ಮಂಗಳೂರು : ಇರಾನ್ – ಅಮೆರಿಕಾ ನಡುವಿನ ಉದ್ವಿಗ್ನ ಪರಿಸ್ಥಿತಿ ಮತ್ತು ಅಮೆರಿಕಾ-ಇಸ್ರೇಲ್ ಸಂಯುಕ್ತ ದಾಳಿಗಳ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದ ವಾಯುಪ್ರದೇಶಗಳು (ಇರಾನ್, ಇರಾಕ್, ಇಸ್ರೇಲ್, ಜೋರ್ಡಾನ್, ಕುವೈತ್, ಬಹ್ರೈನ್, ಯುಎಇ ಇತ್ಯಾದಿ) ತಾತ್ಕಾಲಿಕವಾಗಿ ಮುಚ್ಚಿವೆ. ಇದರಿಂದಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗಲ್ಫ್ ದೇಶಗಳಿಗೆ (ದುಬೈ, ದೋಹಾ, ಅಬುಧಾಬಿ, ದಮ್ಮಾಮ್, ಕುವೈತ್) ಹಾರುವ ಹಲವು ವಿಮಾನಗಳ ಸೇವೆಗಳು ತೀವ್ರವಾಗಿ ಪ್ರಭಾವಿತವಾಗಿವೆ. ಕೆಲವು ವಿಮಾನಗಳು ರದ್ದಾಗಿವೆ, ಕೆಲವು ಟೇಕಾಫ್ ಬಳಿಕ ಮರಳಿ ಬಂದಿವೆ ಅಥವಾ ಬೇರೆಡೆಗೆ ಡೈವರ್ಟ್ ಆಗಿವೆ.
ಮಧ್ಯಪ್ರಾಚ್ಯದಲ್ಲಿ ವಿಮಾನ ಸಂಚಾರ ಸ್ಥಗಿತಗೊಂಡಿರುವುದರಿಂದ ಗಲ್ಫ್ನಿಂದ ಮಂಗಳೂರಿಗೆ ಬರಬೇಕಿದ್ದ ವಿಮಾನಗಳೂ ರದ್ದಾಗಿವೆ. ಇದರ ಪರಿಣಾಮವಾಗಿ ದುಬೈ ಮತ್ತು ಇತರ ಗಲ್ಫ್ ರಾಷ್ಟ್ರಗಳಲ್ಲಿ ಸಾವಿರಾರು ಪ್ರಯಾಣಿಕರು ಸಿಲುಕಿದ್ದಾರೆ. ಮಂಗಳೂರಿನಿಂದ ಹಲವು ಕನ್ನಡಿಗರು ವಿಶೇಷವಾಗಿ ಪ್ರಭಾವಿತರಾಗಿದ್ದು, ದುಬೈಗೆ ಪ್ರವಾಸಕ್ಕೆಂದು ತೆರಳಿದ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ರದ್ದು/ಡೈವರ್ಟ್ ಆದ ಮುಖ್ಯ ವಿಮಾನಗಳ ವಿವರ (ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ) :
ಮಂಗಳೂರಿನಿಂದ ಹೊರಡಬೇಕಿದ್ದ ವಿಮಾನಗಳು :
- IX 831 (ಮಂಗಳೂರು–ದುಬೈ): 13:20ಕ್ಕೆ ಹೊರಡಬೇಕಿದ್ದ ವಿಮಾನ ಟೇಕಾಫ್ ಬಳಿಕ ಮರಳಿ ಬಂದು ರದ್ದು (174 ಪ್ರಯಾಣಿಕರು + 6 ಸಿಬ್ಬಂದಿ ಸುರಕ್ಷಿತವಾಗಿ ಇಳಿಸಲಾಗಿದೆ).
- IX 847 (ಮಂಗಳೂರು–ದಮ್ಮಾಮ್): 23:10ಕ್ಕೆ ರದ್ದು.
- IX 813 (ಮಂಗಳೂರು–ದುಬೈ): 20:15ಕ್ಕೆ ರದ್ದು.
- IX 851 (ಮಂಗಳೂರು–ಕುವೈತ್): 22:05ಕ್ಕೆ ರದ್ದು.
- IX 815 (ಮಂಗಳೂರು–ಅಬುಧಾಬಿ): 23:20ಕ್ಕೆ ರದ್ದು.
- 6E 1467 (ಮಂಗಳೂರು–ದುಬೈ): 19:15ಕ್ಕೆ ರದ್ದು.
- IX 821 (ಮಂಗಳೂರು–ದೋಹಾ): ಮುಂಬೈಗೆ ಡೈವರ್ಟ್.
ಮಂಗಳೂರಿಗೆ ಆಗಮಿಸಬೇಕಿದ್ದ ವಿಮಾನಗಳು :
- IX 822 (ದೋಹಾ–ಮಂಗಳೂರು): 20:45 ಆಗಮನ; ರದ್ದು.
- IX 832 (ದುಬೈ–ಮಂಗಳೂರು): 22:10 ಆಗಮನ; ರದ್ದು.

