ಮಂಗಳೂರು : ಕೆನರಾ ಬ್ಯಾಂಕ್ ಫೆ. 06 ರಂದು ಕಟೀಲಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಇ-ಹುಂಡಿಯನ್ನು ಅಳವಡಿಸಿದೆ. ಮಂಗಳೂರು ವಲಯ ಮುಖ್ಯಸ್ಥರಾದ ಶ್ರೀ ಮಂಜುನಾಥ್ ಬಿ. ಸಿಂಗೈ ಅವರ ಸಮ್ಮುಖದಲ್ಲಿ, ದೇವಳದ ಆನುವಂಶಿಕ ಮೊಕ್ತೇಸರರಾದ ಶ್ರೀ ಸನತ್ ಕುಮಾರ್ ಶೆಟ್ಟಿ ಮತ್ತು ಶ್ರೀ ಹರಿನಾರಾಯಣದಾಸ ಅಸ್ರಣ್ಣ ಅವರು ಇದನ್ನು ಉದ್ಘಾಟಿಸಿದರು.
ಈ ಇ-ಹುಂಡಿ ಸೌಲಭ್ಯವು ಭಕ್ತರಿಗೆ ಡಿಜಿಟಲ್ ರೂಪದಲ್ಲಿ ಕಾಣಿಕೆ ಸಲ್ಲಿಸಲು ಸಹಾಯ ಮಾಡುತ್ತದೆ. ಈ ಭಾಗದ ದೇವಾಲಯ/ಸಂಸ್ಥೆಗಳಲ್ಲಿ ಕೆನರಾ ಬ್ಯಾಂಕ್ ಅಳವಡಿಸಿರುವ ಆರನೇ ಇ-ಹುಂಡಿ ಇದಾಗಿದೆ. ಈ ಸಂದರ್ಭದಲ್ಲಿ ಬ್ಯಾಂಕಿನ ಉಪಮಹಾಪ್ರಬಂಧಕರುಗಳಾದ ಶ್ರೀಮತಿ ಲತಾ ಕುರುಪ್ ಮತ್ತು ಶ್ರೀಮತಿ ಎಲ್.ಆರ್.ವಿಜಯಶ್ರೀ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

