ಧಾರವಾಡ : ಇಲ್ಲಿಯ ಮುರುಘಾಮಠದ ಶ್ರೀಅಥಣಿ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ನಗರದ ಶಿವಾಜಿ ಸರ್ಕಲ್ ಬಳಿ ಇರುವ ಆರ್ಥೋ ಕೇರ್ ಕ್ಲಿನಿಕ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಜ.22ರಂದು(ಗುರುವಾರ) ಮುಂಜಾನೆ 10-30 ರಿಂದ ಅಪರಾಹ್ನ 2-30 ರವರೆಗೆ ಮುರುಘಾಮಠದಲ್ಲಿ ಜರುಗಲಿದೆ.

ಹೃದ್ರೋಗ ಕಾಯಿಲೆಗಳು, ಮಂಡಿನೋವು, ಕೀಲು ಸವಕಳಿ, ಬೆನ್ನುಮೂಳೆ ಮತ್ತು ಕುತ್ತಿಗೆ ನೋವು, ಕೈ-ಕಾಲುಗಳ ನರ ಸೆಳೆತ, ಎಲುಬು ಹಾಗೂ ನರರೋಗಗಳು, ರಕ್ತದೊತ್ತಡ(ಬಿಪಿ), ಮಧುಮೇಹ(ಶುಗರ್) ಸೇರಿದಂತೆ ವಿವಿಧ ಸಾಮಾನ್ಯ ಕಾಯಿಲೆಗಳ ಉಚಿತ ತಪಾಸಣೆ ಹಾಗೂ ಸೂಕ್ತ ಚಿಕಿತ್ಸೆಗೆ ಮಾರ್ಗದರ್ಶನವನ್ನು ತಜ್ಞ ವೈದ್ಯರುಗಳಾದ ಡಾ. ವಿಕಾಸ ಗುರು ತಿಗಡಿ ಹಾಗೂ ಡಾ. ಅಭಿಷೇಕ ಹಿರೇಮಠ ಅವರು ಈ ಶಿಬಿರದಲ್ಲಿ ನೀಡುವರು. ಆಸಕ್ತರು 9886649376 ಅಥವಾ 8073602950 ಕ್ಕೆ ಸಂಪರ್ಕಿಸಿ ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆ ತಿಳಿಸಿದೆ.

