ಮಂಗಳೂರು : ಅಶೋಕನಗರ ಯುವಕ ಸಂಘದ 65 ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಈ ಭಾರಿ ಅಂತರ್ ಜಿಲ್ಲಾ ಮಟ್ಟದ ಇಂಟರ್ ಸ್ಕೂಲ್ ಚೆಸ್ ಪಂದ್ಯಾಟವು ಫೆ.22 ಆದಿತ್ಯವಾರ ಬೆಳಗ್ಗಿನಿಂದ ಸಂಜೆಯವರೆಗೆ ಕೆನರಾ ಹೈಸ್ಕೂಲ್ ಉರ್ವದಲ್ಲಿ ನಡೆಯಲಿದೆ ಎಂದು ಕ್ರೀಡಾ ಸಂಚಾಲಕರಾದ ಬಿ. ಶ್ರೀನಿವಾಸ ಕರ್ಕೇರ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಚೆಸ್ ಪಂದ್ಯಾಕೂಟವು ಮೂರು ವಿಭಾಗದಲ್ಲಿ ವಿದ್ಯಾರ್ಥಿಗಳಿಗಾಗಿ ನಡೆಯಲಿದೆ, ಕಾರ್ಯಕ್ರಮವು ಬೆಳಿಗ್ಗೆ 9:15 ಕ್ಕೆ ಪ್ರಾರಂಭವಾಗಲಿದ್ದು ಸಂಜೆ 5:30 ಕ್ಕೆ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ, ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ಹಾಗೂ ಪೋಷಕರಿಗೂ ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.

ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ನಿವೃತ್ತ ಅಧ್ಯಾಪಕರಾದ ಬಿ. ಶಂಭು ಶೆಟ್ಟಿ ನೆರವೇರಿಸಲಿದ್ದಾರೆ , ಉದ್ಘಾಟನೆಯನ್ನು ದಕ್ಷಿಣ ಕನ್ನಡ ಯುವ ಸಬಲೀಕರಣ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರದೀಪ್ ಡಿ’ಸೋಜ ಮಾಡುವರು,ಅಧ್ಯಕ್ಷತೆಯನ್ನು ದ.ಕ ಜಿಲ್ಲಾ ಮೈಭಾರತ್ ಯುವ ಅಧಿಕಾರಿಯಾದ ಉಲ್ಲಾಸ್ ಕೆ.ಟಿ.ಕೆ,ವಹಿಸುವರು, ಮುಖ್ಯ ಅತಿಥಿಗಳಾಗಿ ರಮೇಶ್ ಕೋಟೆ, ಡಾ.ಅಮರ ಶ್ರೀ ಅಮರನಾಥ ಶೆಟ್ಟಿ, ಜಗದೀಶ್ ಕೆ, ಜಗದೀಶ್ ಶೆಟ್ಟಿ ಅಶೋಕನಗರ ಮೊದಲಾದವರು ಭಾಗವಹಿಸಿಲಿರುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಜೋಸೆಫ್ ಲೋಬೊ, ಅಧ್ಯಕ್ಷರಾದ ಜಯರಾಮ, ಪ್ರಧಾನ ಕಾರ್ಯದರ್ಶಿಗಳಾದ ಬಿ. ಶ್ರೀನಿವಾಸ, ಕೋಶಾಧಿಕಾರಿಯಾದ ಆರ್.ಪ್ರವೀಣ್ ಕುಮಾರ್ ,ಸಾಕ್ಷತ್ ಯು.ಕೆ ಮುಂತಾದವರು ಉಪಸ್ಥಿತರಿದ್ದರು.


