ಲಕ್ನೋ: ಉತ್ತರ ಪ್ರದೇಶದ ಕುಶಿನಗರ ಪ್ರದೇಶದಲ್ಲಿ ಸೋಮವಾರ ಬೆಳಿಗ್ಗೆ ನಡೆದ ಭೀಕರ ಜೋಡಿ ಕೊಲೆಯಲ್ಲಿ, ತಾಯಿ ಮತ್ತು ಹೆಂಡತಿಯನ್ನು ಕೊಂದು ಮ್ರತದೇಹದ ಮಾಂಸ ಸೇವಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಆರೋಪಿಯನ್ನು ಸಿಕಂದರ್ ಗುಪ್ತಾ (30) ಎಂದು ಗುರುತಿಸಲಾಗಿದ್ದು, ಬಲಿಯಾದವರನ್ನು ಪ್ರಿಯಾಂಕಾ (28) ಮತ್ತು ರೂನಾ ದೇವಿ (60) ಎಂದು ಗುರುತಿಸಲಾಗಿದೆ.

ಪ್ರತಿ ದಿನದಂತೆ ಸೋಮವಾರ ಬೆಳಿಗ್ಗೆಯೂ ಪ್ರಿಯಾಂಕ ಮತ್ತು ಆಕೆಯ ಅತ್ತೆ ರೂನಾ ದೇವಿ ಟೆರೇಸ್ ಮೇಲೆ ಚಳಿ ಕಾಯಿಸಲು ಬೆಂಕಿಯ ಬಳಿ ಕುಳಿತಿದ್ದರು.ಆಗ ಸಿಕಂದರ್ ಕುಡಿದ ಮತ್ತಿನಲ್ಲಿ ಅಲ್ಲಿಗೆ ಬಂದಿದ್ದ. ಹೆಂಡತಿ ತನ್ನ ಮದ್ಯಪಾನಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ, ಇಬ್ಬರ ನಡುವೆ ಜಗಳ ಶುರುವಾಯಿತು.ಆಗ ಕೋಪದಲ್ಲಿ ಸಿಕಂದರ್ ಟೆರೇಸ್ ಮೇಲಿದ್ದ ಇಟ್ಟಿಗೆಯ ತುಂಡನ್ನು ಎತ್ತಿಕೊಂಡು ಹಿಂದಿನಿಂದ ಬಂದು ಪ್ರಿಯಾಂಕಾಳ ತಲೆಗೆ ಹೊಡೆದನು ,ಆ ಸಂಧರ್ಭದಲ್ಲಿ ಜಗಳ ಬಿಡಿಸಲು ಆತನ ತಾಯಿ ಮಧ್ಯಪ್ರವೇಶಿಸಲು ಹೋದಾಗ,ಅದೇ ಕಲ್ಲಿನಿಂದ ತಾಯಿಯ ತಲೆಯ ಮೇಲೆ ಹಲ್ಲೆ ಮಾಡಿದನು. ಇಬ್ಬರೂ ಪ್ರಜ್ಞೆ ತಪ್ಪಿದ ನಂತರ, ಆತ ಹೆಂಡತಿ ಮತ್ತು ತಾಯಿಯ ತಲೆಗಳನ್ನು ಸಿಮೆಂಟಿನ ಇಟ್ಟಿಗೆಯಿಂದ ಜಜ್ಜಿ ಪುಡಿಪುಡಿ ಮಾಡಿದ್ದಾನೆ.

ಸಿಕಂದರ್ ಸುಮಾರು ಒಂದೂವರೆ ಗಂಟೆಗಳ ಕಾಲ ಟೆರೇಸ್ ಮೇಲೆ ಕುಳಿತು ದೇಹವನ್ನು ಛಿದ್ರಗೊಳಿಸಿ ಛಾವಣಿಯಿಂದ ಮಾಂಸದ ತುಂಡನ್ನು ತನ್ನ ಮನೆಯ ಹತ್ತಿರದ ರಸ್ತೆಗೆ ಎಸೆಯಲು ಪ್ರಾರಂಭಿಸಿದನು. ಆ ಮೂಲಕ ಹಾದುಹೋಗುವ ಜನರು ಮಾಂಸದ ತುಂಡನ್ನು ನೋಡುವುದನ್ನು ನಿಲ್ಲಿಸಿ ಮನೆ ಬಾಗಿಲ ಬಳಿ ನಿಂತು ರೂನಾ ಮತ್ತು ಪ್ರಿಯಾಂಕಾ ಅವರನ್ನು ಕೂಗಲು ಪ್ರಾರಂಭಿಸಿದರು.ಮನೆಯ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ಕೆಲವು ಯುವಕರು ಛಾವಣಿಯ ಮೇಲೆ ಹತ್ತಲು ಪ್ರಯತ್ನಿಸಿದರು ಆಗ ಸಿಕಂದರ್ ಛಾವಣಿಯ ಮೇಲೆ ಕುಳಿತು ಅವರ ತಲೆಬುರುಡೆಗಳಿಂದ ಮಾಂಸವನ್ನು ಹರಿದು ತಿನ್ನುತ್ತಿದ್ದ, ಮಾಂಸದ ತುಂಡನ್ನು ತಿಂದು ಅದನ್ನು ಎಲ್ಲೆಡೆ ಎಸೆಯುತ್ತಿದ್ದ ಕೂಡಲೇ ಯುವಕರ ತಂಡ ಅವನನ್ನು ಹಿಡಿಯಲು ಪ್ರಯತ್ನಿಸಿದಾಗ ಸಿಕಂದರ್ ಅವರ ಮೇಲೆ ಇಟ್ಟಿಗೆಗಳನ್ನು ಎಸೆಯಲು ಪ್ರಾರಂಭಿಸಿದನು.

ಗ್ರಾಮಸ್ಥರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು. ಪ್ರಕರಣದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತಲುಪಿ ಗ್ರಾಮಸ್ಥರ ಸಹಾಯದಿಂದ ಸಾಕಷ್ಟು ಶ್ರಮವಹಿಸಿ ಆರೋಪಿಯನ್ನು ಬಂಧಿಸಿದರು. ಯುವಕನ ಸಹೋದರಿಯ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು,



ಪಾರ್ಸಾ ಗ್ರಾಮದ ನಿವಾಸಿ ಸಿಕಂದರ್ ಕೂಲಿ ಕಾರ್ಮಿಕನಾಗಿದ್ದು ನಾಲ್ಕು ವರ್ಷಗಳ ಹಿಂದೆ ಡಿಯೋರಿಯಾ ಜಿಲ್ಲೆಯ ನಿವಾಸಿ ರಾಜೇಂದ್ರ ಗುಪ್ತಾ ಅವರ ಪುತ್ರಿ ಪ್ರಿಯಾಂಕಾ ಅವರನ್ನು ವಿವಾಹವಾಗಿದ್ದರು. ಮದುವೆಯಾಗಿ ನಾಲ್ಕು ವರ್ಷಗಳಾದರೂ ಸಿಕಂದರ್ ಮತ್ತು ಪ್ರಿಯಾಂಕಾ ಅವರಿಗೆ ಮಕ್ಕಳಿರಲಿಲ್ಲ.ಇದರಿಂದಾಗಿ ಕುಟುಂಬದಲ್ಲಿ ಜಗಳ ನಡೆಯುತ್ತಾ ಇತ್ತು.ಇದರ ಜೊತೆಗೆ ಕುಡಿತ ಮತ್ತು ಮಾದಕ ವಸ್ತುಗಳ ವ್ಯಸನವೂ ಕುಟುಂಬದ ಭಿನ್ನಾಭಿಪ್ರಾಯಕ್ಕೆ ಕಾರಣವಾಯಿತು. ಸಿಕಂದರ್ನ ಈ ದುಶ್ಚಟಗಳಿಂದಾಗಿ ತಾಯಿ ಕೂಡ ಅಸಮಾಧಾನ ಗೊಂಡಿದ್ದಳು.ಈ ಘಟನೆಯೇ ಕೌಟುಂಬಿಕ ಕಲಹಕ್ಜೆ ಕಾರಣ ಎಂದು ನಂಬಲಾಗಿದೆ.

