ಮಂಗಳೂರು ; ಶ್ರೀ ಕ್ಷೇತ್ರ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದಲ್ಲಿ ಮಾರ್ಚ್ 4 ರಿಂದ 8ರವರೆಗೆ ಅದ್ದೂರಿಯಾಗಿ ಬ್ರಹ್ಮಕಲಶೋತ್ಸವ ನಡೆಯಲಿದೆ
1995 ಮತ್ತು 2014ರಲ್ಲಿ ಯಶಸ್ವಿಯಾಗಿ ನೆರವೇರಿದ ಬ್ರಹ್ಮಕಲಶೋತ್ಸವಗಳ ನಂತರ, 2026ರಲ್ಲಿ ನಡೆಯಲಿರುವುದು ನಮ್ಮ ದೇವಸ್ಥಾನದ 3ನೇ ಬ್ರಹ್ಮಕಲಶೋತ್ಸವವಾಗಿದೆ ಎಂದು ದೇವಸ್ಥಾನದ ಕಾರ್ಯಧ್ಯಕ್ಷರಾದ ವಾಮನ ಇಡ್ಯಾರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬ್ರಹ್ಮಕಲಶೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು ದೇವಸ್ಥಾನದ ಸುತ್ತಲೂ ಇಂಟರ್ ಲಾಕ್ ಅಳವಡಿಕೆ ದೇವಳದ ಹೊರಾಂಗಣ ಪ್ರದಕ್ಷಿಣೆ ಸುಲಭ ಸಾಧ್ಯವಾಗಲಿದೆ ಎಂದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲು ಮುತುವರ್ಜಿಯಲ್ಲಿ ಎಂಎಲ್ ಸಿ ನಿಧಿಯ ಮೂಲಕ ದೇವಸ್ಥಾನದ ಎದುರು ಭಾಗದಲ್ಲಿ 20 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದ್ದು.ಶಾಸಕ ಶ್ರೀ ಉಮಾನಾಥ ಕೋಟ್ಯಾನ್ ಅವರ ವತಿಯಿಂದ ಹಳೆಯಂಗಡಿ ರಸ್ತೆಯಿಂದ ಸಸಿಹಿತ್ತು ರಸ್ತೆವರೆಗೆ 10 ಲಕ್ಷ ಅನುದಾನದಡಿಯಲ್ಲಿ ಡಾಮರೀಕರಣ ಮಾಡಲಾಗಿದೆ ಎಂದರು.

ಹಳೆಯಂಗಡಿ ಗ್ರಾಮ ಪಂಚಾಯತ್ ವತಿಯಿಂದ 4 ಲಕ್ಷ ವೆಚ್ಚದಲ್ಲಿ ದೇವಸ್ಥಾನದ ಮುಂಭಾಗದ ಚರಂಡಿ ದುರಸ್ತಿ ಹಾಗೂ 1.5 ಲಕ್ಷ ವೆಚ್ಚದಲ್ಲಿ ಹೈಮಾಸ್ಟ್ ಬೀದಿ ದೀಪ ಅಳವಡಿಕೆ ಮಾಡಲಾಗಿದ್ದು ದಾನಿಗಳ ನೆರವಿನಿಂದ ಸುಮಾರು 75 ಲಕ್ಷ ವೆಚ್ಚದಲ್ಲಿ ದೇವಳದ ಎರಡು ಪ್ರಧಾನ ಗೋಪುರಗಳ ಪುನರ್ನವೀಕರಣ ಮಾಡಲಾಗಿದೆ
ದಾನಿಗಳ ನೆರವಿನಿಂದ ದೇವಸ್ಥಾನದ ಗರ್ಭಗುಡಿ, ಧ್ವಜಸ್ತಂಭ ಹಾಗೂ ಹೂ ಹಾಕುವ ಕಲ್ಲುಗಳಿಗೆ ತಾಮ್ರದ ಹೊದಿಕೆ ಸುಮಾರು ₹30 ಲಕ್ಷ ವೆಚ್ಚವಾಗಿದ್ದು ಗರ್ಭಗುಡಿಯ ಬಾಗಿಲಿನ ಚೌಕಟ್ಟುಗಳಿಗೆ ಸುಮಾರು 40 ಲಕ್ಷ ವೆಚ್ಚದಲ್ಲಿ ಬೆಳ್ಳಿಯ ಹೊದಿಕೆ ಹೊರಿಸಲಾಗಿದೆ ಎಂದು ಬ್ರಹ್ಮ ಕಲಶೋತ್ಸವದ ಅಧ್ಯಕ್ಷರಾದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ರವರು ತಿಳಿಸಿದರು.
ದೇವಸ್ಥಾನದ ಹೊರಾಂಗಣ ಒಳಾಂಗಣ ಸುತ್ತು ಪೌಳಿಗಳಿಗೆ ಖ್ಯಾತ ಶಿಲ್ಪಿ ಸುಧಾಕರ್ ಶಿವಮೊಗ್ಗ ಇವರ ನೇತೃತ್ವದಲ್ಲಿ ನೂತನ ವಿನ್ಯಾಸದ ಕಾರ್ನಿಷ್ ಕೆಲಸ ಜೊತೆಗೆ 20 ವಿವಿಧ ದೇವರುಗಳ ಮೂರ್ತಿ ರಚನೆ ಸುಮಾರು ₹50 ಲಕ್ಷ ವೆಚ್ಚದಲ್ಲಿ ನಡೆದಿದ್ದು, ದೇವಸ್ಥಾನದ ಒಳಾಂಗಣದ ಗೋಡೆಗಳಿಗೆ ಸುಮಾರು ₹15 ಲಕ್ಷ ವೆಚ್ಚದಲ್ಲಿ ಗ್ರಾನೈಟ್ ಅಳವಡಿಸಲಾಗಿದೆ ಎಂದರು.
ಸುಮಾರು ₹25 ಲಕ್ಷ ವೆಚ್ಚದಲ್ಲಿ ದೇವಸ್ಥಾನದ ಸುತ್ತಲೂ ಆವರಣ ಗೋಡೆ ನಿರ್ಮಾಣ ಮತ್ತು ಅನ್ನಛತ್ರಕ್ಕೆ ಹಾಗೂ ಸುತ್ತಲಿನ ಕಂಪೌಂಡ್ ಹಾಗೂ ಬಣ್ಣದ ಕೆಲಸ, 11,12 ವರ್ಷಗಳ ನಂತರ ದೇವಸ್ಥಾನದ ಒಳಗಿನ ಮರಳು ಬದಲಾವಣೆ ಮಹಾ ಕರಸೇವೆಯ ಮೂಲಕ ನೆರವೇರಿಸಲಾಗಿದೆ ಎಂದರು.

ಬ್ರಹ್ಮಕಲಶೋತ್ಸವದ ಸಂಧರ್ಭ ವಿಶೇಷ ಕಾರ್ಯಕ್ರಮಗಳು
ಮಾರ್ಚ್ 4 ರಂದು ಬುಧವಾದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕರಿಂದ ದೀಪ ಪ್ರಜ್ವಲನೆಯ ಮೂಲಕ ಉಗ್ರಾಣ ಮುಹೂರ್ತ ನಡೆಯಲಿದ್ದು ಬಳಿಕ ಹಸಿರು ಹೊರಕಾಣಿಕೆಯ ಸಮರ್ಪಣೋತ್ಸವದ ಭವ್ಯ ಶೋಭಾಯಾತ್ರೆ ಹಾಗೂ ಕದಿಕೆ ಭಂಡಾರ ಮಂದಿರದಿಂದ ಭಂಡಾರ ಆಗಮಿಸಲಿದೆ.
ಮಾರ್ಚ್ 5 ರಂದು ಸಾಂಸ್ಕೃತಿಕ ಕಾರ್ಯಕ್ರಮ,ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ರಾತ್ರಿ 8 ಗಂಟೆಗೆ ಬೊಳ್ಳಿ ಮಲೆತ ಶಿವಶಕ್ತಿಲು ಎಂಬ ತುಳು ಪೌರಣಿಕ ನಾಟಕ ನಡೆಯಲಿದೆ.
ಮಾರ್ಚ್ 6 ರಂದು ಬೆಳಿಗ್ಗೆ ಆಯುತ ಕದಳೀಯಾಗ, ಗಣಯಾಗ,ಸುವಾಸಿನಿ ಆರಾಧನೆ, ಕನ್ನಿಕ ಆರಾಧನೆ ಹಾಗೂ ಸಂಜೆ ಮಹಿಳಾ ವೃಂದದಿಂದ ಸಾಮೂಹಿಕ ಕುಂಕುಮಾರ್ಚನೆ ಸೇವೆ ನಡೆಯಲಿದೆ. ಸಂಜೆ 6 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಮಾರ್ಚ್ 7 ರಂದು ಪ್ರಾಯಶ್ಚಿತ್ತ ಹೋಮ, ತತ್ವಹೋಮ, ತತ್ವಕಲಶ, ಗಣಯಾಗ, ಸಂಜೆ 4.30 ರಿಂದ ಬ್ರಹ್ಮಕಲಶ ಮಂಡಲ ರಚನೆ, ಕಲಶಾಧಿವಾಸ ಹಾಗೂ ಆಧಿವಾಸ ಹೋಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಮಾರ್ಚ್ 8 ರಂದು ಬೆಳಿಗ್ಗೆ ಚಂಡಿಕಾಯಾಗ,ವೃಷಭ ಲಗ್ನ ಮುಹೂರ್ತದಲ್ಲಿ ಬ್ರಹ್ಮಕಲಾಶಾಭಿಷೇಕ, ಮಹಾಪೂಜೆ , ಪಲ್ಲಪೂಜೆ ಹಾಗೂ ನಾಲ್ಕೂ ದಿನಗಳ ಕಾಲ ಮಹಾ ಅನ್ನಸಂತರ್ಪಣೆ ಹಾಗೂ ಮಾರ್ಚ್ 8 ರಂದು ಸಂಜೆ ಚಕ್ರವರ್ತಿ ಸೂಲಿಬೆಲೆಯವರ ಮುಂದಾಳತ್ವದಲ್ಲಿ ಕಡಲ ಮಾತೆಗೆ ಗಂಗಾರತಿ ನಡೆಯಲಿದೆ.
ಪ್ಲಾಸ್ಟಿಕ್ ಮುಕ್ತ ಬ್ರಹ್ಮಕಲಶೋತ್ಸವಕ್ಕೆ ಆದ್ಯತೆ ನೀಡಲಾಗಿದ್ದು ನಳಿನ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಅನೇಕ ಬ್ರಹ್ಮಕಲಶೋತ್ಸವಗಳ ಅನುಭವ ಹೊಂದಿರುವ ನೇತಾರರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಭಕ್ತರಿಗೆ ಬೆಳಗ್ಗೆ ಹಾಗು ಸಂಜೆ ಎರಡು ಹೊತ್ತು ಉಪಹಾರ ಹಾಗೂ ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಮಕ್ಕಳಿಗಾಗಿ ಆಟೋಟ ಚಟುವಟಿಕೆಗಳು. ಬೀಚ್ ಬದಿಯಲ್ಲಿ ವ್ಯಾಪಾರ ಮಳಿಗೆಗಳು, ಹಾಗೂ ಸುಮಾರು 10 ಎಕ್ರೆ ವಿಸ್ತೀರ್ಣದ ವಿಶಾಲ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.


