ಮಂಗಳೂರು : ಜ್ಯೋತಿಷ್ಯ ಶಾಸ್ತ್ರ ಮತ್ತು ಸಮಾಜ ಸೇವೆಗಾಗಿ ಸಿ.ಕೆ.ನಾಗೇಂದ್ರ ಭಾರದ್ವಾಜ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ.

ಹಿರಿಯರು, ಮಾರ್ಗದರ್ಶಕರು, ಖ್ಯಾತ ಜ್ಯೋತಿಷ್ಯರು, ಸಮಾಜ ಸೇವಕರಾಗಿ ಹಿಂದೂ ಸಮಾಜದ ಸಂಘಟನೆಗೆ ಮಾರ್ಗದರ್ಶಕರಾಗಿ, ಧಾರ್ಮಿಕ ಕಾರ್ಯಕ್ರಮಗಳಿಗೆ ಪೋಷಕರಾಗಿ ಸದಾ ಸಮಾಜಮುಖಿಯಾಗಿ ಚಿಂತಿಸುವ, ಸಮಾಜಮುಖಿಯಾಗಿ ಕೆಲಸ ಮಾಡುವವರನ್ನು ಸದಾ ಬೆನ್ನು ತಟ್ಟಿ ಪ್ರೋತ್ಸಾಹಿಸಿ ಸಹಕಾರ ನೀಡುವ ಹಾಗೂ ಶ್ರೀ ವಿಶ್ವನಾಥ ದೇವಸ್ಥಾನ, ಕೃಷ್ಣಾಪುರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಹಿಂದೂ ಸಂಗಮ ಆಯೋಜನ ಸಮಿತಿ ಸುರತ್ಕಲ್ ನಗರ ಸಮಿತಿಯ ಗೌರವಾಧ್ಯಕ್ಷರಾದ ದೈವಜ್ಙರಾದ ಶ್ರೀ ಕೆ.ಸಿ. ನಾಗೇಂದ್ರ ಭಾರದ್ವಾಜ್ ರವರಿಗೆ ಜ್ಯೋತಿಷ್ಯ ಮತ್ತು ಸಮಾಜ ಸೇವೆಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ.

ಈ ಎಲ್ಲಾ ಸಾಧನೆಗಳಲ್ಲಿ ಅವರಿಗೆ ಸಹಕಾರಿಯಾಗಿ ನಿಂತ ಅವರ ಧರ್ಮ ಪತ್ನಿ ಶ್ರೀಮತಿ ಜಲಜಾಕ್ಷಿ ನಾಗೇಂದ್ರ ಭಾರದ್ವಾಜ್ ರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


