ಮುಂಬೈ: ಮಾನಸಿಕ ಅಸ್ವಸ್ಥ 20 ವರ್ಷದ ಮಹಿಳೆಯೊಬ್ಬಳನ್ನು ಗರ್ಭಿಣಿಯನ್ನಾಗಿ ಮಾಡಿರುವುದು ಡಿಎನ್ಎ ಪರೀಕ್ಷೆಯಲ್ಲಿ ದೃಢಪಟ್ಟ ನಂತರ ಮುಂಬೈ ಪೊಲೀಸರು ಗುರುವಾರ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ
ಪೊಲೀಸರ ಪ್ರಕಾರ, ಅಕ್ಟೋಬರ್ 2025 ರಲ್ಲಿ ಕಫೆ ಪರೇಡ್ ಪೊಲೀಸರಿಗೆ ದಕ್ಷಿಣ ಮುಂಬೈನ ಕಾಮಾ ಮತ್ತು ಆಲ್ಬ್ಲೆಸ್ ಆಸ್ಪತ್ರೆಯಿಂದ ಕರೆ ಬಂದಿದ್ದು, ಅವರ ಆರೈಕೆಯಲ್ಲಿ ಹೊಟ್ಟೆ ನೋವಿನಿಂದ ದಾಖಲಾಗಿದ್ದ 20 ವರ್ಷದ ಮೂಕ ಮತ್ತು ಕಿವುಡಿ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಪರೀಕ್ಷಿಸಿದಾಗ ಆಕೆ ಐದು ತಿಂಗಳ ಗರ್ಭಿಣಿ ಎಂದು ತಿಳಿದು ಬಂದಾಗ ಈ ಘಟನೆ ಬೆಳಕಿಗೆ ಬಂದಿತು.

ಆಕೆಯ ಅಂಗವೈಕಲ್ಯದ ಲಾಭ ಪಡೆದ ಹಲವಾರು ಜನರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಪೊಲೀಸರು ಭಾವಿಸಿದ್ದರು ಮಹಿಳೆ ಮಾತನಾಡಲು ಸಾಧ್ಯವಾಗದ ಕಾರಣ, ಪೊಲೀಸರು ವ್ಯಾಪಕ ತನಿಖೆ ನಡೆಸಿ, ಆಕೆಯ ತಂದೆ, ಇತರ ಕುಟುಂಬ ಸದಸ್ಯರು ಮತ್ತು ನೆರೆಹೊರೆಯವರು ಸೇರಿದಂತೆ ಸುಮಾರು 17 ವ್ಯಕ್ತಿಗಳಿಂದ ಡಿಎನ್ಎ ಮಾದರಿಗಳನ್ನು ಸಂಗ್ರಹಿಸಿದರು.ಆರಂಭದಲ್ಲಿ ಸಂಶಯದ ಮೇಲೆ ಕಫೆ ಪರೇಡ್ ಕೊಳಚೆಗೇರಿ ನಿವಾಸಿಗಳಾದ 16 ವರ್ಷ ಮತ್ತು 32 ವರ್ಷದ ಇಬ್ಬರು ವ್ಯಕ್ತಿಯನ್ನು ಬಂಧಿಸಿದ್ದರು ಅದರಲ್ಲಿ ಒಬ್ಬ ಜಾಮೀನಿನ ಮೇಲೆ ಬಿಡುಗಡೆಗೊಂಡು ಮತ್ತೊಬ್ಬ ಜೈಲಿನಲ್ಲಿದ್ದಾನೆ,
ತನಿಖೆಯ ಸಮಯದಲ್ಲಿ, ಆಕೆಯ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದರು ನಂತರ ಮಹಿಳೆಗೆ ಗರ್ಭಪಾತ ಮಾಡಲಾಯಿತು ಮತ್ತು ಭ್ರೂಣದ ಮಾದರಿಗಳನ್ನು ವಿಧಿವಿಜ್ಞಾನ ವಿಶ್ಲೇಷಣೆಗೆ ಕಳುಹಿಸಲಾಯಿತು. ಜನವರಿ 27 ರಂದು, ವಿಧಿವಿಜ್ಞಾನ ತಜ್ಞರು ಆಕೆಯ ತಂದೆ (48) ಜೊತೆ ಡಿಎನ್ಎ ಹೊಂದಾಣಿಕೆಯಾಗುತ್ತಿದೆ ಎಂದು ವರದಿಯನ್ನು ಆಧಾರಿಸಿ ಆಕೆಯ ತಂದೆಯನ್ನು ಬಂಧಿಸಿದರು, ಅವರ ವಿರುದ್ಧ ಈಗಾಗಲೇ ಆರೋಪಪಟ್ಟಿ ಸಲ್ಲಿಸಲಾಗಿದೆ. ಇತ್ತೀಚಿನ ವಿಧಿವಿಜ್ಞಾನ ಸಂಶೋಧನೆಗಳು ತಂದೆಯ ಆರೋಪವನ್ನು ಸಹ ದೃಢಪಡಿಸಿವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಮಹಿಳೆ ಆರಂಭದಲ್ಲಿ ಭಯದಿಂದ ತನ್ನ ತಂದೆಯ ಹೆಸರನ್ನು ಹೇಳಿರಲಿಲ್ಲ ,ಮಕ್ಕಳ ಹಕ್ಕುಗಳು ಮತ್ತು ಅಂಗವೈಕಲ್ಯ ಬೆಂಬಲ ಸಂಸ್ಥೆಯ ಸಹಾಯದಿಂದ ನಡೆಸಲಾದ ಕೌನ್ಸೆಲಿಂಗ್ ಅವಧಿಗಳ ಸಮಯದಲ್ಲಿ,ತಂದೆ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಅವಳು ಬಹಿರಂಗಪಡಿಸಿದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಕೆ ಒಬ್ಬಂಟಿಯಾಗಿರುವಾಗ ಮನೆಯಲ್ಲಿ ಮತ್ತು ಪ್ರತ್ಯೇಕ ಸ್ಥಳಗಳಲ್ಲಿ ದೌರ್ಜನ್ಯ ನಡೆದಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಆಕೆಯ ದುರ್ಬಲತೆಯ ಲಾಭವನ್ನು ಇತರರು ಪಡೆದುಕೊಂಡಿರಬಹುದೇ ಎಂದು ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

