ಮಂಜೇಶ್ವರ: ಕುಂಜತ್ತೂರು ತೂಮಿನಾಡು ಹಿಲ್ ಟಾಪ್ ನಗರದಲ್ಲಿ ಮಾದಕ ವ್ಯಸನಿ ತಂದೆಯೊಬ್ಬ ತನ್ನ ಸ್ವಂತ ಪುತ್ರಿಯನ್ನೇ ಇರಿದು ಕೊಲೆಗೈದಿದ್ದಾನೆ. ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಕುಂಜತ್ತೂರು ತೂಮಿನಾಡು ಹಿಲ್ ಟಾಪ್ ನಗರ ನಿವಾಸಿ ಉಮರ್ ಪಾಷ ಎಂಬಾತ ತನ್ನ ಪುತ್ರಿ ಮರಿಯಮತ್ ಜುಮೈರಾ (18) ಯನ್ನು ತೀವ್ರವಾಗಿ ಇರಿದು ಕೊಲೆ ಮಾಡಿದ್ದಾನೆ.


ಘಟನೆಯನ್ನು ತಡೆಯಲು ಮುಂದಾದ ಯುವತಿಯ ದೊಡ್ಡಪ್ಪ ಶೇಕುಂಞಗೂ ಇರಿದಿದ್ದು, ಅವರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ನಂತರ ಸ್ಥಳಕ್ಕೆ ಧಾವಿಸಿದ ಮಂಜೇಶ್ವರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಹತ್ಯೆಗೆ ಕಾರಣ ಮತ್ತು ಹಿನ್ನೆಲೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.


