ಮೈನಾಪುರಿ : ಉತ್ತರ ಪ್ರದೇಶದ ಮೈನ್ಪುರಿಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಪ್ರೀತಿಯಿಂದ ಪ್ರೇರಿತನಾಗಿ ಹುಚ್ಚು ವಿದ್ಯಾರ್ಥಿಯೊಬ್ಬ ಕ್ರೌರ್ಯದ ಎಲ್ಲಾ ಮಿತಿಗಳನ್ನು ಮೀರಿದ್ದಾನೆ. 12 ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಶಾಲಾ ಶಿಕ್ಷಕಿಯ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ಮಾಡಿ, ಅವರ ಎರಡೂ ತುಟಿಗಳನ್ನು ಕತ್ತರಿಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಶಿಕ್ಷಕಿಯನ್ನು ಆಗ್ರಾದ ಆಸ್ಪತ್ರೆಗೆ ಸೇರಿಸಲಾಗಿದೆ, ಅಲ್ಲಿ ಅವರ ಸ್ಥಿತಿ ಗಂಭೀರವಾಗಿದ್ದು ಪೊಲೀಸರು ಆರೋಪಿ ವಿದ್ಯಾರ್ಥಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಮೈನ್ಪುರಿಯ ಕೊತ್ವಾಲಿ ಪ್ರದೇಶದಲ್ಲಿ,12 ನೇ ತರಗತಿಯ ವಿದ್ಯಾರ್ಥಿ ಅಖಂಡ ಪ್ರತಾಪ್ ಸಿಂಗ್ ಶಾಲೆಯಲ್ಲಿ ತನ್ನ ಶಿಕ್ಷಕಿಯನ್ನು ಪ್ರೀತಿಸಲು ಪ್ರಾರಂಭಿಸಿದ, ತನ್ನನ್ನು ಪ್ರೀತಿಸಬೇಕೆಂದು ಶಿಕ್ಷಕಿಗೆ ಪೀಡಿಸತೊಡಗಿದ ಇದಕ್ಕೆ ಶಿಕ್ಷಕಿ ವಿರೋಧಿಸಲು ಹೋದಾಗ ಆತ ಕಿರುಕುಳ ನೀಡಲು ಪ್ರಾರಂಭಿಸಿದ, ಈ ಬಗ್ಗೆ ಶಿಕ್ಷಕಿಯು ವಿದ್ಯಾರ್ಥಿಯ ಕುಟುಂಬದವರಿಗೆ ದೂರು ನೀಡಿದಾಗ, ಸ್ವಲ್ಪ ಸಮಯದವರೆಗೆ ಎಲ್ಲವೂ ಚೆನ್ನಾಗಿ ನಡೆಯಿತು. ಆದರೆ ವಿದ್ಯಾರ್ಥಿಯ ವರ್ತನೆಗಳು ಮತ್ತೆ ಪುನಃ ಪ್ರಾರಂಭವಾದವು. ಕೊನೆಗೆ ಇದರಿಂದ ಬೇಸತ್ತ ಶಿಕ್ಷಕಿ ಆಗ್ರಾ ಶಾಲೆಯನ್ನು ತೊರೆದು ಜ್ಯೋತಿ ರಸ್ತೆಯಲ್ಲಿರುವ ಬೇರೆ ಶಾಲೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು.ಆದರೆ ಆರೋಪಿ ವಿದ್ಯಾರ್ಥಿಯ ವರ್ತನೆ ಅಲ್ಲಿಗೆ ನಿಲ್ಲಲಿಲ್ಲ. ಶಿಕ್ಷಕಿಯ ಹೊಸ ಸ್ಥಳಕ್ಕೆ ಬೆನ್ನಟ್ಟಲು ಪ್ರಾರಂಭಿಸಿದನು, ಆರೋಪಿ ಅಖಂಡ ಪ್ರತಾಪ್ ಶಿಕ್ಷಕಿಯ ಹೊಸ ಶಾಲೆಯ ಪತ್ತೆಹಚ್ಚಿ ಪ್ರತಿದಿನ ಆಕೆಗೆ ಕಿರುಕುಳ ನೀಡುತ್ತಿದ್ದನು ಮತ್ತು ಅನೈತಿಕ ಸಂಬಂಧ ಹೊಂದಲು ಒತ್ತಾಯಿಸುತ್ತಿದ್ದನು. ಶಿಕ್ಷಕಿ ವಿರೋಧಿಸಿದಾಗ, ಅವನು ಭಯಾನಕ ಹೆಜ್ಜೆ ಇಟ್ಟನು. ಅವನು ಶಿಕ್ಷಕಿಯನ್ನು ರಸ್ತೆಯಲ್ಲಿ ಅಡ್ಡಗಟ್ಟಿ ನಿಲ್ಲಿಸಿ, ಹರಿತವಾದ ಆಯುಧದಿಂದ ಹಲ್ಲೆ ಮಾಡಿ, ಅವನ ಎರಡೂ ತುಟಿಗಳನ್ನು ಕಚ್ಚಿ ತುಂಡರಿಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಶಿಕ್ಷಕಿಯನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ, ಅಪರಾಧದ ನಂತರ ವಿದ್ಯಾರ್ಥಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಶಿಕ್ಷಕಿಯ ಸಹೋದರ ನೀಡಿದ ದೂರಿನ ಆಧಾರದ ಮೇಲೆ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ, ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ.ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು ಮತ್ತು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

