ಮಂಗಳೂರು : ಲಯನ್ಸ್ ಜಿಲ್ಲೆ 317D, ಪ್ರಾಂತ್ಯ III, ಪ್ರಾಂತೀಯ ಸಮ್ಮೇಳನ ‘ಪರಿಕ್ರಮ’ ಜನವರಿ 24ರಂದು ಮಂಗಳೂರಿನಲ್ಲಿ ಆಯೋಜನೆಗೊಳ್ಳಲಿದೆ ಎಂದು ಪ್ರಾಂತ್ಯ IIIರ ಪ್ರಾಂತೀಯ ಅಧ್ಯಕ್ಷೆ ಗಾಯತ್ರಿ ಅರವಿಂದ ರಾವ್ ಕೇದಿಗೆ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ 200ಕ್ಕೂ ಹೆಚ್ಚು ದೇಶಗಳಲ್ಲಿ 1.4 ಮಿಲಿಯನ್ ಸದಸ್ಯರನ್ನು ಹೊಂದಿರುವ ವಿಶ್ವದ ಅತಿದೊಡ್ಡ ಸೇವಾ ಸಂಸ್ಥೆಯಾಗಿದೆ ಮತ್ತು ಮಾನವೀಯ ಸೇವೆಗೆ ಸದಾ ಬದ್ಧವಾಗಿದೆ, ಲಯನ್ಸ್ ಜಿಲ್ಲೆ 317D, ಪ್ರಾಂತ III ವತಿಯಿಂದ ‘ಪರಿಕ್ರಮ’ ಪ್ರಾಂತೀಯ ಸಮ್ಮೇಳನವನ್ನು ಜನವರಿ 24 ರಂದು ಶನಿವಾರ ಲಯನ್ಸ್ ಕ್ಲಬ್ ಮಂಗಳೂರು ನೇತ್ರಾವತಿ ಇವರ ಆತಿಥ್ಯದಲ್ಲಿ ಮಂಗಳೂರಿನ ಸುಲ್ತಾನ್ ಬತ್ತೇರಿ ಬಳಿ ಇರುವ ಸ್ವಸ್ತಿಕಾ ವಾಟರ್ ಫಂಟ್, ಇಲ್ಲಿ ಸಾಯಂಕಾಲ 3:30 ಕ್ಕೆ ಆಯೋಜಿಸಲಾಗಿದೆ. ಈ ಸಮ್ಮೇಳನದಲ್ಲಿ ಸುಮಾರು 500ಕ್ಕೂ ಹೆಚ್ಚು ಲಯನ್ಸ್ ಕ್ಲಬ್ ಸದಸ್ಯರು, ಲಯನ್ಸ್ ಜಿಲ್ಲಾ ಪದಾಧಿಕಾರಿಗಳು ಹಾಗೂ ಆಹ್ವಾನಿತ ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ನಂತರ ಪ್ರಾಂತೀಯ ಸಮ್ಮೇಳ ಸಮಿತಿಯ ಅಧ್ಯಕ್ಷೆ ಗೀತಾ ಆರ್. ಶೆಟ್ಟಿ,ಅವರು ಮಾತನಾಡಿ ಈ ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಶೆಟ್ಟಿ ಅವರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮವನ್ನು ಪ್ರಾಂತ್ಯದ ಪ್ರಥಮ ಲಯನ್ ಡಾ. ಕೇದಿಗೆ ಅರವಿಂದ ರಾವ್ ಉದ್ಘಾಟಿಸಲಿದ್ದಾರೆ. ಪ್ರಾಂತ್ಯ IIIರ ಪ್ರಾಂತೀಯ ಅಧ್ಯಕ್ಷೆ ಗಾಯತ್ರಿ ಅರವಿಂದ ರಾವ್ (MJF) ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಈ ವರ್ಷದ ಸೇವಾ ಚಟುವಟಿಕೆಗಳ ಆಧಾರದ ಮೇಲೆ ಪ್ರಾಂತ್ಯದ ವಿವಿಧ ಲಯನ್ಸ್ ಕ್ಲಬ್ಗಳಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.ಅದೇ ರೀತಿ ದಾನಿಗಳನ್ನು ವಿಶೇಷವಾಗಿ ಗೌರವಿಸಲಾಗುವುದು.ಸಮ್ಮೇಳನದ ಮೂಲಕ ಸಮಾಜಮುಖಿ ಹಾಗೂ ಮಾನವೀಯ ಸೇವಾ ಯೋಜನೆಗಳಿಗೆ ಬೆಂಬಲವನ್ನು ಬಲಪಡಿಸುವ ಉದ್ದೇಶ ಹೊಂದಿದ್ದು, ಮುಖ್ಯವಾಗಿ ದೈಹಿಕ ಹಾಗೂ ಮಾನಸಿಕವಾಗಿ ಅಂಗವೈಕಲ್ಯ ಹೊಂದಿರುವ ಮಕ್ಕಳಿಗೆ ನೆರವು,ವಿಭಿನ್ನ ಸಾಮರ್ಥ್ಯದ ವ್ಯಕ್ತಿಗಳಿಗೆ ಕೃತಕ ಅಂಗಗಳ ಒದಗಿಸುವಿಕೆ, ಕ್ಯಾನ್ಸರ್ನೊಂದಿಗೆ ಹೋರಾಡುತ್ತಿರುವ ಮಕ್ಕಳಿಗೆ ಸಹಾಯ,ವೃದ್ಧಾಶ್ರಮಗಳು ಹಾಗೂ ನಿರ್ಗತಿಕರ ಆಶ್ರಯ ಕೇಂದ್ರಗಳಿಗೆ ನೆರವು,ಕೆಲವು ಆಯ್ದ ಗ್ರಾಮೀಣ ಸರ್ಕಾರಿ ಶಾಲೆಗಳ ಶೌಚಾಲಯಗಳ ದುರಸ್ತಿ ಮತ್ತು ನವೀಕರಣಕ್ಕೆ ಸಹಾಯ ಇತ್ಯಾದಿ ಕಾರ್ಯವನ್ನು ಹಮ್ಮಿಕೊಂಡಿದ್ದೇವೆ ಎಂದರು.

ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ
ಕ್ಲಬ್ ಬ್ಯಾನರ್ ಪ್ರಸ್ತುತಿ , ಸ್ವಾಗತ ನೃತ್ಯ,ಉದ್ಘಾಟನಾ ಸಮಾರಂಭ, ಗೌರವ ಸಮರ್ಪಣೆಗಳು ಮತ್ತು ಕ್ಲಬ್ ಪ್ರಶಸ್ತಿಗಳು ,ಸಾಂಸ್ಕೃತಿಕ ಮನರಂಜನೆ, ಸ್ನೇಹಸಮ್ಮಿಲನ ಮತ್ತು ಭೋಜನ ಕೂಟ ನಡೆಯಲಿದೆ ಅಲ್ಲದೆ ಸಮಾಜದ ದಾನಿಗಳು, ಉದ್ಯಮಿಗಳು ಮತ್ತು ಹಿತೈಷಿಗಳಿಂದ ಪ್ರಾಯೋಜಕತ್ವ, ದೇಣಿಗೆ ಹಾಗೂ ಸಹಕಾರವನ್ನು ಲಯನ್ಸ್ ಸಂಸ್ಥೆ ವಿನಂತಿಸುತ್ರಿದೆ. ಈ ಕೊಡುಗೆಗಳನ್ನು ಸಮ್ಮೇಳನದ ವೇಳೆ ಗೌರವಪೂರ್ವಕವಾಗಿ ಗುರುತಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಕೇದಿಗೆ ಅರವಿಂದ ರಾವ್, ಪರಿಕ್ರಮ ಪ್ರಾಂತೀಯ ಸಮ್ಮೇಳ ಸಮಿತಿಯ ಕಾರ್ಯದರ್ಶಿ ಆಶಾ ರಾವ್ ಅರೂರು, ಆತಿಥೇಯ ಕ್ಲಬ್ ಅಧ್ಯಕ್ಷೆ ವಿನಯಾ.ಎಸ್. ಶೆಟ್ಟಿ, ವಲಯಾಧ್ಯಕ್ಷರುಗಳಾದ ನಿರ್ಮಲಾ ಪ್ರಮೋದ್ ಮತ್ತು ಪ್ರೀತಿ.ಎಸ್. ರೈ ಉಪಸ್ಥಿತರಿದ್ದರು.

