ಕಾಸರಗೋಡು : ಕಾಸರಗೋಡಿನಲ್ಲಿ ಪ್ರಖ್ಯಾತ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಚಿನ್ನು ಪಪ್ಪು ಅಲಿಯಾಸ್ ರೇಷ್ಮಾ ನೇಣು ಬೀಗಿದು ನಿಗೂಢವಾಗಿ ಮೃತಪಟ್ಟಿದ್ದಾರೆ.
ಕಾಸರಗೋಡಿನ ‘ಚಿನ್ನು ಪಾಪು’ ಎಂದೇ ಪ್ರಖ್ಯಾತರಾಗಿದ್ದ ರೇಷ್ಮಾ, ಪತಿಯಿಂದ ವಿಚ್ಛೇದನ ಪಡೆದು ಉಳಿಯತ್ತಡ್ಕದಲ್ಲಿರುವ ತಮ್ಮ ಬಾಡಿಗೆ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು, ನಿನ್ನೆ ಮನೆ ಕೋಣೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅಕ್ಕಪಕ್ಕದವರು ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲಿಯೇ ಅವರು ಮೃತಪಟ್ಟಿದ್ದಾರೆಂದು ವೈದ್ಯರು ಖಚಿತಪಡಿಸಿದ್ದಾರೆ.

ಇನ್ಟಾಗ್ರಾಂನಲ್ಲಿ 2.06 ಲಕ್ಷ ಫಾಲೋವರ್ಸ್ ಹೊಂದಿದ್ದ ರೇಶ್ಮಾ, ಕಳೆದ ಐದು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು, 4 ವರ್ಷ ವಯಸ್ಸಿನ ಮಗುವನ್ನು ಕೂಡ ಹೊಂದಿದ್ದಾರೆ. ಗಂಡನಿಂದ ಇತ್ತೀಚೆಗೆ ವಿಚ್ಛೇದನ ಪಡೆದಿದ್ದ ಇವರು, ಬಳಿಕ ಕಾಸರಗೋಡಿನ ಉಳಿಯತಡ್ಕದಲ್ಲಿ ಒಬ್ಬಳೇ ವಾಸ ಮಾಡುತ್ತಿದ್ದರು, ಅವರ ನಾಲ್ಕು ವರ್ಷದ ಮಗು ರೇಷ್ಮಾ ಪೋಷಕರೊಂದಿಗೆ ಆಡುವೂರಿನಲ್ಲಿ ವಾಸಿಸುತ್ತಿದೆ, ಇವರ ಮನೆಗೆ ಹೊಸ ಬಾಯ್ ಫ್ರೆಂಡ್ ಒಬ್ಬ ಬಂದು ಹೋಗುತ್ತಿದ್ದ ಬಗ್ಗೆ ಶಂಕೆ ವ್ಯಕ್ತವಾಗಿದೆ. ಹೀಗಾಗಿ ರೇಷ್ಮಾ ಅವರ ಮೊಬೈಲನ್ನು ವಶಕ್ಕೆ ಪಡೆದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ, ಸಾವಿಗೆ ನಿಖರ ಕಾರಣ ಇನ್ನಷ್ಟೇ ಗೊತ್ತಾಗಬೇಕಿದೆ.



