ಧಾರವಾಡ : ಹತ್ತಿರದ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಶ್ರೀ ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿ ದೇವಾಲಯದ 2ನೆಯ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಫೆ. 10 ರಿಂದ 14ರವರೆಗೆ 5 ದಿನಗಳ ಅಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ ಹೆಬ್ಬಳ್ಳಿಯ ಹಳೆಯ ಬಸ್ ನಿಲ್ದಾಣ ಮೈದಾನದಲ್ಲಿ ಪ್ರತಿದಿನ ಸಂಜೆ 7 ಗಂಟೆಯಿ0ದ 9-30 ರವರೆಗೆ ಜರುಗಲಿದೆ.
ಕಲಬುರ್ಗಿ ಜಿಲ್ಲೆ ಶಹಬಾದ ತಾಲೂಕು ರಾವೂರ ಸಿದ್ಧಲಿಂಗೇಶ್ವರ ಸಂಸ್ಥಾನಮಠದ ಶ್ರೀಸಿದ್ಧಲಿಂಗ ಸ್ವಾಮೀಜಿ 5 ದಿನಗಳ ಪ್ರವಚನ ನೀಡಲಿದ್ದು, ಫೆ.10 ರಂದು ಹೆಬ್ಬಳ್ಳಿಯ ಬ್ರಹ್ಮ ಚೈತನ್ಯಾಶ್ರಮದ ಶ್ರೀದತ್ತಾವಧೂತ ಶ್ರೀಗಳು ಈ ಪ್ರವಚನ ಮಾಲಿಕೆ ಉದ್ಘಾಟಿಸುವರು.
ಫೆ.11 ರಂದು ಸುಳ್ಳದ ಪಂಚಗೃಹ ಹಿರೇಮಠದ ಶ್ರೀ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಫೆ.12 ರಂದು ಶಿರಕೋಳ ಹಿರೇಮಠದ ಶ್ರೀಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಫೆ.13 ರಂದು ಮಣಕವಾಡ ದೇವಮಂದಿರದ ಶ್ರೀಅಭಿನವ ಮೃತ್ಯುಂಜಯ ಸ್ವಾಮೀಜಿ ಹಾಗೂ ಫೆ.14 ರಂದು ಕುಂದಗೋಳ ಕಲ್ಯಾಣಪುರಮಠದ ಶ್ರೀಅಭಿನವ ಬಸವಣ್ಣಜ್ಜ ಶ್ರೀಗಳು ಅಧ್ಯಾತ್ಮಿಕ ಪ್ರವಚನದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡುವರು.
ಗದಗ ವೀರೇಶ್ವರ ಪುಣ್ಯಾಶ್ರಮದ ವೀರೇಶಕುಮಾರ ಮಳಲಿ ಅವರ ನಿತ್ಯದ ಭಕ್ತಿಸುಧೆ ಸಂಗೀತಕ್ಕೆ ಸಿದ್ಧರಾಮ ಬ್ಯಾಕೋಡ ತಬಲಾಸಾಥ ನೀಡುವರು. ನಿತ್ಯವೂ ಪ್ರವಚನದ ಕೊನೆಯಲ್ಲಿ ಸಾಮೂಹಿಕ ಅನ್ನಸಂತರ್ಪಣೆ ಜರುಗಲಿದೆ.

ನಿತ್ಯ ರುದ್ರಾಭಿಷೇಕ : ಫೆ.10 ರಿಂದ 15ರವರೆಗೆ ಶ್ರೀಶೈಲ ಮಲ್ಲಿಕಾರ್ಜುನ ಶಿವಲಿಂಗಕ್ಕೆ ಪ್ರಾತಃಕಾಲದಲ್ಲಿ ಚೆನ್ನಮಲ್ಲಯ್ಯ ನಂದಿಕೋಲಮಠ, ನಾಗಯ್ಯ ಕೊಣ್ಣೂರಮಠ, ಪುನೀತ ಹಿರೇಮಠ ಅವರ ವೈದಿಕತ್ವದಲ್ಲಿ ನಿತ್ಯ ರುದ್ರಾಭಿಷೇಕ ಜರುವುದು. ಶ್ರೀಶೈಲ ಲಕ್ಕಮ್ಮನವರ, ಪ್ರಕಾಶ ಮೊರಬ ಸೇರಿದಂತೆ ವಿವಿಧ ಸದ್ಭಕ್ತರು ನಿತ್ಯದ ಸಂಕಲ್ಪ ಸೇವೆಗಳಲ್ಲಿ ಪಾಲ್ಗೊಳ್ಳುವರು.
ನೂತನ ರಥೋತ್ಸವ :ಫೆ.15 ರಂದು ಮಹಾಶಿವರಾತ್ರಿಯ ದಿನ ಸಂಜೆ 5 ಗಂಟೆಗೆ ಜರುಗಲಿರುವ ನೂತನ ರಥೋತ್ಸವವನ್ನು ಹೆಬ್ಬಳ್ಳಿಯ ದತ್ತಾವಧೂತ ಶ್ರೀಗಳು ಹಾಗೂ ಮಣಕವಾಡದ ಅಭಿವನ ಮೃತ್ಯುಂಜಯ ಶ್ರೀಗಳು ಉದ್ಘಾಟಿಸುವರು. ಇದೇ ಸಂದರ್ಭದಲ್ಲಿ ನೂತನ ರಥ ನಿಮಾರ್ಣ ಮಾಡಿರುವ ಸಾವಿತ್ರಿ ಮಟ್ಟಿ ಹಾಗೂ ಚೆನ್ನಬಸಪ್ಪ ಮಟ್ಟಿ ಅವರನ್ನು ಗೌರವಿಸಲಾಗುವುದು.
ಫೆ.16 ರಂದು ಮುಂಜಾನೆ ಕಡುಬಿನ ಕಾಳಗ ನಂತರ ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿ ಪಲ್ಲಕ್ಕಿ ಉತ್ಸವ ನಡೆಯಲಿದ್ದು, ಈ ಧರ್ಮ ಸಮಾವೇಶ ಕುರಿತು ಮಾಹಿತಿಗಾಗಿ 9535712890ಅಥವಾ 9449788181 ಸಂಪರ್ಕಿಸುವ0ತೆ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


