ಮಂಗಳೂರು :ಬಾಂಗ್ಲಾದೇಶಿ ಎಂದು ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿ ಹಲ್ಲೆಗೈದು ಜನಾಂಗೀಯ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಕಾವೂರು ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ,
ಬಂಧಿತನನ್ನು ಕೂಳೂರು ನಿವಾಸಿ ಮೋಹನ (37) ಎಂದು ಗುರುತಿಸಲಾಗಿದೆ. ಈ ಮೊದಲು ಕೂಳೂರಿನ ರತೀಶ್ ದಾಸ್ (32), ಧನುಷ್ (24), ಸಾಗರ್ (24) ಎಂಬವರನ್ನು ಬಂಧಿಸಲಾಗಿತ್ತು,ಮೋಹನ್ನ ಬಂಧನದೊಂದಿಗೆ ಪ್ರಕರಣದ ನಾಲ್ಕು ಮಂದಿ ಆರೋಪಿಗಳನ್ನೂ ಪೊಲೀಸರು ಬಂಧಿಸಿದಂತಾಗಿದೆ
ಕಳೆದ 15 ವರ್ಷಗಳಿಂದ ಮೇಸ್ತ್ರಿ ಕೆಲಸ ಮಾಡುತ್ತಿದ್ದ ದಿಲ್ಜಾನ್ ಅನ್ಸಾರಿ ಜ.11ರಂದು ಸಂಜೆ ಕೆಲಸ ಮುಗಿಸಿ ಕೂಳೂರಿನಲ್ಲಿ ಬಸ್ಸಿನಿಂದ ಇಳಿದು ಮನೆಗೆ ಹೋಗುತ್ತಿದ್ದಾಗ ಆರೋಪಿಗಳು ದಿಲ್ಜಾನ್ ಅನ್ಸಾರಿಯನ್ನು ರಸ್ತೆ ಮಧ್ಯೆ ತಡೆದು ಬಾಂಗ್ಲಾದೇಶಿ ಪ್ರಜೆ ಎಂದು ನಿಂದಿಸಿ ದೌರ್ಜನ್ಯ ಎಸಗಿದ್ದ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ತನಿಖೆ ನಡೆಸಿದ ಪೊಲೀಸರು ಮಂಗಳವಾರ ಮೂವರು ಆರೋಪಗಳನ್ನು ಬಂಧಿಸಿದ್ದರು.

