ನವದೆಹಲಿ: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನೊಂದಿಗೆ ಸಂಪರ್ಕ ಹೊಂದಿದ್ದ ಎನ್ನಲಾದ ಮಹಿಳಾ ಡಾನ್ ಒಬ್ಬಳನ್ನು ದೆಹಲಿ ಪೊಲೀಸ್ ವಿಶೇಷ ದಳವು ಡ್ರಗ್ಸ್ ಸಿಂಡಿಕೇಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದಾರೆ.
ಹಗಲಿನಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಖುಷ್ಣುಮಾ ಅನ್ಸಾರಿ ಅಲಿಯಾಸ್ ನೇಹಾ, ಕ್ರಿಮಿನಲ್ ವೇಳೆಯಲ್ಲಿ ಮೇಡಂ ಜೆಹರ್ ಆಗಿ ಡ್ರಗ್ಸ್ ಕಳ್ಳಸಾಗಣೆ ಮತ್ತು ಗ್ಯಾಂಗ್ ಅಪರಾಧಗಳಲ್ಲಿ ಸಕ್ರಿಯಳಾಗಿದ್ದಳು.ಲಾರೆನ್ಸ್ ಬಿಷ್ಣೋಯ್ ಮತ್ತು ಹಾಶಿಮ್ ಬಾಬಾ ಗ್ಯಾಂಗ್ಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದ ಈಕೆ ಬಿಷ್ಣೋಯ್ ಗ್ಯಾಂಗ್ಗೆ ಬಂದೂಕು ಪೂರೈಕೆದಾರ ಮಹಫೂಜ್ ಅಲಿಯಾಸ್ ಬಾಬಿ ಕಬೂತರ್ನ ಗೆಳತಿ.

ಬಾಬಿ ಕಬೂತರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ಗೆ ಅಕ್ರಮ ಶಸ್ತ್ರಾಸ್ತ್ರಗಳನ್ನು ವ್ಯವಸ್ಥೆ ಮಾಡಿದ ಆರೋಪ ಹೊತ್ತಿದ್ದಾನೆ. ನೇಹ ಮತ್ತು ಬಾಬಿ ಕಬೂತರ್ ಜೊತೆಗೆ, ಆತನ ಇಬ್ಬರು ಸಹಚರರಾದ ಮೊಹಮ್ಮದ್ ರಾಜಿ ಖಾನ್ ಮತ್ತು ಶಹಬಾಜ್ ಅವರನ್ನು ದೆಹಲಿಯ ಮಹಿಪಾಲ್ಪುರ್ ಫ್ಲೈಓವರ್ ಬಳಿ ಬಂಧಿಸಲಾಗಿದೆ.

ಪೊಲೀಸರ ಪ್ರಕಾರ, ಬಾಬಿ ಕಬೂತರ್ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಗೂ ಮುನ್ನ ಆತನ ಚಲನವಲನಗಳ ಮಾಹಿತಿಯನ್ನು ಗ್ಯಾಂಗ್ ಸ್ಟಾರ್ ಗಳಿಗೆ ಕೊಟ್ಟಿದ್ದ. ಬಾಲಿವುಡ್ ನಟಿ ದಿಶಾ ಪಟಾನಿ ಅವರ ಮನೆಯ ಮೇಲಿನ ದಾಳಿಗೆ ಶಸ್ತ್ರಾಸ್ತ್ರಗಳ ಪೂರೈಕೆಯಲ್ಲೂ ಆತನ ಕೈವಾಡವಿತ್ತು. ಖುಷ್ಣುಮಾ ಅನ್ಸಾರಿ ಅಲಿಯಾಸ್ ನೇಹಾ ಈಶಾನ್ಯ ದೆಹಲಿಯಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಳು, ಮೇಕಪ್ ಆರ್ಟಿಸ್ಟ್ ಆಗಿದ್ದ ಆಕೆ ಗ್ಯಾಂಗ್ನ ಚಟುವಟಿಕೆಗಳಲ್ಲಿ ಆಕೆಯನ್ನು ಮುಂಚೂಣಿಯಲ್ಲಿ ಬಳಸಲಾಗುತ್ತಿತ್ತು ಎಂದು ಶಂಕಿಸಲಾಗಿದೆ. ಇದೀಗ ಆಕೆಯನ್ನು ಮಾದಕವಸ್ತು ಕಳ್ಳಸಾಗಣೆ ಮತ್ತು ಗ್ಯಾಂಗ್ನ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಬಂಧಿಸಲಾಗಿದೆ. ದೆಹಲಿಯ ಈಶಾನ್ಯ ಪ್ರದೇಶದ ಪ್ರಮುಖ ಗ್ಯಾಂಗ್ ಸ್ಟಾರ್ ಹಾಶಿಮ್ ಬಾಬಾ ಮತ್ತು ಲಾರೆನ್ಸ್ ಬಿಷ್ಣೋಯ್ಗಾಗಿಯೂ ಆಕೆ ಮತ್ತು ಬಾಬಿ ಕಬೂತರ್ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

