ಮಂಗಳೂರು : ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆ, ಕುಂಭ ಮಹೋತ್ಸವ ಫೆ.11ರಿಂದ 14ರ ವರೆಗೆ ನಡೆಯಲಿದೆ.
ಶ್ರೀ ಕ್ಷೇತ್ರ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಗಳು ಆಶೀರ್ವಾದದೊಂದಿಗೆ ಶ್ರೀ ಕ್ಷೇತ್ರದ ತಂತ್ರಿ ಅನಂತ ಉಪಾಧ್ಯಾಯರ ನೇತೃತ್ವದಲ್ಲಿ ಪ್ರಧಾನ ಅರ್ಚಕ ಜನಾರ್ದನ ಭಟ್ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
ಫೆ. 11ರಂದು ಸುಮತಿ ಮತ್ತು ಶ್ರೀನಿವಾಸ್ ಅವರಿಂದ ದೀಪ ಪ್ರಜ್ವಲನೆ, 3ಕ್ಕೆ ಭಜನೆ, 5.45ಕ್ಕೆ ಜಾನಪದ ನೃತ್ಯ. 6.30ರಿಂದ ದೇವತಾ ಪ್ರಾರ್ಥನೆ, ಮಧು ಮತ್ತು ಗುರುಪ್ರಸಾದ್ ಅವರಿಂದ ದೀಪ ಪ್ರಜ್ವಲನೆ, ಪುಣ್ಯಾಹ, ರಾಕ್ಷೆಘ್ನ ವಾಸ್ತು ಹೋಮ, ರಾತ್ರಿ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ.

ಫೆ. 12ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ, ಮಹಾರಥೋತ್ಸವ, ಪಲ್ಲಪೂಜೆ, ಬಟ್ಟಲು ಪೂಜೆ, ಅನ್ನಸಂತರ್ಪಣೆ,3ರಿಂದ ಭಜನೆ, 4.30ರಿಂದ ಭರತನಾಟ್ಯ, 5.45ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಗಳಿ ಆಶೀರ್ವಚನ ನೀಡಲಿದ್ದಾರೆ.
ಫೆ. 13ರಂದು ಬೆಳಗ್ಗೆ 8 ಗಂಟೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ, ಅನ್ನಸಂತರ್ಪಣೆ, 3 ರಿಂದ ಭಜನೆ, 6ರಿಂದ ಕಟೀಲು ಕ್ಷೇತ್ರ ಮಹಾತ್ಮ ಯಕ್ಷನಾನ, ವಿವಿಧ ಸಾಂಸ್ಕೃತಿಕ ತಂಡಗಳ ಪ್ರದರ್ಶನ ನಡೆಯಲಿದೆ.ರಾತ್ರಿಯೂ ವಿವಿಧ ಧಾರ್ಮಿಕ ಕಾರ್ಯಕ್ರಮ ಜರಗಲಿದೆ.
ಫೆ. 14ರಂದು ಬೆಳಗ್ಗೆ 5ರಿಂದ ಸಂಪ್ರೋಕ್ಷಣೆ, ಮಹಾಪೂಜೆ, ಮಂತ್ರಾಕ್ಷತೆ, ಮಹಾಪ್ರಸಾದ ನೆರವೇರಲಿದೆ.
ಈ ಪ್ರಯುಕ್ತ ಭಕ್ತಾಭಿಮಾನಿಗಳಾದ ತಾವೆಲ್ಲರೂ ಈ ಪುಣ್ಯ ಕಾರ್ಯದಲ್ಲಿ ಕುಟುಂಬ ಸಮೇತರಾಗಿ ಭಾಗವಹಿಸಿ, ತನು-ಮನ-ಧನಗಳಿಂದ ಸಹಕರಿಸಿ, ಶ್ರೀ ವೀರನಾರಾಯಣ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


