ಬೆಂಗಳೂರು : ಗೀತು ಮೋಹನ್ ದಾಸ್ ನಿರ್ದೇಶನದ ಮತ್ತು ಸೂಪರ್ ಸ್ಟಾರ್ ಯಶ್ ನಾಯಕನಾಗಿ ನಟಿಸಿರುವ ಪ್ಯಾನ್-ಇಂಡಿಯನ್ ಕನ್ನಡ ಚಿತ್ರ ‘ಟಾಕ್ಸಿಕ್’ ನ ಟೀಸರ್ ಇಂದು ಯಶ್ ಅವರ 40ನೇ ಹುಟ್ಟುಹಬ್ಬದಂದು ಬಿಡುಗಡೆ ಮಾಡಲಾಯಿತು.ಚಿತ್ರವು ಮಾರ್ಚ್ 19_ರಂದು ಥಿಯೆಟ್ರಿಕಲ್ ಬಿಡುಗಡೆಯಾಗಲಿದೆ, ಈ ಟೀಸರ್ ನಲ್ಲಿ ಯಶ್ ಪಾತ್ರಧಾರಿ ರಾಯನ ಸಾಮೂಹಿಕ ಪರಿಚಯವಿದೆ. ಚಿತ್ರದ ಟ್ಯಾಗ್ ಲೈನ್ ‘ವಯಸ್ಕರಿಗೆ ಒಂದು ಕಾಲ್ಪನಿಕ ಕಥೆ’
ಈ ಟೀಸರ್ ಈಗಾಗಲೇ ಅತ್ಯಂತ ಹಾಟ್ ದೃಶ್ಯಗಳಿಗಾಗಿ ಸುದ್ದಿಯಲ್ಲಿದೆ.ಯಶ್ ಈ ಚಿತ್ರದಲ್ಲಿ ಗಡ್ಡದ ಜೊತೆಗೆ ವಿಭಿನ್ನ ಹೇರ್ಸ್ಟೈಲ್, ಟ್ಯಾಟೂ ಮೂಲಕ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.ಈ ಸಿನಿಮಾದಲ್ಲಿ ಅವರಿಗೆ ರಾಯಾ ಎಂಬ ಪಾತ್ರವಿದೆ. ಇಲ್ಲಿಯೂ ಅವರು ಆಕ್ಟನ್ ಸ್ಟಾರ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಟೀಸರ್ನಲ್ಲಿ ಯಶ್ ಅವರು ತಲೆಗೆ ಹ್ಯಾಟ್ ಹಾಕಿ, ಬಾಯಲ್ಲಿ ವಿಭಿನ್ನವಾದ ಸಿಗಾರ್ ಹಿಡಿದು, ಕೈಯಲ್ಲಿ ಮಷಿನ್ ಗನ್ ಹಿಡಿದಿರುವ ದೃಶ್ಯವು ಮಾತ್ರ ವೀಕ್ಷಕರನ್ನು ನಿಬ್ಬೆರಗುವಂತೆ ಮಾಡುವುದು.

ಕಿಯಾರಾ ಅಡ್ವಾಣಿ (ನಾಡಿಯಾ), ಹುಮಾ ಖುರೇಷಿ (ಎಲಿಜಬೆತ್), ನಯನತಾರಾ (ಗಂಗಾ) ಮತ್ತು ತಾರಾ ಸುತಾರಿಯಾ (ರೆಬೆಕ್ಕಾ) ಅವರ ಆಕರ್ಷಕ ಫಸ್ಟ್ ಲುಕ್ಗಳನ್ನು ಅನಾವರಣಗೊಳಿಸಿದ ನಂತರ, ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ರುಕ್ಮಿಣಿ ವಸಂತ್ ಮೆಲಿಸ್ಸಾ ಪಾತ್ರದೊಂದಿಗೆ ಇನ್ನಷ್ಟು ತೀವ್ರಗೊಳ್ಳುತ್ತದೆ.
ಟಾಕ್ಸಿಕ್ ಚಿತ್ರಕಥೆಯನ್ನು ಯಶ್ ಮತ್ತು ಗೀತು ಮೋಹನ್ ದಾಸ್ ಬರೆದಿದ್ದಾರೆ. ರಾಜೀವ್ ರವಿ ಛಾಯಾಗ್ರಹಣ. ರವಿ ಬಸ್ರೂರ್ ಸಂಗೀತ,ಉಜ್ವಲ್ ಕುಲಕರ್ಣಿ ಸಂಕಲನ ಮತ್ತು ಟಿ.ಪಿ.ಅಬಿದ್ ನಿರ್ಮಾಣ ವಿನ್ಯಾಸ ಮಾಡಿದ್ದಾರೆ. ರಾಷ್ಟ್ರೀಯ ಪ್ರಶಸ್ತಿ ವಿಜೇತರಾದ ಅನ್ಪರಿವ್ ಮತ್ತು ಕೆಚಾ ಖಂಫಾಕ್ದೀ ಜೊತೆಗೆ ಹಾಲಿವುಡ್ ಸಾಹಸ ನಿರ್ದೇಶಕ ಜೆಜೆ ಪೆರ್ರಿ ಕೂಡ ಈ ಚಿತ್ರದ ಸಾಹಸ ನೃತ್ಯ ಸಂಯೋಜನೆ ಮಾಡಿದ್ದಾರೆ.ಟಾಕ್ಸಿಕ್ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಿಸುತ್ತಿದೆ.

