ಬೆಂಗಳೂರು: ಕೆಎಸ್ಆರ್ಟಿಸಿ ಬಸ್ಗಳಲ್ಲಿ ಪ್ರಯಾಣಿಸುವವರಿಗೆ ಹಾಗೂ ಸರಕು ಸಾಗಿಸುವವರಿಗೆ ಈಗ ಬೆಲೆ ಏರಿಕೆಯ ಬಿಸಿ ತಟ್ಟಿದೆ. ನಾಳೆಯಿಂದ ಅನ್ವಯವಾಗುವಂತೆ ಪ್ರಯಾಣಿಕ ರಹಿತವಾಗಿ ಸಾಗಿಸುವ ಲಗೇಜ್ ದರವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪರಿಷ್ಕರಣೆ ಮಾಡಿದ್ದು, ಲಗೇಜ್ ಸಾಗಾಟ ದುಬಾರಿಯಾಗಲಿದೆ.
ಅಚ್ಚರಿಯ ವಿಷಯವೆಂದರೆ, ಕೆಎಸ್ಆರ್ಟಿಸಿ ಈ ಹಿಂದೆ 2012ರಲ್ಲಿ ಪ್ರಯಾಣಿಕ ರಹಿತ ಲಗೇಜ್ ದರವನ್ನು ಏರಿಕೆ ಮಾಡಿತ್ತು. ಕಳೆದ ಹಲವು ವರ್ಷಗಳಲ್ಲಿ ಬಸ್ ಟಿಕೆಟ್ ದರಗಳು ಹಲವು ಬಾರಿ ಪರಿಷ್ಕರಣೆಯಾಗಿದ್ದರೂ, ಲಗೇಜ್ ಸಾಗಾಟದ ದರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಸದ್ಯದ ಹೆಚ್ಚುತ್ತಿರುವ ಇಂಧನ ಬೆಲೆ ಮತ್ತು ನಿರ್ವಹಣಾ ವೆಚ್ಚವನ್ನು ಸರಿದೂಗಿಸಲು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಂ ಪಾಷಾ ಅವರು ಈ ದರ ಏರಿಕೆಯ ಆದೇಶವನ್ನು ಹೊರಡಿಸಿದ್ದಾರೆ.
ಕೆಎಸ್ಆರ್ಟಿಸಿ ಸಿಬ್ಬಂದಿಗೂ ಈ ಕುರಿತು ಈಗಾಗಲೇ ಸೂಚನೆ ನೀಡಲಾಗಿದ್ದು, ನಾಳೆಯಿಂದ ಹೊಸ ದರದಂತೆ ರಶೀದಿ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಹೊಸ ದರ ಪಟ್ಟಿ ಹೀಗಿದೆ
- 1 ರಿಂದ 5 ಸ್ಟೇಜ್ ವರೆಗೆ 6 ರೂಪಾಯಿ ( ಈ ಹಿಂದೆ 5 ರುಪಾಯಿ ದರವಿತ್ತು ).
- 6 ರಿಂದ 12 ಸ್ಟೇಜ್ ವರೆಗೆ 12 ರೂಪಾಯಿ ( ಈ ಹಿಂದೆ 10 ರುಪಾಯಿ ದರವಿತ್ತು ).
- 156 ರಿಂದ 160 ಸ್ಟೇಜ್ ವರೆಗೆ 145 ರೂಪಾಯಿ ( ಈ ಹಿಂದೆ 123 ರುಪಾಯಿ ದರವಿತ್ತು )

