ದುಬೈ : ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ವತಿಯಿಂದ ದಿವಂಗತ ವಸಂತ್ ಬೇಕಲ್ ಸ್ಮರಣಾರ್ಥ ನಡೆಯುವ ಮಾರ್ಗದೀಪ ಪ್ರೀಮಿಯರ್ ಲೀಗ್-4 (MPL-Season-04) ಕ್ರಿಕೆಟ್ ಟೂರ್ನಮೆಂಟ್ ನ ಜರ್ಸಿ ಬಿಡುಗಡೆ ಇತ್ತೀಚೆಗೆ ನಡೆಯಿತು.


ದುಬೈನ ಎಂ.ಎಂ.ಸಿ.ಟಿ.ಗ್ರೌಂಡ್ ನಲ್ಲಿ ನಡೆದ ಜರ್ಸಿ ಬಿಡುಗಡೆ ಕಾರ್ಯಕ್ರಮವನ್ನು ಮುಖ್ಯ ಅತಿಥಿಯಾಗಿ ಉದ್ಯಮಿ ರೋಷನ್ ಕಂಪ, ರಾಮಕ್ಷತ್ರಿಯ ಸಂಘ ಯುಎಇ ಅಧ್ಯಕ್ಷರಾದ ಇಶ್ವರ್ ಬಲ್ಕಿ, ರಕ್ಷಿತ್ ಪುತ್ತೂರು, ರೇಷ್ಮಾ ಹಾಗೂ ವೇದ, ಯೂಟ್ಯೂಬರ್ ಸಂತೋಷ್ ಶೆಟ್ಟಿ ಪೊಳಲಿರವರು ಬಿಡುಗಡೆಗೊಳಿಸಿದರು.


ಮಹೇಶ್ ಚಂದ್ರಗಿರಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸುಗಂಧರಾಜ ಬೇಕಲ್ ಸ್ವಾಗತಿಸಿದರು, ಸ್ಪೋರ್ಟ್ಸ್ ಕಾರ್ಯದರ್ಶಿ ಸುಬ್ರಹ್ಮಣ್ಯ ಕುದುರೆಕೋಡು ಕಾರ್ಯಕ್ರಮದ ಜವಾಬ್ದಾರಿಯನ್ನು ವಹಿಸಿದರು. ಫೆಬ್ರವರಿ ಒಂದರಂದು ಶಾರ್ಜಾದ ಬತಾಯ ಮೈದಾನದಲ್ಲಿ ಪಂದ್ಯಾಟ ನಡೆಯಲಿದೆ.


ಬಿಡುಗಡೆ ಕಾರ್ಯಕ್ರಮವನ್ನು ಹರಿಕೋಟೆ ನಿರೂಪಿಸಿದರು. ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ಪದಾಧಿಕಾರಿಗಳಾದ ಉಪಾಧ್ಯಕ್ಷರಾದ ಪ್ರವೀಣ್ ಉಪ್ಪೂರು, ಕಾರ್ಯದರ್ಶಿ ಸುನೀಲ್ ರಾವ್, ರಾಜೇಶ್ ರಾವ್, ಅಜೀತ್ ಕೊರಕಾಡ್ ಹಾಗೂ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.




