ಮಂಗಳೂರು : ನಗರದ ಮರೋಳಿಯ ಅಲಂಗಾರಿನಲ್ಲಿರುವ ಶ್ರೀ ಜ್ವಾಲಾ ಮಹಾಮ್ಮಾಯಿ – ಕಾಲ ಭೈರವ ದೇವರ ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಮಹೋತ್ಸವವು ಫೆ 21 ಮತ್ತು 22ರಂದು ನಡೆಯಲಿದೆ ಎಂದು ಜೀರ್ಣೋದ್ದಾರ ಸಮಿತಿಯ ಕಾರ್ಯದರ್ಶಿಗಳಾದ ವಾಸುದೇವ ಮರೋಳಿ ತಿಳಿಸಿದರು.
ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ ,ಶ್ರೀ ಸನ್ನಿಧಿಯು ತನ್ನದೇ ಆದ ಪರಂಪರೆ ಮತ್ತು ಇತಿಹಾಸವನ್ನು ಹೊಂದಿದ್ದು,ಸಕಲ ಭಕ್ತರನ್ನು ತನ್ನತ್ತ ಸೆಳೆಯುವ ಶಕ್ತಿಯನ್ನು ಶ್ರೀ ಸನ್ನಿಧಿ ಹೊಂದಿದೆ .ಪೂಜಾಧಿ ಕಾರ್ಯವನ್ನು
ತಾರತೋಟ ಬಳಿ ಶ್ರೀ ಅವಘಡ್ ರಾಜೇಶ್ ನಾಥ್ ಗುರೂಜಿ ಇವರ ಮಾರ್ಗದರ್ಶನದಲ್ಲಿ ಹಾಗೂ ವೇದಮೂರ್ತಿ ಡಾ. ಶ್ರೀನಿವಾಸ್ ಭಟ್ ಇವರ ನೇತೃತ್ವದಲ್ಲಿ ನೆರವೇರಲಿದೆ ಎಂದರು

ಈ ಧಾರ್ಮಿಕ ಕಾರ್ಯಕ್ರಮಕ್ಕೆ ಪರಮ ಪೂಜನೀಯ ಕದ್ರಿ ಯೋಗೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ 1008 ರಾಜ ಯೋಗಿ ನಿರ್ಮಲ್ ನಾಥ್ ಜಿ , ಶ್ರೀ ಗುರು ಗೋರಕ್ಷನಾಥ ಮಠ ವಿಜಯಪುರದ ಶ್ರೀ ಯೋಗಿ ನಿವೃತ್ತಿ ನಾಥ್ ಅಘೋರಿಬಾಬಾ ,ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರ ಯೋಗೀಶ್ವರ ಸಿದ್ದಮಠದ ಶ್ರೀ ಅವಘಡ್ ಪೀರ್ ರಾಜೇಶ್ ನಾಥ್ ಗುರೂಜಿ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ . ಎಂದರು ಈ ಸಂದರ್ಭದಲ್ಲಿ ಧಾರ್ಮಿಕ ಮುಖಂಡರು , ರಾಜಕೀಯ ಮುಖಂಡರು ಉಪಸ್ಥಿತರಿರುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಶರತ್ ಅಲಂಗಾರ್ ಕುಮಾರ್ , ಸಮಿತಿಯ ಸದಸ್ಯರಾದ ಸತೀಶ್ ಡಿ ,ಪ್ರಕಾಶ್ ಕೋಟ್ಯಾನ್ ,ನವೀನ್ ,ರೋಹಿತ್ ಮರೋಳಿ ,ನಮಿತ ರಾಕೇಶ್ ಉಪಸ್ಥಿತರಿದ್ದರು .

