ಮಂಗಳೂರು : ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯವು ಜನವರಿ 2026 ಅವಧಿಗೆ ಪ್ರವೇಶವನ್ನು ಘೋಷಿಸಿದೆ, ಪದವಿ,ಸ್ನಾತಕೋತ್ತರ ಪದವಿ,ಡಿಪ್ಲೋಮೋ ಮತ್ತು ಸರ್ಟಿಫಿಕೇಟ್ ಹಂತಗಳಲ್ಲಿ, ಆನ್ವೆನ್ ಅರ್ಜಿಯನ್ನು ಸಲ್ಲಿಸಲು ಆಸಕ್ತ ವಿದ್ಯಾರ್ಥಿಗಳು https://ignouadmission.samarth.edu.in ಪ್ರವೇಶ ಪಡೆಯಬಹುದಾಗಿದೆ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಇದರ ಪ್ರಾದೇಶಿಕ ಉಪ ನಿರ್ದೇಶಕರಾದ ಡಾ.ಕಸ್ತೂರಿ ಪೇಸಾಲ ತಿಳಿಸಿದರು.

ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಅಧ್ಯಯನ ಕೇಂದ್ರದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಬ್ಯಾಚುಲರ್ ಆಫ್ ಆರ್ಟ್ಸ್ , ಬ್ಯಾಚುಲರ್ ಆಫ್ ಕಾಮರ್ಸ್ ಮತ್ತು ಬ್ಯಾಚುಲರ್ ಆಫ್ ಸೈನ್ಸ್ ಕಾರ್ಯಕ್ರಮಗಳಿಗೆ ವಾರ್ಷಿಕ ಆದಾಯ 2.5 ಲಕ್ಷಕ್ಕಿಂತ ಕಡಿಮೆ ಹೊಂದಿರುವ ಎಸ್ ಸಿ ಮತ್ತು ಎಸ್ ಟಿ ವಿದ್ಯಾರ್ಥಿಗಳು ಪ್ರವೇಶ ಶುಲ್ಕದಲ್ಲಿ 50% ವಿನಾಯಿತಿಯನ್ನು ಪಡೆಯಬಹುದು. ಪ್ರವೇಶ ಪರೀಕ್ಷೆ ಇಲ್ಲದೆ MBAಗೆ ಇನ್ನೂ ನೇರ ಪ್ರವೇಶವನ್ನು ಒದಗಿಸುತ್ತಿದೆ . ೪೫ ಕ್ಕೂ ಅಧಿಕ ವಿಷಯ ವಸ್ತುಗಳ ಕಲಿಕೆಗೆ ಅವಕಾಶ ಇದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ ಅಧ್ಯಯನ ಕೇಂದ್ರದ ಸಂಯೋಜಕರು ಡಾ ಅನುಪ್ ಡೆಸ್ಟಿಲ್ ವೇಗಸ್

