ಮಂಗಳೂರು: ಶ್ರೀನಿವಾಸ್ ವಿಶ್ವವಿದ್ಯಾಲಯ, ಸಿಟಿ ಕ್ಯಾಂಪಸ್, ಪಾಂಡೇಶ್ವರದ ಎಂಬಿಎ ವಿಭಾಗವು 2026ರ ಫೆಬ್ರವರಿ 19 ಮತ್ತು 20ರಂದು ಎರಡು ದಿನಗಳ ರಾಷ್ಟ್ರಮಟ್ಟದ ಮ್ಯಾನೇಜ್ಮೆಂಟ್ ಹಾಗೂ ಸಾಂಸ್ಕೃತಿಕ ಹಬ್ಬವಾದ “ಮ್ಯಾಗ್ಮಾ 2026” ಅನ್ನು ಆಯೋಜಿಸುತ್ತಿದೆ ಎಂದು ಡಾ.ವೆಂಕಟೇಶ್.ಎಸ್ ಅಮೀನ್ ತಿಳಿಸಿದ್ದಾರೆ.
ಪತ್ರಿಕಾಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಎಂಬಿಎ ವಿಭಾಗದ ಪ್ರಮುಖ (ಫ್ಲಾಗ್ಶಿಪ್) ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಈ ವರ್ಷ ವಿಭಾಗವು 25 ನೇ ಮ್ಯಾಗ್ಮಾ ಅನ್ನು ಆಯೋಜಿಸುತ್ತಿರುವುದು ವಿಶೇಷವಾಗಿದೆ. ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಯುಜಿ ಹಾಗೂ ಪಿಜಿ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳಬಹುದು ಎಂದರು.

ಮ್ಯಾನೇಜೆಂಟ್ ಫೆಸ್ಟ್ನಲ್ಲಿ ಮಾನವ ಸಂಪನ್ಮೂಲ, ಹಣಕಾಸು, ಮಾರುಕಟ್ಟೆ ಬೆಸ್ಟ್ ಮ್ಯಾನೇಜರ್, ಬೆಸ್ಟ್ ಮ್ಯಾನೇಜ್ ಮೆಂಟ್ ತಂಡ ಹಾಗೂ ಬಿಸಿನೆಸ್ ಕ್ವಿಜ್ ಮುಂತಾದ ಸ್ಪರ್ಧೆಗಳು ನಡೆಯಲಿವೆ. ಪ್ರತಿಯೊಂದು ಸ್ಪರ್ಧೆಯಲ್ಲೂ ಹಲವು ಹಂತಗಳು ಇರಲಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಅಡಿಯಲ್ಲಿ ಏಕಗಾನ, ಗುಂಪು ನೃತ್ಯ, ಫ್ಯಾಷನ್ ಶೋ, ಮೆಹೆಂದಿ, ಮುಖಚಿತ್ರಕಲೆ, ರೀಲ್ಸ್ ತಯಾರಿಕೆ, ಲೂಡೋ, ಫ್ರೀ ಫೈರ್ ಹಾಗೂ ಗಲ್ಲಿ ಕ್ರಿಕೆಟ್ ಸೇರಿದಂತೆ ವಿವಿಧ ಸ್ಪರ್ಧೆಗಳು ಆಯೋಜಿಸಲಾಗುತ್ತಿವೆ. ಒಟ್ಟು 16 ವಿಭಿನ್ನ ಕಾರ್ಯಕ್ರಮಗಳು ಎರಡು ದಿನಗಳ ಅವಧಿಯಲ್ಲಿ ನಡೆಯಲಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರೊ.ಸಾಗರ್ ಶ್ರೀನಿವಾಸ್, ಡಾ ಕಾವ್ಯಾ ಶ್ರೀ, ಆಶ್ಲೇಸ್, ತ್ರಯಾದ್ ಮುಂತಾದವರು ಉಪಸ್ಥಿತರಿದ್ದರು.

