ಮಂಗಳೂರು : ಮಂಗಳೂರು ತಾಲೂಕು, ಮರಕಡ ಗ್ರಾಮದ, ಕೃಷ್ಣ ನಗರದಲ್ಲಿ ಕಳೆದ 30 ವರ್ಷಗಳಿಂದ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಯುತ್ತಿದ್ದ ಸಾರ್ವಜನಿಕ ಮೈದಾನವನ್ನು ಸರ್ಕಾರ ಜಿಲ್ಲಾ ಆರೋಗ್ಯ ಕೇಂದ್ರಕ್ಕೆ ಬಿಟ್ಟುಕೊಟ್ಟಿದ್ದು,ಪುನಃ ಆ ಜಾಗವನ್ನು ಸಾರ್ವಜನಿಕ ಮೈದಾನಕ್ಕೆ ಕಾದಿರಿಸುವಂತೆ ಕಳೆದ ಎರಡು ಬಾರಿ ಸರಕಾರಕ್ಕೆ ಮನವಿ ಸಲ್ಲಿಸಿದ್ದರು ಯಾವುದೇ ರೀತಿಯ ಉತ್ತರ ಬಂದಿರುವುದಿಲ್ಲ ಹೀಗಾಗಿ ಸಾರ್ವಜನಿಕ ಮೈದಾನದ ರಕ್ಷಣೆಗಾಗಿ ಊರಿನ ಜನರು ಪಕ್ಷಭೇದ ಮರೆತು ಫೆ 06 ರಂದು ಸಂಜೆ 3.00 ಗಂಟೆಗೆ ಸರಿಯಾಗಿ ಅದೇ ಸಾರ್ವಜನಿಕ ಮೈದಾನದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದೆಂದು ಸಾರ್ವಜನಿಕ ಮೈದಾನದ ಹೋರಾಟ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ್ ಸಾಲಿಯಾನ್ ತಿಳಿಸಿದರು.

ಅವರು ನಗರದ ಪತ್ರಿಕಾಭಾವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮಂಗಳೂರು ಮಹಾನಗರ ಪಾಲಿಕೆ , ತಹಶೀಲ್ದಾರ್ ,ವಿಧಾನ ಪರಿಷತ್ ಸದಸ್ಯರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೂ ಮನವಿ ಮಾಡಿದ್ದರೂ ಕೂಡ, ಆ ಜಾಗ ಜಿಲ್ಲಾ ಆರೋಗ್ಯ ಕೇಂದ್ರಕ್ಕೆ ಆರ್.ಟಿ.ಸಿ ಆಗಿದೆ ಎನ್ನುತ್ತಾರೆ, ಇದಕ್ಕೆ ಮುಖ್ಯ ಕಾರಣ ಸಂಬಂಧಪಟ್ಟ ಅಧಿಕಾರಿ ವರ್ಗದ ಬೇಜವಾಬ್ದಾರಿ ಯಿಂದಾಗಿದೆ ಎಂದರು.
ನಂತರ 2ನೇ ಅರ್ಜಿ ಕೊಟ್ಟಾಗ ತಹಶೀಲ್ದಾರರು ಆ ಜಾಗವನ್ನು ಮರು ಸರ್ವೆ ಮಾಡಲು ಆದೇಶಿಸಿದರು. ಆಗ ಆ ಸರ್ವೆ ನಂಬ್ರದಲ್ಲಿ ಬೇರೆ ಜಾಗ ಇಲ್ಲದ ಕಾರಣ ಬೇರೆ ಜಾಗ ಇದ್ದರೆ ನಮಗೆ ತಿಳಿಸಿ ಎಂದು ತಹಶೀಲ್ದಾರರು ತಿಳಿಸಿದ್ದರು ಆ ಸಂದರ್ಭದಲ್ಲಿ ನಾವು ಮಾಹಿತಿ ಹಕ್ಕಿಗೆ ಅರ್ಜಿ ಹಾಕಿ ನೋಡಿದಾಗ ಆಯುಷ್ ಇಲಾಖೆಗೆ 48 ಸೆಂಟ್ಸ್ ಜಾಗವನ್ನು ಸರಕಾರ ಕೊಟ್ಟಿದ್ದು, ಆದರೆ ಆಯುಷ್ ಇಲಾಖೆಯವರು 4 ವರ್ಷದಿಂದ ಆ ಜಾಗದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಲಿಲ್ಲ ಎಂದು ತಿಳಿದು ಬಂದಿದೆ ಎಂದರು.
ಸರಕಾರದ ಆದೇಶವು 2 ವರ್ಷದಲ್ಲಿ ಆ ಜಾಗದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದಿದ್ದರೆ ಆ ಜಾಗವನ್ನು ಸರಕಾರಕ್ಕೆ ವಾಪಾಸು ಪಡೆಯುವ ಹಕ್ಕು ಇದೆ ಎಂದು ಪತ್ರದಲ್ಲಿ ನಮೂದಿಸಿದೆ. ಆದುದರಿಂದ ಆಯುಷ್ ಇಲಾಖೆಯವರ ಜಾಗವನ್ನು ಜಿಲ್ಲಾ ಆರೋಗ್ಯ ಕೇಂದ್ರಕ್ಕೆ ಬಿಟ್ಟು ಕೊಟ್ಟು ಸಾರ್ವಜನಿಕ ಮೈದಾನವನ್ನು ಸುಮಾರು 600 ಮನೆಗಳಿರುವ ಈ ಪ್ರದೇಶಕ್ಕೆ ಒಂದೇ ಸಾರ್ವಜನಿಕ ಮೈದಾನ ಇರುವುದರಿಂದ ಇದನ್ನು ಸ್ಥಳೀಯರಿಗೆ ಮೀಸಲು ಇಡುವಂತೆ ಒತ್ತಾಯಿಸಿದರು .
ಕೃಷ್ಣ ನಗರದ ಅನ್ನಪೂರ್ಣೇಶ್ವರಿ ಭಕ್ತರು ಶ್ರೀ ಕೃಷ್ಣ ಭಜನಾ ಮಂದಿರ ಎಸ್.ಎಸ್.ಎಫ್ ಸಂಘಟನೆ ಸೈನ್ ಕ್ರಿಕೇಟರ್ಸ್ ವೈ.ಎಫ್.ಸಿ ಮತ್ತು ಬೊಂದೇಲ್ ರಿಕ್ಷಾ ಚಾಲಕ ಮತ್ತು ಮಾಲಕರು ಮದ್ರಸ ಸಮಿತಿ ಅಂಗನವಾಡಿ ಕೇಂದ್ರದ ಎಲ್ಲಾ ಕಾರ್ಯಕ್ರಮ ನಡೆಸುವ ಸಾರ್ವಜನಿಕ ಮೈದಾನಕ್ಕೆ ಜಿಲ್ಲಾಧಿಕಾರಿಯವರು, ತಹಶೀಲ್ದಾರರು ಈ ಮನವಿಯನ್ನು ಪರಿಗಣಿಸಿ ಕೂಡಲೇ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಾರ್ವಜನಿಕ ಮೈದಾನವನ್ನು ರಂಗಮಂದಿರ ನಿರ್ಮಾಣ ಮಾಡಲು ಹಾಗೂ ಮಕ್ಕಳಿಗೆ ಆಟೋಟ ಕಾರ್ಯಕ್ರಮವನ್ನು ಈ ಹಿಂದಿನಂತೆಯೇ ನಡೆಯಲು ಅವಕಾಶವನ್ನು ಕಲ್ಪಿಸಲು ಒತ್ತಾಯಿಸಿದರು .
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಉಮೇಶ್ , ಜಿ ಅಬ್ದುಲ್ ಹಮೀದ್ , ಸಂತೋಷ್ , ರೆಹಮಾನ್ ಉಪಸ್ಥಿತರಿದ್ದರು .

