ಹಕ್ಕಿ ಜ್ವರ ಭೀತಿಯಿಂದ ಸೌದಿ ಅರೇಬಿಯಾ ದೇಶವು ಕೋಳಿ ಮಾಂಸ ಮತ್ತು ಮೊಟ್ಟೆ ಆಮದಿನ ಮೇಲೆ ನಿರ್ಬಂಧ ಹಾಕಿದೆ. ಭಾರತವಲ್ಲದೆ, ಚೀನಾ, ಬಾಂಗ್ಲಾದೇಶ, ಇಂಡೋನೇಷ್ಯ, ಇರಾನ್, ಪಾಕಿಸ್ತಾನ,ಯುಕೆ ಮತ್ತಿತರ 40 ದೇಶಗಳಿಂದ ಪೂರೈಕೆಯಾಗುವ ಕೋಳಿ ಮಾಂಸ ಮತ್ತು ಮೊಟ್ಟೆಯ ಮೇಲೆ ನಿಷೇಧ ಹೇರಿದೆ.
ಹಕ್ಕು ಜ್ವರ ಮತ್ತಿತರ ಪ್ರಾಣಿಜನ್ಯ ಕಾಯಿಲೆಗಳು ಹರಡುವುದನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಸೌದಿಯ ಆಹಾರ ಪ್ರಾಧಿಕಾರವಾದ ಎಸ್ಎಫ್ಡಿಎ ಈ ಕ್ರಮ ಜರುಗಿಸಿದೆ.

ವೈರಸ್ಗಳನ್ನು ಹರಡದಂತೆ ನಿಯಂತ್ರಿಸಬಲ್ಲ ಹೀಟ್ ಟ್ರೀಟ್ಮೆಂಟ್ ಮತ್ತಿತರ ಅನುಮೋದಿತ ವಿಧಾನಗಳನ್ನು ಬಳಸುವಂತಹ ಪೌಲ್ಟ್ರಿ ಫಾರ್ಮ್ಗಳಲ್ಲಿ ತಯಾರಾದ ಕೋಳಿ ಮಾಂಸ, ಮೊಟ್ಟೆ ಮತ್ತಿತರ ಉತ್ಪನ್ನಗಳಿಗೆ ನಿಷೇಧ ಇರುವುದಿಲ್ಲ. ಈ ರೀತಿಯ ಪೌಲ್ಟ್ರಿ ಫಾರ್ಮ್ಗಳು ತಮ್ಮ ದೇಶದ ಪ್ರಾಧಿಕಾರಗಳಿಂದ ಮಾನ್ಯಗೊಂಡಿರಬೇಕು. ಎಲ್ಲಾ ಆರೋಗ್ಯ ನಿಯಮಾವಳಿಗಳನ್ನು ಪಾಲಿಸಿರಬೇಕು ಎನ್ನುವ ನಿಯಮ ಇದೆ.

