ ಮತ್ತು ಬಿನಾಕಾ ಗೀತಮಾಲಾ” ಸಂಗೀತ ಕಾರ್ಯಕ್ರಮವನ್ನು ಜನವರಿ 9 ರಂದು ಸಂಜೆ 5.30 ರಿಂದ ಮಂಗಳೂರಿನ ಕದ್ರಿ ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿನಡೆಯಲಿದೆ ಎಂದು ಲಯನ್ಸ್ ಪ್ರಕೋಷ್ಠ ಇದರ ಜಿಲ್ಲಾಧ್ಯಕ್ಷರಾದ ಲ|ಕುಂಬ್ಳೆ ನರಸಿಂಹ ಪ್ರಭು ತಿಳಿಸಿದರು
ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಇದೇ ಮೊದಲ ಬಾರಿ *ಬಿನಾಕಾ ಗೀತಮಾಲಾ ಸಂಯೋಜನೆಯೊಂದಿಗೆ ಆಯೋಜಿಸಲಾಗುತ್ತಿದೆ.ಈ ಕಾರ್ಯಕ್ರಮದಲ್ಲಿ 1952 ರಿಂದ 1994ರವರೆಗೆ ರೇಡಿಯೋ ಸಿಲೋನ್ನಲ್ಲಿ ಪ್ರಸಾರವಾದ ಸಂಗೀತ ಹಾಡುಗಳ ಪ್ರಸ್ತುತಿ ಇದೆ ಎಂದರು .
ಸಂಗೀತವನ್ನು ಡಾ. ಕುಂಬ್ಳೆ ಅನಂತ ಪ್ರಭು,ಮಾಲಿನಿ ಕೇಶವ ಪ್ರಸಾದ್,ಇವರೊಂದಿಗೆ ಇತರೆ ಪ್ರತಿಭಾವಂತ ಗಾಯಕರು ಭಾಗವಹಿಸಲಿದ್ದಾರೆ.ಈ ಸಂಗೀತ ಸಂಭ್ರಮದಲ್ಲಿ ಲಯನ್ಸ್ ಸದಸ್ಯರು,ಸಂಗೀತ ಪ್ರೇಮಿಗಳು ಹಾಗೂ ಹಿರಿಯ ನಾಗರಿಕರು ಭಾಗವಹಿಸಲಿದ್ದಾರೆ ಎಂದರು

ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲ|ಎಂ ರಾಜೇಶ್ ಕಾಮತ್,ಸದಸ್ಯರಾದ ಲ|ವೆಂಕಟೇಶ್ ಬಾಳಿಗ ಉಪಸ್ಥಿತರಿದ್ದರು .

