ಮಂಗಳೂರು : ಮಂಗಳೂರಿನ ವಿದ್ಯಾರ್ಥಿಗಳನ್ನು, ಯುವಕರನ್ನು ಗುರಿಯಾಗಿಸಿಕೊಂಡು ಮಾದಕ ದ್ರವ್ಯ ಮಾರಾಟಗಾರರಿಗೆ ಬೆಂಗಳೂರಿನಿಂದ ವ್ಯವಸ್ಥಿತವಾಗಿ ಮಾದಕ ದ್ರವ್ಯಗಳನ್ನು ಪೂರೈಸುತ್ತಿದ್ದ ಉಗಾಂಡಾ ಮೂಲದ ಮಹಿಳೆಯನ್ನು ಮಂಗಳೂರು ನಗರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ಡಿಸೆಂಬರ್ 2025 ರಲ್ಲಿ ಮುಲ್ಕಿ ಮತ್ತು ಸುರತ್ಕಲ್ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಲ್ಪಟ್ಟ ಮಾದಕವಸ್ತು ಮಾರಾಟಗಾರರು ನೀಡಿದ ಮಾಹಿತಿಯ ಮೇರೆಗೆ, ಮಂಗಳೂರಿನ ಸಿಸಿಬಿ ಅಧಿಕಾರಿಗಳು ಉಗಾಂಡಾ ಮೂಲದ ಜಲಿಯಾ ಜಲ್ವಾಂಗೊ ಎಂಬಾಕೆಯನ್ನು ಬೆಂಗಳೂರಿನ ಹೊರವಲಯದ ಜಿಗಣಿಯಲ್ಲಿ ಬಂಧಿಸಿದ್ದಾರೆ.ಆಕೆಯಿಂದ ಸುಮಾರು 4 ಕೋಟಿ ಮೌಲ್ಯದ 4 ಕೆಜಿ ಎಂಡಿಎಂಎ ವಶಪಡಿಸಿ ಕೊಳ್ಳಲಾಗಿದೆ.
ಮಂಗಳೂರು ಪ್ರದೇಶಕ್ಕೆ ಮಾದಕ ದ್ರವ್ಯಗಳನ್ನು ಪೂರೈಸುವಲ್ಲಿ ಪ್ರಮುಖ ಲಿಂಕ್ ಅನ್ನು ಪತ್ತೆಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಲ್ಲಿಯವರೆಗೆ, ಈ ಜಾಲಕ್ಕೆ ಸಂಬಂಧಿಸಿದ ಆರು ಮಾದಕ ದ್ರವ್ಯ ಮಾರಾಟಗಾರರನ್ನು ಬಂಧಿಸಲಾಗಿದ್ದು, ಪ್ರಸ್ತುತ ಅವರು ಜೈಲಿನಲ್ಲಿದ್ದಾರೆ.ಇದೀಗ ಉಗಾಂಡಾ ಮಹಿಳೆಗೂ ನ್ಯಾಯಾಂಗ ಬಂಧನ ವಿದಿಸಿದ್ದು ಪೋಲಿಸ್ ಕಸ್ಟಡಿ ಪಡೆದು ಹೆಚ್ಚಿನ ವಿವರಗಳನ್ನು ಸಂಗ್ರಹಿಸಲು ಅವರನ್ನು ಹೆಚ್ಚಿನ ವಿಚಾರಣೆ ನಡೆಸಲಾಗುವುದೆಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

