ಮಂಗಳೂರು : ಮುಲ್ಕಿ ,ಶಿಮಂತೂರು ಸಮೀಪದ ಪರೆಂಕಿಲ ಇಲ್ಲಿನ ಅವಧೂತ ಭಗವಾನ್ ಶ್ರೀ ನಿತ್ಯಾನಂದ ಸ್ವಾಮಿ ನೂತನ ಧ್ಯಾನ ಮಂದಿರದಲ್ಲಿ ಶಿಲಾಬಿಂಬ ಪ್ರತಿಷ್ಠೆ ಹಾಗೂ ಕುಂಭಾಭಿಷೇಕ ಹಾಗೂ ದೇವತಾ ಕಾರ್ಯಕ್ರಮಗಳು ಕೊರೆಕ್ಕಾನ ತಂತ್ರಿ ಶ್ರೀ ನಾರಾಯಣ ಭಟ್ ಇವರ ನೇತ್ರತ್ವದಲ್ಲಿ ಫೆಬ್ರವರಿ 4 ರಿಂದ ಪ್ರಾರಂಭವಾಗಿ 6-2-2026 ಶುಕ್ರವಾರದ ವರೆಗೆ ನಡೆಯಲಿದೆ.

ದಿನಾಂಕ 4 ರಂದು ಬುಧವಾರ ಮೊದಲ್ಗೊಂಡು 6 ರ ಶುಕ್ರವಾರದವರೆಗೆ ಪ್ರಾತಃ ಕಾಲ 7 ರಿಂದ ವಿವಿಧ ದೇವತಾ ಕಾರ್ಯಗಳು ಪ್ರಾರಂಭವಾಗುವುದು ಸಂಜೆ 5 ರಿಂದ ವಿವಿಧ ಹೋಮ ಹವನ ಪೂಜಾ ಕಾರ್ಯಕ್ರಮಗಳು ನಡೆಯಲಿದೆ.
ದಿನಾಂಕ 4 ರಂದು ಬುಧವಾರ,ಪ್ರಾತಃ ಕಾಲ 7:00ರಿಂದ ದೇವತಾ ಪ್ರಾರ್ಥನೆ, ಶಿಲ್ಪಿಗಳಿಂದ ದೇಹ ಪ್ರತಿಗ್ರಹ ಪಂಚಗವ್ಯ ಪುಣ್ಯಾಹ, ಆಚಾರ್ಯಾವರಣ, ಪ್ರಾಸಾದ ಶುದ್ಧಿ ಸಪ್ತಶುದ್ಧಿ, ಗೋನಿವಾಸ, ಮಂಟಪ ಶುದ್ಧಿ,ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಆದ್ಯ ಗಣಯಾಗ ಬಿಂಬಶುದ್ಧಿ, ಬಿಂಬ ಜಲಾಧಿವಾಸ,
ಸಂಜೆ 5 ರಿಂದ ರಾಕ್ಟೋಘ್ನ ಹವನ, ವಾಸ್ತು ಹವನ, ಬಲಿ, ದಿಗ್ಬಲ, ಅಸ್ತ್ರ ಕಲಶ, ಬಿಂಬ ಶುದ್ಧಿ ಕಲಶ, ಶಯ್ಯ ಕಲ್ಪನೆ, ಕುಂಭೇಶ ಕರ್ಕರೀ ಪೂಜೆ ,ಸಿದ್ರಾ ಕಲಶ ಸ್ಥಾಪನೆ, ದುರ್ಗಾಪೂಜೆ ನಡೆಯಲಿದೆ.
ದಿನಾಂಕ 5 ರಂದು ಗುರುವಾರ ಪ್ರಾತಃ ಕಾಲ 7:00 ರಿಂದ ಗಣಪತಿ ಹವನ, ನವಗ್ರಹ ಹವನ, ಬಿಂಬ ಜಲೋಧ್ದಾರ,ಬಿಂಬ ಆಧಿವಾಸ ಹವನ, ಪ್ರೋಕ್ತ ಶಾಂತಿ ಹವನ, ಬಿಂಬ ಶಯ್ಯಾಧಿವಾಸ, ವಿದ್ಯೇಶ ಕಲಶ,ಅಷ್ಟಮಂಗಲ ಸ್ಥಾಪನೆ, ಸಂಜೆ 5ರಿಂದ ಏಕೋಶ ಪಂಚಾಶತ್ ಕಲಶ ಪೂಜನ ಪೂರ್ವಕ ಬ್ರಹ್ಮಕಲಶ ಪೂಜೆ, ದುರ್ಗಾಪೂಜೆ, ಕಲಶ ಅಧಿವಾಸ ಹವನ, ಶಕ್ತಿಹವನ, ಅಷ್ಟಬಂಧ ಶುದ್ಧಿ, ಪೀಠ ಪ್ರತಿಷ್ಠೆ, ರತ್ನನ್ಯಾಸ ರಕ್ಷೆ ನಡೆಯಲಿದೆ.

ದಿನಾಂಕ 6 ರಂದು ನೂತನ ಬಿಂಬ ಪ್ರತಿಷ್ಠೆ, ಅಷ್ಟಬಂಧ ಲೇಪನ, ಕಲಶ ಅಭಿಷೇಕ, ಪಂಚಾಮ್ರತ ಅಭಿಷೇಕ ಸಹಿತ ಬ್ರಹ್ಮ ಕುಂಭಾಭಿಷೇಕ,ಅಲಂಕಾರ ಪೂಜೆ, ಮಂತ್ರಾಕ್ಷತೆ, ಹಾಗೂ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಕಲಾ ಸಾರಥಿ ತೋನ್ಸೆ ಪುಷ್ಕಳ ಕುಮಾರ್ ಅವರಿಂದ ಪರಬ್ರಹ್ಮ ಶ್ರೀ ಗುರು ನಿತ್ಯಾನಂದ ಚರಿತೆ ಕಥಾ ಕೀರ್ತನ ನಡೆಯಲಿದೆ. ಸಂಜೆ 5 ರಿಂದ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಭಕ್ತಾಧಿಗಳಾದ ತಾವೆಲ್ಲರೂ ಚಿತ್ತೈಸಿ ಸದ್ಗುರುಗಳ ಕ್ರಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

