ಕಳೆದ ವರ್ಷ ಪ್ರಯಾಗ್ರಾಜ್ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಮಣಿ ಸರಗಳನ್ನು ಮಾರಾಟ ಮಾಡುವಾಗ ವೈರಲ್ ಆಗಿ ‘ಇಂಟರ್ನೆಟ್ ಸೆನ್ಸೇಷನ್’ ಆದ ಮೊನಾಲಿಸಾ ಬೋಸ್ಲೆ, ಈಗ ಬಾಲಿವುಡ್ ನಟಿಯಾಗಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.ಅವರ ಮೊದಲ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.

ನಿರ್ದೇಶಕ ಸಂಜಯ್ ಮಿಶ್ರಾ ಅವರ ‘ದಿ ಡೈರಿ ಆಫ್ ಮಣಿಪುರ’ ಚಿತ್ರದಲ್ಲಿ ಮೊನಾಲಿಸಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಅವರು ನಟ ರಾಜ್ಕುಮಾರ್ ರಾವ್ ಅವರ ಸಹೋದರ ಅಮಿತ್ ರಾವ್ ಅವರೊಂದಿಗೆ ಪರದೆಯನ್ನು ಹಂಚಿಕೊಂಡಿದ್ದಾರೆ.
‘ದಿ ಡೈರಿ ಆಫ್ ಮಣಿಪುರ ‘ ಚಿತ್ರವು ಮಣಿಪುರದಲ್ಲಿನ ಹಿಂಸಾಚಾರದ ಹಿನ್ನೆಲೆಯಲ್ಲಿ ಅರಳುವ ಪ್ರೇಮಕಥೆಯಾಗಿದ್ದು, ಮೊನಾಲಿಸಾ ಉತ್ತರ ಭಾರತದ ಹುಡುಗಿಯ ಪಾತ್ರವನ್ನು ನಿರ್ವಹಿಸುತ್ತಾರೆ. ಚಿತ್ರದ ಚಿತ್ರೀಕರಣವು ನಾಲ್ಕು ಹಂತಗಳಲ್ಲಿ ಪೂರ್ಣಗೊಂಡಿದೆ ಉತ್ತರ ಪ್ರದೇಶ, ಮಣಿಪುರ, ನೇಪಾಳ ಮತ್ತು ಡೆಹ್ರಾಡೂನ್ ನಲ್ಲಿ ಚಿತ್ರೀಕರಿಸಲಾಗಿದೆ.

ನಿರ್ದೇಶಕ ಸಂಜಯ್ ಮಿಶ್ರಾ ಅವರು ಕುಂಭಮೇಳದಲ್ಲಿ ಮೊನಾಲಿಸಾ ಅವರ ಕಷ್ಟದ ಜೀವನವನ್ನು ಕಣ್ಣಾರೆ ಕಂಡಿದ್ದರು.”ಮಹಾಕುಂಭದ ಸಮಯದಲ್ಲಿ ಜನರು ಸೆಲ್ಫಿಗಾಗಿ ಅವರನ್ನು ಹೇಗೆ ಕಿರುಕುಳ ನೀಡುತ್ತಿದ್ದರು ಎಂಬುದನ್ನು ನೋಡಿ ನನಗೆ ಬೇಸರವಾಯಿತು.
ಮೊನಾಲಿಸಾ ಮಧ್ಯಪ್ರದೇಶದ ಮಹೇಶ್ವರದ ಬಂಜಾರ ಸಮುದಾಯಕ್ಕೆ ಸೇರಿದವರು ಮತ್ತು ತುಂಬಾ ಮುಗ್ಧರು” ಎಂದು ಸಂಜಯ್ ಮಿಶ್ರಾ ಹೇಳಿದರು. ಆರಂಭದಲ್ಲಿ ಸಹಿ ಹಾಕಲು ಮಾತ್ರ ಸಾಧ್ಯವಿದ್ದ ಮೊನಾಲಿಸಾ ಅವರಿಗೆ ಇಂದೋರ್ ಮತ್ತು ಮುಂಬೈನಲ್ಲಿ ವಿಶೇಷ ತರಬೇತಿ ನೀಡಲಾಯಿತು.ಉಚ್ಚಾರಣಾ ತೊಂದರೆಗಳಿಂದಾಗಿ ಕೆಲವು ಹಂತಗಳಲ್ಲಿ ಅವರು ಡಬ್ಬಿಂಗ್ಗೆ ಶ್ರಮಿಸಬೇಕಾಯಿತು, ಆದರೆ ಅವರ ನಟನೆ ಪರಿಣಾಮಕಾರಿ ಎಂದು ಚಿತ್ರತಂಡ ಹೇಳಿಕೊಳ್ಳುತ್ತಿದೆ.

