ಮಂಗಳೂರು :ಉದಯ ಕೃಷ್ಣ ಜಿ ಮತ್ತು ನಿಯತಿ.ಯು ಭಟ್ ಬೆಂಗಳೂರು, ತಂದೆ ಮತ್ತು ಮಗಳು ಜೊತೆಯಾಗಿ ನಡೆಸುವ ದ ದಾಪರ್ ಎಕ್ಸ್ಪೋ ನಾಮದ ಚಿತ್ರಕಲಾ ಪ್ರದರ್ಶನವು ಜನವರಿ 17 ರಿಂದ 19ರ ತನಕ ನಗರದ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ನಡೆಯಲಿದೆ ಎಂದು ಖ್ಯಾತ ಚಿತ್ರ ಕಲಾವಿದರಾದ ಉದಯಕೃಷ್ಣ ಜಿ ತಿಳಿಸಿದರು.

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡು, ಕಾರ್ಯಕ್ರಮದ ಉದ್ಘಾಟನೆಯು ಜನವರಿ 17ರಂದು ಅಪರಾಹ್ನ 3 ಗಂಟೆಗೆ ನಡೆಯಲಿದ್ದು. ಉದ್ಘಾಟನೆಯನ್ನು ವಿಶ್ರಾಂತ ಪ್ರಾಂಶುಪಾಲರಾದ ಪ್ರೋ ಜಿ.ಎನ್ ಭಟ್, ಖ್ಯಾತ ಜಾದೂ ಕಲಾವಿದರಾದ ಪ್ರೋ ಶಂಕರ್,ಖ್ಯಾತ ಚಿತ್ರ ಕಲಾವಿದರಾದ ಗಣೇಶ ಸೋಮಯಾಜಿ ನಡೆಸುವರು.

ಈ ಚಿತ್ರಕಲಾ ಪ್ರದರ್ಶನದಲ್ಲಿ ಪೈಂಟಿಂಗ್ ಆರ್ಟ್, ಡ್ರಾಯಿಂಗ್,ಫೋಟೋಗ್ರಾಫಿ,ಮಂಡಳ ಆರ್ಟ್,ಸ್ಟ್ರಿಂಗ್ ಆರ್ಟ್ ಗಳೆಂಬ 5 ತರದ ಚಿತ್ರಗಳ ಬೇರೆ ಬೇರೆ ಪ್ರದರ್ಶಗಳಿವೆ ಎಂದರು .
ಪತ್ರಿಕಾಗೋಷ್ಠಿಯಲ್ಲಿ ಖ್ಯಾತ ಚಿತ್ರ ಕಲಾವಿದರಾದ ಗಣೇಶ ಸೋಮಯಾಜಿ ,ಕೋಟಿ ಪ್ರಸಾದ್ ಆಳ್ವ ಉಪಸ್ಥಿತರಿದ್ದರು.

