ಮಂಗಳೂರು : ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ದೇವರ ೧೪ ನೇ ವರ್ಷದ ಪುನಃ ಪ್ರತಿಷ್ಠಾ ವರ್ಧoತಿ ಆದಿತ್ಯವಾರ ವಿಜೃಂಭಣೆಯಿಂದ ಜರಗಿತು.

ಪ್ರಾತಃ ಕಾಲ ಮಹಾ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು ಪ್ರಧಾನ ಶ್ರೀ ಭೂದೇವಿ ಶ್ರೀದೇವಿ ಸಹಿತ ವೀರ ವೆಂಕಟೇಶ್ ದೇವರ ಹಾಗೂ ಉತ್ಸವ ಶ್ರೀನಿವಾಸ ದೇವರ ವಿಗ್ರಹಗಳಿಗೆ ಪಂಚಾಮೃತ,ಗಂಗಾಭಿಷೇಕ , ಕನಕಾಭಿಷೇಕ ಶತಕಲಶಭಿಷೇಕಗಳು ಶ್ರೀಕಾಶೀಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ನೆರವೇರಿತು.

ಮದ್ಯಾನ್ಹ ಪೂಜೆ ಬಳಿಕ ಸಮಾರಾಧನೆ ಸಾಯಂಕಾಲ ಸ್ವರ್ಣ ಲಾಲಕಿ ಯಲ್ಲಿ ಒಂದು ಪೇಟೆ ಉತ್ಸವ ಬಳಿಕ ಶ್ರೀ ದೇವಳದಲ್ಲಿ ಪ್ರಾಕಾರೋತ್ಸವ,ವಸಂತ ಪೂಜೆ ಸಹಸ್ರಾರು ಭಜಕರ ಸಮ್ಮುಖದಲ್ಲಿ ನಡೆಯಿತು .

ಶ್ರೀ ದೇವರಿಗೆ ಸಹಸ್ರ ಕುಂಭಾಭಿಷೇಕ
ಇದೇ ಬರುವ ದಿನಾಂಕ 19.1.2026 ರಂದು ಶ್ರೀ ವೀರ ವೆಂಕಟೇಶ್ ದೇವರಸಹಿತ ಪರಿವಾರ ದೇವರುಗಳಿಗೆ ಸಹಸ್ರ ಕುಂಭಾಭಿಷೇಕ ನೆರವೇರಲಿದ್ದು ಐದು ದಿನಗಳ ಪರ್ಯಂತ ಶಾಸ್ತ್ರೋಕ್ತವಾಗಿ ವಿವಿಧ ವೈಧಿಕರ ಸಹಯೋಗದೊಂದಿಗೆ ವೈದಿಕ ವಿಧಿವಿಧಾನಗಳು ಶ್ರೀ ದೇವಳದ ತಂತ್ರಿಗಳಾದ ಪಂಡಿತ್ ನರಸಿಂಹ ಆಚಾರ್ಯರ ನೇತ್ರತ್ವದಲ್ಲಿ ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ನೆರವೇರಲಿದೆ . ದೇಶ ವಿದೇಶಗಳಿಂದ ಸಾವಿರಾರು ಭಜಕರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು ಬಳಿಕ ಜನವರಿ 25 ರಂದು ವರ್ಷಾಮ್ ಪ್ರತಿ ಜರಗುವ ಬ್ರಹ್ಮರಥೋತ್ಸವ ನಡೆಯಲಿರುವುದು.
ಚಿತ್ರ : ಮಂಜು ನೀರೇಶ್ವಾಲ್ಯ

